ಗ್ರಾ.ಪಂ. ಸದಸ್ಯರಿಗೆ ಅರಣ್ಯ ಹಕ್ಕು ಕಾಯಿದೆ ತರಬೇತಿ, ಪಂಚಾಯತ ರಾಜ್ ಸಚಿವರಿಗೆ ಮನವಿ

0
17
loading...

30 SDP 4

ಸಿದ್ದಾಪುರ,31: ಅರಣ್ಯ ಹಕ್ಕು ಕಾಯಿದೆ ಜಾಗೃತಾ ಅಭಿಯಾನದ ಅಂಗವಾಗಿ ಗ್ರಾಮ ಪಂಚಾಯತ ಹಾಗೂ ಇನ್ನಿತರ ಸ್ಥಳಿಯ ಸಂಸ್ಥೆಯ ಸುಮಾರು ಎರಡುಸಾವಿರ ಜನ ಪ್ರತಿನಿಧಿಗಳಿಗೆ ಅರಣ್ಯ ಹಕ್ಕು ಕಾಯಿದೆಯ ಕುರಿತು ತರಬೇತಿ ಮತ್ತು ಶಿಬಿರವನ್ನು ಸಂಘಟಿಸಲು ನಿರ್ಧರಿಸಲಾಗಿದ್ದು, ಈ ದಿಶೆಯಲ್ಲಿ ಪಂಚಾಯತ ರಾಜ್ ಇಲಾಖೆಯ ಸಹಕಾರ ನೀಡಬೇಕೆಂದು ಪಂಚಾಯತ ರಾಜ್ ಸಚಿವರಾದ ಹೆಚ್.ಕೆ.ಪಾಟೀಲ್ ಅವರಿಗೆ ಬೆಂಗಳೂರಿನ ಗೃಹ ಕಚೇರಿಯಲ್ಲಿ ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ ನೇತೃತ್ವದ ನಿಯೋಗವು ಭೇಟಿಯಾಗಿ ಮನವಿಯನ್ನು ಸಲ್ಲಿಸಿರುವದಾಗಿ ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಸ್ಥಳಿಕವಾಗಿ ಗ್ರಾಮಗಳಲ್ಲಿ ಅರ್ಜಿಗಳನ್ನು ತೀವ್ರತರವಾಗಿ ಚಾಲನೆಗೊಳಿಸಲು ಸ್ಥಳಿಯ ಜನಪ್ರತಿನಿಧಿಗಳನ್ನು ಪಾಲ್ಗೊಳಿಸುವ ದಿಶೆಯಲ್ಲಿ ಹಾಗೂ ಅವರ ಪಾತ್ರ ಮಹತ್ವವಾಗಿದೆ ಎಂದು ಮನಗಂಡು ಹೋರಾಟ ಸಮಿತಿಯು ಮುಂದಿನ 30 ದಿನಗಳ ಒಳಗೆ ಸದ್ರಿ ಕಾರ್ಯಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ. ಸದ್ರಿ ಕಾರ್ಯಯೋಜನೆಯಲ್ಲಿ ಜಿಲ್ಲಾದ್ಯಂತ 150 ಗ್ರಾಮ ಪಂಚಾಯತ ವ್ಯಾಪ್ತಿಯ ಜನಪ್ರತಿನಿಧಿಗಳಿಗೆ ಅರಣ್ಯ ಹಕ್ಕು ಕಾಯಿದೆ ಕುರಿತು ಜನಜಾಗೃತಿ ಅಭಿಯಾನ ಸಂಘಟಿಸಲು ನಿರ್ಧರಿಸಲಾಗಿದ್ದು, ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯವು ಡಿಸೆಂಬರ್ 31 ಅರಣ್ಯ ಹಕ್ಕು ಕಾಯಿದೆ ಮಂಜೂರಿಗೆ ಕಾಲಮಾನದಂಡ ನಿಗದಿಗೊಳಿಸಿರುವಂಥ ಹಿನ್ನೆಲೆಯಲ್ಲಿ ಸದ್ರಿ ಕಾರ್ಯಕ್ರಮ ಸಂಘಟಿಸಲಾಗಿರುವುದರಿಂದ ಇಲಾಖೆಯ ಸಹಕಾರವನ್ನು ಕೋರಿ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಸದ್ರಿ ಅಭಿಯಾನಕ್ಕೆ ಶಿರಸಿಯಲ್ಲಿ ನವೆಂಬರ್ 7 ರಂದು ಜರುಗುವ ರಾಜ್ಯ ಮಟ್ಟದ ಅರಣ್ಯವಾಸಿಗಳ ಸಮಾವೇಶದ ಅಭಿಯಾನದಲ್ಲಿ ಚಾಲನೆ ನೀಡಲಾಗುವುದೆಂದು ತಿಳಿಸಿದ್ದಾರೆ. ಸದ್ರಿ ಅಭಿಯಾನದಲ್ಲಿ ಅರಣ್ಯ ಹಕ್ಕು ಅರ್ಜಿಗಳನ್ನು ತೀವ್ರತರದ ಚಾಲನೆ ಕೊಡುವಂಥ ಹಿನ್ನೆಲೆಯಲ್ಲಿ ಗ್ರಾಮ ಅರಣ್ಯ ಹಕ್ಕು ಸಮಿತಿ ಮತ್ತು ಅಧಿಕಾರಿಗಳೊಂದಿಗೆ ಇರುವ ಕಾನೂನಾತ್ಮಕ ಗೊಂದಲವನ್ನು ನಿವಾರಿಸುವುದು, ದಾಖಲೆಗಳನ್ನು ಸಂಗ್ರಹಿಸುವ ವಿಧಿ-ವಿಧಾನವನ್ನು, ಅರಣ್ಯ ಸಾಗುವಳಿ ಹಕ್ಕಿನ ಮಂಜೂರಿಗೆ ಸಂಬಂಧಪಟ್ಟಂತ ವಿಧಿ-ವಿಧಾನ ಮತ್ತು ನೀತಿಗಳನ್ನು ಪ್ರಚುರಪಡಿಸಲಾಗುವುದೆಂದು ಚರ್ಚೆಯ ಸಂದರ್ಭದಲ್ಲಿ ಸಚಿವರಿಗೆ ಮನವರಿಕೆ ಮಾಡಲಾಯಿತು. ಸದ್ರಿ ಅಭಿಯಾನದಲ್ಲಿ ಕಾನೂನಾತ್ಮಕ ಅಂಶಗಳ ಕರಪತ್ರ, ಮಂಜೂರಿಯ ಅರ್ಜಿಯ ಪ್ರಕರಣಗಳ ಮಾದರಿಯನ್ನು ಗ್ರಾಮ ಅರಣ್ಯ ಹಕ್ಕು ಸಮಿತಿಗಳಿಗೆ ವಿತರಿಸುವ ಕುರಿತು ಮನವಿಯ ಮೂಲಕ ಸಚಿವರ ಗಮನಕ್ಕೆ ತರಲಾಯಿತು ಎಂದು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here