ಜಾತಿಗಿಂತ ನೀತಿಯಿಂದ ಮನುಷ್ಯ ಬೆಳೆಯುತ್ತಾನೆ : ಶಿವರಾಮ ಹೆಬ್ಬಾರ

0
32
loading...

ಮುಂಡಗೋಡ,28: ಸಮಾಜದಲ್ಲಿ ಸಮಾನತೆಯ ಸಂದೇಶ ಸಾರಬೇಕಾದರೆ ಎಲ್ಲರನ್ನು ಸಮಾನವಾಗಿ ಕಾಣಬೇಕಾಗುತ್ತದೆ. ಜಾತಿಗಿಂತ ನೀತಿಯಿಂದ ಮನುಷ್ಯ ಬೆಳೆಯುತ್ತಾನೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು
ಮಂಗಳವಾರ ಇಲ್ಲಿಯ ಗಾಂಧಿನಗರ ಮಹರ್ಷಿ ವಾಲ್ಮೀಕಿ ಗದ್ದುಗೆ ಆವರಣದಲ್ಲಿ ತಾ.ಪಂ ಪ.ಪಂ, ಸಮಾಜಕಲ್ಯಾಣ ಇಲಾಖೆ, ಹಾಗೂ ತಾಲೂಕಿನ ಸಮಸ್ತ ವಾಲ್ಮೀಕಿ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು. ಮಾನವ ಧರ್ಮಕ್ಕೆ ಆದರ್ಶ ದಾರಿ ದೀಪವಾದ ವಾಲ್ಮೀಕಿ ಯಾವುದೇ ಒಂದು ಜಾತಿಗೆ ಮಾತ್ರ ಸೀಮಿತರಲ್ಲ. ಅವರೊಬ್ಬ ವಿಶ್ವ ಮಾನವ. ಸಮಾಜಕ್ಕೆ ನೀಡಿದ ಮಹಾನ ಗ್ರಂಥದಿಂದ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದ ಅವರು, ಯಾವುದೇ ವ್ಯಕ್ತಿಯನ್ನ ಅವನ ಅರ್ಹತೆ, ಸಾಮಥ್ರ್ಯ, ಯೋಗ್ಯತೆ ಹಾಗೂ ಸಾದನೆಯ ಆದಾರದ ಮೇಲೆ ಗುರಿತಿಸಲಾಗುತ್ತದೆ ವಿನಹ ಜಾತಿ ಸಮಾಜದ ಆದಾರದಿಂದಲ್ಲ. ವಾಲ್ಮೀಕಿ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿಯೇ ಅತಿ ಹೆಚ್ಚು ವಾಲ್ಮೀಕಿ ಜನಾಂಗವನ್ನು ಹೊಂದಿರುವ ಮುಂಡಗೋಡ ತಾಲೂಕಿನಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲಾಗುವುದೆಂದು ಹೇಳಿದ ಶಾಸಕರು, ಎಲ್ಲ ಸಮಾಜದ ಜನರ ಉಪಯೋಗಕ್ಕಾಗಿ ಬೃಹತ್ ಸಭಾ ಭವನದ ಅವಶ್ಯಕತೆ ಇದ್ದು, ಮುಂದಿನ ದಿನಗಳಲ್ಲಿ ಸಭಾ ಭವನ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದೆಂದು ಹೇಳಿದರು.
ತಡಸ ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಡಾ. ಶೇಖರ ಸಜ್ಜನ್ ಉಪನ್ಯಾಸ ನೀಡಿದರು. ತಹಸೀಲ್ದಾರ ಅಶೋಕ ಗುರಾಣಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಬಿ.ಎಲ್.ಬೈರವಾಡಗಿ, ತಾ.ಪಂ ಅಧ್ಯಕ್ಷ ಸಂತೋಷ ರಾಠೋಡ, ಪ.ಪಂ ಉಪಾಧ್ಯಕ್ಷೆ ಶಕುಂತಲಾ ತಳವಾರ, ಸದಸ್ಯ ಮುನೇಶ ಕೊರವರ, ವಾಲ್ಮೀಕಿ ಸಮಾಜದ ನಗರ ಘಟಕದ ಅಧ್ಯಕ್ಷ ಚಂದ್ರಪ್ಪ ತಳವಾರ, ಬೇಡರ ವಾಲ್ಮೀಕಿ ಸಮಗ್ರ ಅಭಿವೃದ್ದಿ ಸಂಘದ ಅಧ್ಯಕ್ಷ ಚಂದ್ರಶೇಖರ ನಾಯಕ, ಪರಶುರಾಮ ಬೆಳಗಾವಿ, ದಲಿತ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಚಿದಾನಂದ ಹರಿಜನ, ಡಿ.ಎಸ್.ಎಸ್ ಜಿಲ್ಲಾ ಸಂಚಾಲಕ ಎಸ್.ಪಕ್ಕೀರಪ್ಪ, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಅಶೋಕ ಚಲವಾದಿ, ಬೀಮಣ್ಣ ತಳವಾರ, ರಾಘವೇಂದ್ರ ಮಳಗಿಕರ, ನಾಗಪ್ಪ ನಾಣಪುರ, ಹನ್ಮಂತ ತಳವಾರ, ಶಂಬಣ್ಣ ಕೋಳೂರ ಮುಂತಾದವರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ ಸಾಳುಂಕೆ ಸ್ವಾಗತಿಸಿದರು.
ಮೆರವಣಿಗೆ: ಇದಕ್ಕೂ ಮುನ್ನ ಇಲ್ಲಿಯ ತಹಸೀಲ್ದಾರ ಕಾರ್ಯಾಲಯ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಬಳಿಕ ಸಭಾ ಮಂಟಪ ಪ್ರವೇಶಿಸಿತು.

loading...

LEAVE A REPLY

Please enter your comment!
Please enter your name here