ಧರ್ಮಸ್ಥಳ ಗ್ರಾಮಾಭಿವೃದ್ಧಿಯ ವಲಯ ಮಟ್ಟದ ಸಾಧನಾ ಸಮಾವೇಶ

0
21
loading...

29-01

ಹೊನ್ನಾವರ,30: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೊನ್ನಾವರ ವಲಯ ಮಟ್ಟದ ಸಾಧನಾ ಸಮಾವೇಶ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ತಾಲೂಕಿನ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಯೂರ ಸಭಾಭವನದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಪತ್ರಕರ್ತ ಜಿ.ಯು.ಭಟ್ ಮಾತನಾಡಿ, `ದೈವಭಕ್ತಿಯಿದ್ದರೆ ಸಕಲ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತವೆ ಎಂದರು. ಯೋಜನೆಯ ನಿದೇರ್ಶಕ ಲಕ್ಷ್ಮಣ ಎಂ. `ಪ್ರಗತಿಬಂಧು, ಸ್ವ ಸಹಾಯ ಮತ್ತು ಜ್ಞಾನವಿಕಾಸ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಯೋಜನಾಧಿಕಾರಿ ಸದಾನಂದ ಬಿ., ಟಿ.ಎಸ್.ಹೆಗಡೆ, ಶಿವರಾಜ ಮೇಸ್ತ, ಸುರೇಶ ಶೆಟ್ಟಿ, ಚಂದ್ರಹಾಸ ನಾಯ್ಕ, ಐ.ವಿ.ನಾಯ್ಕ, ಆರ್.ಹೆಚ್.ನಾಯ್ಕ ಇತರರು ಉಪಸ್ಥಿತರಿದ್ದರು. ಪ್ರಗತಿಪರ ಕೃಷಿಕರು, ನವಜೀವನ ಸಮಿತಿ ಸದಸ್ಯರು ಹಾಗೂ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಯಿತು.
ಯೋಜನೆಯಲ್ಲಿ ಅತಿ ಹೆಚ್ಚು ಪ್ರಗತಿನಿಧಿ ಪಡೆದುಕೊಂಡ ತಂಡಗಳು, ಮೇಲ್ವಿಚಾರಕರ ಶ್ರೇಣಿಯಲ್ಲಿರುವ ಸೇವಾಪ್ರತಿನಿಧಿ ಮತ್ತು ತಾಂತ್ರಿಕ ಸಹಾಯಕರನ್ನು ಗೌರವಿಸಲಾಯಿತು. ಜೆವಿಕೆ ಸಮನ್ವಯಾಧಿಕಾರಿ ನಾಗವೇಣಿ, ವಲಯದ ಮೇಲ್ವಿಚಾರಕಿ ಲಕ್ಷ್ಮೀ, ಸೇವಾಪ್ರತಿನಿಧಿ ವಿದ್ಯಾ, ನಾಗರತ್ನ ನಿರ್ವಹಿಸಿದರು.

loading...

LEAVE A REPLY

Please enter your comment!
Please enter your name here