ಕಸಾಪ ಶತಮಾನೋತ್ಸವದ ಕನ್ನಡ ವರ್ಷಾಚರಣೆ ಕಾರ್ಯಕ್ರಮ

0
17
loading...

ಯಲ್ಲಾಪುರ,29: ಸಾಹಿತ್ಯ ಕೇವಲ ತರಬೇತಿಯಿಂದ ಬರುವುದಲ್ಲ. ಅದು ವ್ಯಕ್ತಿಯಲ್ಲಿರುವ ಭಾವನೆ, ಪ್ರತಿಭೆ ಅಭಿರುಚಿಯಿಂದ ಮಾತ್ರ ಹುಟ್ಟುವುದು. ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸಿಕೊಂಡು ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಸಾಹಿತ್ಯಾಸಕ್ತರು ಕೈಜೋಡಿಸಬೇಕೆಂದು ಆರಕ್ಷಕ ನಿರೀಕ್ಷಕ ವಿಜಯ ಬಿರಾದಾರ ಹೇಳಿದರು. ಅವರು ತಾಲೂಕಿನ ತೇಲಂಗಾರ ಮೈತ್ರಿ ಸಭಾಭವನದಲ್ಲಿ ಕಸಾಪ ಜಿಲ್ಲಾ ಹಾಗೂ ತಾಲೂಕು ಘಟಕ, ಮೈತ್ರಿ ಕಲಾ ಬಳಗಗಳ ಸಂಯುಕ್ತ ಆಶ್ರಯದಲ್ಲಿ ಕಸಾಪ ಶತಮಾನೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕನ್ನಡ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಲದ ಸಾಹಿತ್ಯಕ್ಕೂ, ಇಂದಿನ ಸಾಹಿತ್ಯಕ್ಕೂ ತುಂಬಾ ವ್ಯತ್ಯಾಸ ಇದೆ. ಕಾಲ, ಸಾಹಿತ್ಯ ಭಿನ್ನವಾದರೂ ಎಲ್ಲಾ ಕಾಲಕ್ಕೂ ಸಲ್ಲುವ ಮೌಲ್ಯಯುತ ಸಾಹಿತ್ಯವನ್ನು ರಚಿಸುವತ್ತ ಸಾಹಿತಿಗಳು ಒಲವು ತೋರಬೇಕು.
ವಿವಿಧ ಕ್ಷೇತ್ರಗಳ ಸಾಧಕರಾದ ಬೀರಣ್ಣ ನಾಯಕ ಮೋಗಟಾ, ರಾಮಕೃಷ್ಣ ಭಟ್ಟ ದುಂಢಿ, ಡಾ. ಜಿ. ಪಿ. ಭಟ್ಟ ಕಣ್ಣಿಮನೆ, ಎಂ. ಎನ್. ಹೆಗಡೆ ಹಳವಳ್ಳಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ರೋಹಿದಾಸ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ನಾಟಕಕಾರ ಟಿ. ವಿ. ಕೋಮಾರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಕೇಶವ ದೇವಾಂಗ, ಗ್ರಾ.ಪಂ ಅಧ್ಯಕ್ಷ ಗಜಾನನ ಭಟ್ಟ, ಕಸಾಪ ಜಿಲ್ಲಾ ಕಾರ್ಯದರ್ಶಿ ಪಿ. ಆರ್. ನಾಯ್ಕ, ಜಿ. ಆರ್. ಹೆಗಡೆ, ಪುಟ್ಟು ಕುಲಕರ್ಣಿ, ಬಿ. ಎನ್. ವಾಸರೆ, ಕಸಾಪ ತಾಲೂಕಾಧ್ಯಕ್ಷ ಶ್ರೀರಂಗ ಕಟ್ಟಿ, ಕಾರ್ಯದರ್ಶಿ ಸುಬ್ರಾಯ ಬಿದ್ರೆಮನೆ, ಮೈತ್ರಿಕಲಾ ಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ, ಸತ್ಯನಾರಾಯಣ ಚಿಮನಳ್ಳಿ ಇತರರಿದ್ದರು.

loading...

LEAVE A REPLY

Please enter your comment!
Please enter your name here