ದೇಶದ ಅಭಿವೃದ್ಧಿಯಲ್ಲಿ ಯುವಜನತೆ ಪಾಲುದಾರರು:ಜೋಶಿ

0
177
loading...

ಹುಬ್ಬಳ್ಳಿ,30 : ದೇಶದ ಅರ್ಧದಷ್ಟು ಜನಸಂಖ್ಯೆ ಇರುವ ಯುವ ಸಮೂಹವು ಭವಿಷ್ಯದಲ್ಲಿ ಪ್ರಜೆಗಳು ಮಾತ್ರವಲ್ಲದೇ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಿದ್ದಾರೆ ಎಂದು ನಾಂದೇಡ ಎಸ್.ಆರ್.ಟಿ.ಎಂ. ವಿಶ್ವವಿದ್ಯಾಲಯದ ಡಾ. ಜಯಂತ ಜೋಶಿ ಹೇಳಿದರು.ಎಸ್.ಜೆ.ಎಂ.ವಿ. ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಭಾರತದಲ್ಲಿ ಯುವಕರ ಪಾತ್ರ: ಜವಾಬ್ದಾರಿಗಳು, ಸವಾಲು ಹಾಗು ಕ್ರಾಂತಿ ಮತ್ತು ಜಾಗತೀಕರಣ ಮತ್ತು ಭಾರತದಲ್ಲಿ ಸಾಮಾಜಿಕ ಪ್ರಕ್ರಿಯಗಳು ಎಂಬ ವಿಷಯ ಕುರಿತು ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಜಾಗತೀಕರನದ ಫಲವನ್ನು ದೇಶ ಇದೀಗ ಉಣ್ಣುತ್ತಿದೆ. ಜಾಗತೀಕರಣದಿಂದ ದೇಸದಲ್ಲಿ ಉದ್ಯೋಗಗಳ ಸೃಷ್ಟಿ ಹೆಚ್ಚಳವಾಗಿದೆ. ಪ್ರಧಾನಿ ಮೋದಿಯವರ 3ಎಸ್ ಎಂಬ ಮಂತ್ರವನ್ನು ಅಳವಡಿಸಿಕೊಂಡು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು ಎಂದರು. ಸ್ವಾತಂತ್ರ್ಯ ಪೂರ್ವದಲ್ಲಿನ ಸಮಸ್ಯೆಗಳು ಇಂದಿಗೂ ತಾಂಡವವವಾಡುತ್ತಿವೆ. ಬಡತನ, ನಿರುದ್ಯೋಗ,ಅನಕ್ಷರತೆ ಇತ್ಯಾದಿ ಸಮಸ್ಯೆಗಳು ದೇಶವನ್ನು ಕಾಡುತ್ತಿದ್ದು ಯುವಕರು ಇಂತಹ ಜ್ವಲಂತ ಸಮಸ್ಯಗಳ ನಿವಾರಣೆಯತ್ತ ಗಮನ ಹರಿಸಬೇಕು ಎಂದರು. ಪ್ರೋ.ಗಣೇಶ ಸೋಮಯಾಜಿ ಮಾತನಾಡಿ ಜಾಗತೀಕರಣ ಎನ್ನುವದು ಸಮಾಜದ ಭಾಗವೇ ಆಗಿದ್ದು, ಐತಿಹಾಸಿಕ ಕಲ್ಪನೆಯಾಗಿದೆ ಅದನ್ನು ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳ ಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಅರವಿಂದ ಕುಬಸದ ಮಾತನಾಡಿ ಜಾಗತೀಕರಣದ ಭರದಲ್ಲಿ ದೇಸದ ಸಂಸ್ಕøತಿಯನ್ನು ಮರೆಯಬಾರದು, ವಿಶ್ವದ ಹೆಸರಾಂತ ಕಂಪನಿಗಳ ಮುಖ್ಯಸ್ಥರು ಭಾರತೀಯರೇ ಆಗಿದ್ದು ಇದಕ್ಕೇ ದೇಶದ ಶಿಕ್ಷಣ, ಸಂಸ್ಕøತಿಯೇ ಕಾರಣವಾಗಿದೆ ಎಂದರು ಪ್ರಾಚಾರ್ಯ ಡಾ. ಮಾಳವಿಕಾ ದೇಶಪಾಂಡೆ, ಡಾ. ಜಿ.ಎಸ್.ಕಳ್ಳಿಮಠ, ಡಾ. ಅಕ್ಕಮಹಾದೇವಿ ನಾಡಗೌಡ, ಡಾ.ಡಿ.ಪಿ.ಜ್ಯೋತಿಲಕ್ಷ್ಮೀ, ಕೀರ್ತಿ ಪಾಟೀಲ, ಶ್ವೇತಾ ಕಾಗೇನವರ ಇತರರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here