ಜಿ. ಆರ್. ಪಾಂಡೇಶ್ವರ ಶ್ರೇಷ್ಟ ಪತ್ರಕರ್ತ ಪ್ರಶಸ್ತಿ

0
30
loading...

ಹೊನ್ನಾವರ,27 : ಧಾರವಾಡದ ಜಿ.ಆರ್.ಪಾಂಡೇಶ್ವರ ಪ್ರತಿಷ್ಠಾನವು ನೀಡುವ 2014ನೇಯ ಸಾಲಿನ ಪ್ರತಿಷ್ಠಿತ ಜಿ.ಆರ್.ಪಾಂಡೇಶ್ವರ ಶ್ರೇಷ್ಟ ಪತ್ರಕರ್ತ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ “ನಾಗರೀಕ”ವಾರಪತ್ರಿಕೆಯ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರ ಅವರಿಗೆ ನೀಡಲಾಗಿದೆ. ಕಳೆದ ಸುಮಾರು ಮೂರು ದಶಕಗಳಿಂದ ಕೃಷ್ಣಮೂರ್ತಿ ಹೆಬ್ಬಾರರು ನಾಗರೀಕ ವಾರಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಈ ಪ್ರಶಸ್ತಿಯನ್ನು ನವ್ಹೆಂಬರ ತಿಂಗಳ 4ನೇಯ ತಾರೀಖಿನಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸಭಾಂಗಣದಲ್ಲಿ ಬೆಳಿಗ್ಗೆ 11-00 ಘಂಟೆಗೆ ಆಯ್ಕೆ ಸಮಿತಿಯ ಅಧ್ಯಕ್ಷರಾದ ನಾಡೋಜ ಡಾ.ಪಾಟೀಲ ಪುಟ್ಟಪ್ಪನವರು ಪ್ರಧಾನ ಮಾಡಲಿದ್ದಾರೆ.
ಈ ಪ್ರಶಸ್ತಿಯು 5000/- ರೂಗಳ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಕಳೆದ 10 ವರ್ಷಗಳಿಂದ ಈ ಪ್ರಶಸ್ತಿಯನ್ನು ಧಾರವಾಡದ ಪ್ರತಿಷ್ಠಿತ ಜಿ.ಆರ್.ಪಾಂಡೇಶ್ವರ ಪ್ರತಿಷ್ಠಾನವು ನೀಡುತ್ತಾ ಬಂದಿದೆ.

loading...

LEAVE A REPLY

Please enter your comment!
Please enter your name here