ಗ್ರಾಮಪಂಚಾಯ್ತಿ ನೌಕರರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ

0
14
loading...

 

ಬೆಳಗಾವಿ17; ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮಪಂಚಾಯತಿಗಳಲ್ಲಿ ಸಿಪಾಯಿ ಸೇವೆ ನಿರ್ವಹಿಸುವವರ ಮೇಲೆ ನಡೆಯುವ ಶೋಷಣೆ ದೌರ್ಜನ್ಯಗಳನ್ನು ಖಂಡಿಸಿ ಭಾರತರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಯುವ ಮಂಚ್ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.

ನಂದಗಡ ಗ್ರಾಪಂ ಕಾರ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಅಣ್ಣಪ್ಪ ರಾಯಪ್ಪ ನಂದಗಡಕರ ಎಂಬುವನಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ 14 ತಿಂಗಳು ಸಂಬಳ ಬರಲಿಲ್ಲ. ಇದರಿಂದ ಸಂಸಾರದ ಜವಾಬ್ದಾರಿ ಹೊರಲಾಗದೆ ತೀವ್ರ ಮಾನಸಿಕ ಖಿನ್ನತೆಗೆ ಒಳಗಾದ ರಾಯಪ್ಪ ಇತ್ತೀಚೆಗೆ ಕಚೇರಿಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತನ ಆತ್ಮಹತ್ಯೆಗೆ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯವೇ ಕಾರಣವಾಗಿದ್ದು, ಮೃತ ರಾಯಣ್ಣನ ಕುಟುಂಬಕ್ಕೆ ಪರಿಹಾರಧನ, ಆತನ ಕುಟುಂಬದ ಓವ್ ಸದಸ್ಯರಿಗೆ ಸಿಪಾಯಿ ಹುದ್ದೆ ಹಾಗೂ ಈ ಘಟನೆಗೆ ಕಾರಣ ಕರ್ತರಾದವರಿಗೆ ಅಮಾನತು ಶಿಕ್ಷೆ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಅದೇ ಮಾದರಿಯಲ್ಲಿ ಕಿಣಿಯೇ ಗ್ರಾಮ ಪಂಚಾಯತಿನ ಮಲ್ಲಪ್ಪ ಬಾಬು ಹರಿಜನ ಎಂಬುವನನ್ನು ಸುಳ್ಳು ಆರೋಪದ ಮೇಲೆ ಕೆಲಸದಿಂದ ತೆಗೆದು ಹಾಕಿದ್ದು, ಆತನ ಮೇಲೆ ದೌರ್ಜನ್ಯ ಎಸಗಲಾಗಿದೆ. ಹೀಗೆ ಆತನ ಮೇಲೆ ದೌರ್ಜನ್ಯ ಎಸಗಿದವರಿಗೆ ಕಾನೂನು ಮೂಲಕ ಶಿಕ್ಷೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ಸಿ ಭಾರತರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಯುವ ಮಂಚ್ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ನೀಡಿದ ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗಜಾನನ ದೇವರಮನಿ, ಕಾರ್ಯಕರ್ತರಾದ ಸಿದ್ರಾಯಿ ಮೇತ್ರಿ, ಸಂತೋಷ ಹಲಗೇಕರ, ಸಚಿನ ರಾಮಚನ್ನವರ, ಗಜಾನನ ಸುಳಗೇಕರ, ಅನಿಲ ಕಾಂಬ್ಳೆ, ಸೂರಜ ಕೋಲಕಾರ, ಗೌತಮ ಲೋಂಡೆ ಮತ್ತಿತರರಿದ್ದರು.

loading...

LEAVE A REPLY

Please enter your comment!
Please enter your name here