ಗ್ರಂಥಾಲಯ ಸಪ್ತಾಹ : ಸ್ಪರ್ಧೆ

0
51
loading...

 

ಶಿರಸಿ,31: ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಗ್ರಂಥಾಲಯ ಸಪ್ತಾಹದ ಪ್ರಯುಕ್ತ ಪ್ರತಿ ವರ್ಷದಂತೆ ಹಮ್ಮಿಕೊಳ್ಳಲಾಗಿದೆ ಎಂದು ಇಲ್ಲಿಯ ಸಾರ್ವಜನಿಕ ಗ್ರಂಥಾಲಯ ಶಾಖೆ ಮತ್ತು ಓದುಗರ ವೇದಿಕೆ ತಿಳಿಸಿವೆ.
1ರಿಂದ 4ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮುಕ್ತವಾದ ಚಿತ್ರಕಲಾ ಸ್ಪರ್ಧೆ ಮತ್ತು 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಭಾವಗೀತೆ ಸ್ಪರ್ಧೆಯನ್ನು ನವೆಂಬರ್ 7ರಂದು ಆಯೋಜಿಸಲಾಗಿದೆ. ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಲಿಖಿತ ರಸಪ್ರಶ್ನೆ ಸ್ಪರ್ಧೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನನ್ನ ಕಲ್ಪನೆಯಲ್ಲಿ ಸ್ವಚ್ಛ ಭಾರತ ಅಭಿಯಾನ ವಿಷಯವಾಗಿ ಭಾಷಣ ಸ್ಪರ್ಧೆಯನ್ನು ನವೆಂಬರ್ 8ರಂದು ಏರ್ಪಡಿಸಲಾಗಿದೆ.
ಪ್ರತಿ ವಿಭಾಗದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಿಂದ ತಲಾ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಬಹುದು. ಶಾಲೆಯ ಮೂಲಕ ಸ್ಪರ್ಧಾಳು ಹೆಸರನ್ನು ನವೆಂಬರ್ 5ರೊಳಗೆ ಕಳಿಸಬೇಕು. ಹೆಚ್ಚಿನ ವಿವರಗಳಿಗೆ ಜಿಲ್ಲಾ ಕೇಂದ್ರ ಗ್ರಂಥಾಲಯ ಶಾಖೆ, ನಗರಸಭೆ ಹಿಂಭಾಗ, ವಿಕಾಸಾಶ್ರಮ ಮೈದಾನ ಪಕ್ಕ, ಶಿರಸಿ (ದೂ. 08384=228985, 9343381834) ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

loading...

LEAVE A REPLY

Please enter your comment!
Please enter your name here