ನಕಾಶ ಪ್ರಕಾರ ರಸ್ತೆ ಕಾಮಗಾರಿಯನ್ನು ಕೈಗೊಳ್ಳಿ: ಪ್ರಭು ಕುರಬೇಟ್ಟಿ

0
34
loading...

ಪ್ರಭು ಕುರಬೇಟ್ಟಿ
ಪಾಲಭಾಂವಿ.17: ಪಾಲಭಾಂವಿ ಗ್ರಾಮದಲ್ಲಿ ಸುಮಾರು 15ದಿನಗಳಿಂದ ಜಮಖಂಡಿ ತಾಲೂಕಿನ ಗಡಿಯಿಂದ ಪಾಲಭಾಂವಿ ಗ್ರಾಮದವರೆಗೆ “ನಮ್ಮ ಗ್ರಾಮ ನಮ್ಮ ರಸ್ತೆ” ಯೋಜನೆಯಡಿಯಲ್ಲಿ 2.40 ಕೋಟಿ ರೂಗಳಲ್ಲಿ ರಸ್ತೆ ಕಾಮಗಾರಿ ಆರಂಭವಾಗಿದ್ದು ದಿ.15ರಂದು ಪ್ರಭು ಬಸವಂತ ಕುರಬೇಟ್ಟಿಯವರ ಪಾಲಭಾಂವಿ ಗ್ರಾಮದ ರಿ.ಸ.ನಂ.120/3 ರಲ್ಲಿ ರಸ್ತೆಯು ಹಾಯ್ದುಹೋಗಿದ್ದು ಆದರೆ ಗುತ್ತಿಗೆದಾರರು ಬೇಕಾಬಿಟ್ಟಿ ನನ್ನ ಬೂಮಿಯಲ್ಲಿ ಜೆಸಿಬಿ ಯಂತ್ರದಿಂದ ರಸ್ತೆಯನ್ನು ಅಗಲಿಕರಣ ಮಾಡುತ್ತಿದ್ದಾರೆಂದು ಪ್ರಭು ಬಸವಂತ ಕುರಬೇಟ್ಟಿ ದಿ.16ರಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಚಿಕ್ಕೋಡಿ ಇವರಿಗೆ ತಕರಾರು ಅರ್ಜಿಸಲ್ಲಿಸಿದರು.
ಶನಿವಾರ ದಿ.17ರಂದು ಕಾಮಗಾರಿ ನಡೆಯುವ ಸ್ಥಳಕ್ಕೆ ಆಗಮೀಸಿದ ಕುಡಚಿ ಉಪ ತಹಸಿಲ್ದಾರ ಬಿ.ಬಿ.ಕುಂಬಾರ ಜಮೀನ ನಲ್ಲಿ ಹಾದು ಹೋಗಿರು ರಸ್ತೆಯ ನಕ್ಷೆಯನ್ನು ಪರೀಸಿಲಿಸಿ, ಸೋಮವಾರ ರಂದು ತಾಲೂಕಿನ ಭೂಮಾಪಕರಿಂದ ಸರ್ವೇಮಾಡಿಸಿ ಸರಿಯಾಗಿ ಜಮೀನಿನ ಹದ್ದು ಗುರುತಿಸಿ ರಸ್ತೆ ಕಾಮಗಾರಿ ಆರಂಭಿಸುವದಾಗಿ ಹೇಳಿದರು
ಅಧಿಕಾರಿಗಳ ಹಾಗೂ ತಕರಾರುದಾರರ ಎದುರಲ್ಲೆ ಸದರಿಯವರ ಜಮೀನಿನಲ್ಲರುವ ಮರಗಳನ್ನು ಜೆಸಿಬಿ ಯಂತ್ರದಗಳಿಂದ ತೇರವುಗೋಳಿಸುತ್ತಿರುವದನ್ನು ತಿರ್ವವಾಗಿ ಪ್ರತಿಭಟಿಸಿದ ನಂತರ ತಪ್ಪಿನ ಅರಿವಾದ ಕೂಡಲೆ ಎಚ್ಚೆತ್ತುಕೋಂಡ ಉಪ ತಹಸಿಲ್ದಾರ ಬಿ.ಬಿ.ಕುಂಬಾರ ಸೋಮವಾರ ಸರ್ವೆಕಾರ್ಯವನ್ನು ಕೈಗೋಳ್ಳುವದಾಗಿ ಹೇಳಿ, ಕಾಮಗಾರಿಯನ್ನು ಸದರಿಯವರ ಜಮೀನಿಗೆ ಸಿಮೀತವಾಗಿ ಸ್ಥಗಿತಗೋಳಿಸಿದರು.
ಬಾಕ್ಸ್ ಲೈನ್——
ಸ್ಥಳಕ್ಕಾಗಮಿಸಿದ ಉಪ ತಹಸಿಲ್ದಾರ ಬಿ.ಬಿ.ಕುಂಬಾರ, ಸದರಿಯವರ ಮನವಿ ಪರಿಗನಿಸಿ ಸರಿಯಾದ ಹದ್ದನ್ನು ಗುರುತಿಸದೆ, ಪಕ್ಕದ ಜಮೀನದ ಮಾಲಿಕರು ಸವೇಕಾರ್ಯಕ್ಕೆ ಸಮ್ಮತಿಸಿ ನಕ್ಷೇ ಪ್ರಕಾರ ರಸ್ತೆ ಮಾಡಲು ಒಪ್ಪಿಗೆ ಸೂಚಿಸಿದರು ಕೂಡಾ ಅಧಿಕಾರಿ ಬಿ.ಬಿ.ಕುಂಬಾರ ಏಕಪಕ್ಷಸಿಯವಾಗಿ ಸದರಿಯವರ ಜಮೀನಿನಲ್ಲದ್ದದ ಮರಗಳನ್ನು ಜೆಸಿಬಿ ಯಂತ್ರಗಳಿಂದ ತೆರುಗೋಳಿಸಲು ಗುತ್ತಗೇದಾರರಿಗೆ ಆದೇಶಮಾಡಿ, ತೇರವುಗೋಳಿಸಿರುವದು ಯಾವ ನ್ಯಾಯ.

ಈ ಸಂದರ್ಭದಲ್ಲಿ ಗ್ರಾಮೀಣ ರಸ್ತೆ ಅಭಿಯಂತರಾದ ಎಸ್.ಎಸ್.ಪಟ್ಟಣಶೆಟ್ಟಿ ಗುತ್ತಗೇದಾರ ಎನ್.ಪಿ ಅವತಾಡೆ, ಸಂತೋಷ ಪಾಟೀಲ, ಗ್ರಾಮ ಲೆಕ್ಕಾಧಿಕಾರಿ ಎಸ್.ಎಸ್. ಜಂಬಗಿ, ಪ್ರಭಾಕಾರ ಕುರಬೇಟ್ಟಿ, ವಿಜಯಕುಮಾರ ಬಾಬನ್ನವರ, ಶ್ರೀಶೈಲ ನಿಂಗನೂರ, ಈರಪ್ಪ ಮೂಡಲಗಿ, ಶಿವಾಜಿ ಗೋಡಿ, ಈಶ್ವರ ಪತ್ತಾರ, ಸಂಗಪ್ಪ ತುಪ್ಪದ, ಪ್ರಕಾಶ ಪಾಟೀಲ, ಶಿವಲಿಂಗ ಕುರಬೇಟ್ಟಿ, ಚಿದಾನಂದ ಗೋಡಿ, ರಾಜು ಶಿವಾಪೂರ ಅಗ್ರಾಣಿ ರಬಕವಿ, ವಿರೂಪಾಕ್ಷಿ ಬಡಿಗೇರ, ಮುಂತಾದವರು ಇದ್ದರು.

loading...

LEAVE A REPLY

Please enter your comment!
Please enter your name here