ಗಣಕೀಕೃತ ಬೆಳೆ ಧೃಡೀಕರಣ ಪತ್ರ ಕಡ್ಡಾಯ

0
91
loading...

 

ಕಾರವಾರ ಅ.31 : ತೋಟಗಾರಿಕೆ ಇಲಾಖೆಯಿಂದ 2015-16 ನೇ ಸಾಲಿನ ಫಲಾನುಭವಿ ಯೋಜನೆಗಳ ಲಾಭ ಪಡೆಯಲು ಗಣಕೀಕೃತ ಬೆಳೆ ಧೃಡೀಕರಣ ಪತ್ರ ಕಡ್ಡಾಯಗೊಳಿಸಲಾಗಿದೆ.
ತೋಟಗಾರಿಕೆ ಇಲಾಖೆಯು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸುವುದಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ಫಲಾನುಭವಿ ಆಧಾರಿತ ಯೋಜನೆಗಳ ಪ್ರಯೋಜನವನ್ನು ರಐತರು ಪಡೆಯಬೇಕಾದರೆ ಅರ್ಜಿದಾರರ ಹೆಸರಿನಲ್ಲಿರುವ ಪಹಣಿಯು ಬೆಳೆಗಳ ಹೆಸರನ್ನು ಹೋಂದಿರಬೇಕಾಗಿರುತ್ತದೆ. ಹೀಗಾಗಿ ತೋಟಗಾರಿಕೆ ಇಲಾಖೆಯ ಹಮ್ಮಿಕೊಂಡಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾದರೆ ಆಯಾ ಸಾಲಿನಲ್ಲಿ ಋತುಮಾನಕ್ಕನುಗುಣವಾಗಿ ಬೆಳೆದ ತೋಟಗಾರಿಕೆ ಬೆಳೆಗಳ ಮಾಹಿತಿಯನ್ನು ಪಹಣಿಯಲ್ಲಿ ನಮೂದಿಸುವುದು ಅತ್ಯಗತ್ಯವಾಗಿರುತ್ತದೆ. ಇದರಿಂದ ತೋಟಗಾರಿಕಾ ಬೆಳೆಗಳ ನಿಖರ ಅಂಕಿ ಅಂಶಗಳು ದೊರೆಯಲಿದ್ದು ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲು ಸಹಾಯವಾಗಲಿದೆ. ಅಲ್ಲದೆ ರೈತರು ಯೋಜನೆಗಳ ಅನುಕೂಲ ಪಡೆಯಲು, ಬೆಳೆ ವಿಮಾ ಯೋಜನೆ ಹಾಗೂ ಸರ್ಕಾರದ ಮಟ್ಟದಲ್ಲಿ ಹೆಚ್ಚಾದ ತೋಟಗಾರಿಕೆ ಪ್ರದೇಶ ಮತ್ತು ಉತ್ಪಾದನೆಯನ್ನು ದಾಖಲಿಸುವುದರ ಮೂಲಕ ಮಾರುಕಟ್ಟೆಯ ಬೆಲೆ ನಿಯಂತ್ರಣದ ಬಗ್ಗೆ ಕ್ರಮ ವಹಿಸಲು ಅನುಕೂಲವಾಗಲಿದೆ.
ರೈತರಿಗೆ ಗಣಕೀಕೃತ ಬೆಳೆ ದೃಡೀಕರಣ ಪತ್ರವನ್ನು ನೀಡಿ, ನಂತÀರ ಪಹಣಿಯಲ್ಲಿ ದಾಖಲಾಗುವಂತೆ ವೆಬ್ ಆಧಾರಿತ ತಂತ್ರಾಂಶವನ್ನು ಭೂಮಿ ಉಸ್ತುವಾರಿ ಕೋಶದಿಂದ ಅಭಿವೃದ್ಧಿ ಪಡಿಸಲಾಗಿರುತ್ತದೆ. ಸದರಿ ತಂತ್ರಾಂಶವು ಜಿಲ್ಲೆಯ ಎಲ್ಲಾ ನಾಡಕಚೇರಿಗಳ ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಕಾರ್ಯಾಚರಣೆಯಲಿದೆ.
ರೈತರು ತಮ್ಮ ಗಣಕೀಕೃತ ಬೆಳೆ ದೃಢೀಕರಣ ಪತ್ರವನ್ನು ನಾಡಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದು. ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿನ ಅಧಿಕಾರಿಗಳು ಅರ್ಜಿಗಳನ್ನು ಸ್ವೀಕರಿಸದಿದ್ದಲ್ಲಿ ಅಥವಾ ಗಣಕೀಕೃತ ಬೆಳೆ ದೃಢೀಕರಣ ಪತ್ರವನ್ನು ನೀಡುವಲ್ಲಿ ವಿಳಂಬ ಮಾಡಿದ್ದಲ್ಲಿ ಸಂಬಂಧಿಸಿದ ತಾಲ್ಲೂಕಾ ಹಿರಿಯ/ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.

loading...

LEAVE A REPLY

Please enter your comment!
Please enter your name here