ಜಿಲ್ಲಾ ಮಟ್ಟದ ಕಬ್ಬಡ್ಡಿ ಪಂದ್ಯಾವಳಿ

0
26
loading...

ಹೊನ್ನಾವರ ,27: ರಂದು ನಡೆಯಬೇಕಿದ್ದ ್ಲ ಜಿಲ್ಲಾ ಮಟ್ಟದ ಜ್ಯೂನಿಯರ್ ಹಾಗೂ ಸಬ್ ಜ್ಯೂನಿಯರ್ ಬಾಲಕ ಬಾಲಕಿಯರ ಕಬ್ಬಡ್ಡಿ ಪಂದ್ಯಾವಳಿಯನ್ನು ಅನಿವಾರ್ಯ ಕಾರಣಗಳಿಂದ ದಿ. 31 ಕ್ಕೆ ಮುಂದೂಡಲಾಗಿದೆ.
ದಿ. 31 ಶನಿವಾರ ಬೆಳಿಗ್ಗೆ 9-00 ಘಂಟೆಗೆ ಹೊನ್ನಾವರದ ಸೈಂಟ್ ಥೋಮಸ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಜ್ಯೂನಿಯರ್ ಹಾಗೂ ಸಬ್ ಜ್ಯೂನಿಯರ್ ಬಾಲಕ ಬಾಲಕಿಯರ ಕಬ್ಬಡ್ಡಿ ಪಂದ್ಯಾವಳಿ ಹಾಗೂ ರಾಜ್ಯ ಮಟ್ಟಕ್ಕೆ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಈ ಪಂದ್ಯಾವಳಿಗೆ ಜಿಲ್ಲೆಯ ಆಯಾ ತಾಲೂಕಿನಿಂದ ಆಯ್ಕ್ಕೆಗೊಂಡ ಸುಮಾರು 30 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೊನ್ನಾವರ ತಾಲೂಕ ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ ಅಧ್ಯಕ್ಷರಾದ ಜಿ.ಜಿ. ಶಂಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here