ಚಕ್ಕಡಿ ಅಪಘಾತ: ಬಾಲಕಿ ಸಾವು

0
24
loading...

ಹಳಿಯಾಳ: ಚಕ್ಕಡಿ ಗಾಡಿ ಎಳೆಯುತ್ತಿದ್ದ ಎತ್ತುಗಳು ಅತಿವೇಗದಿಂದ ಓಡಿ ರಸ್ತೆ ಪಕ್ಕದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಕ್ಕಡಿ ಉರುಳಿ ಬಿದ್ದು ಚಕ್ಕಡಿಯಲ್ಲಿದ್ದ ಓರ್ವ ಬಾಲಕಿ ಮೃತಪಟ್ಟ ದುರ್ಘಟನೆ ಮಂಗಳವಾರ ಬೆಳಿಗ್ಗೆ ಹೊಸವಟ್ನಾಳ ಗ್ರಾಮದಲ್ಲಿ ಜರುಗಿದೆ.
ಕರಿಯಪ್ಪ ಡೊಳ್ಳಿನ ಕುಟುಂಬದವರು ತಮ್ಮ ಗದ್ದೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಚಕ್ಕಡಿ ಅಪಘಾತಕ್ಕೀಡಾಗಿ ಚಕ್ಕಡಿಯಲ್ಲಿದ್ದ ಬಾಲಕಿ ಅಂಕಿತಾ ಗಂಗಪ್ಪಾ ಡೊಳ್ಳಿನ (6) ರಸ್ತೆ ಮೇಲೆ ಬಿದ್ದಳು. ಅವಳ ಮೇಲೆ ಚಕ್ಕಡಿ ಬಿದ್ದ ಕಾರಣ ತಲೆಗೆ ತೀವೃ ಗಾಯವುಂಟಾಯಿತು. ಆಸ್ಪತ್ರೆಗೆ ಕರೆತರುವಾಗ ಅಂಕಿತಾ ಕೊನೆಯುಸಿರೆಳೆದಳು. ಈ ಅಪಘಾತದಲ್ಲಿ ಅಂಕಿತಾಳ ಅಜ್ಜ ಕರಿಯಪ್ಪ, ಅಜ್ಜಿ ರಾಯವ್ವಾ ಹಾಗೂ ಅಕ್ಕ ಅಪೇಕ್ಷಾ ಇವರಿಗೂ ಸಹ ಸಣ್ಣ-ಪುಟ್ಟ ಗಾಯಗಳಾಗಿವೆ.

loading...

LEAVE A REPLY

Please enter your comment!
Please enter your name here