ನವೆಂಬರ್ 1 ರಿಂದ 4 ರವರೆಗೆ ಹೊನ್ನಾವರದಲ್ಲಿ ಕನ್ನಡ ಹಬ್ಬ

0
27
loading...

MLA Sharada Shetty

ಹೊನ್ನಾವರ,29 : “ಕನ್ನಡ ಅಭಿಮಾನಿ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಹಬ್ಬ ಕಾರ್ಯಕ್ರಮ ನವೆಂಬರ್ 1 ರಿಂದ 4 ರವರೆಗೆ ಪಟ್ಟಣದ ಪೋಲಿಸ್ ಪರೇಡ್ ಮೈದಾನದಲ್ಲಿ ನಡೆಯಲಿದೆ.” ಎಂದು ಸಂಘದ ಅಧ್ಯಕ್ಷ ಸತ್ಯಾ ಜಾವಜಲ್ ಪತ್ರಕರ್ತರೊಡನೆ ಮಾತನಾಡಿ .
ನ. 1 ರಂದು ರವಿವಾರ ರಾತ್ರಿ 8 ಗಂಟೆಗೆ ಅಂತರಾಷ್ಟ್ರೀಯ ಕಾರ್ಮಿಕ ಮುಖಂಡ ಎನ್.ಆರ್.ಹೆಗಡೆ ರಾಘೋಣ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕಿ ಶಾರದಾ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಿ.ಪಿ.ಐ ಕುಮಾರಸ್ವಾಮಿ ಪಾಲ್ಗೊಳ್ಳುವರು. ಕ್ಯಾಪ್ಟನ್ ಗಜರಾಜ, ಲೆಪ್ಟಿನೆಂಟ್, ದಯಾನಂದ ಮೇಸ್ತ, ಕೆಂಪೇಗೌಡ ಪ್ರಶಸ್ತಿ ಪುರಸ್ಕøತ ಕಬಡ್ಡಿ ತರಬೇತಿದಾರ ರವೀಂದ್ರ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ನಂತರ ಭದ್ರಾವತಿಯ ವಿಕ್ರಮ ಆರ್ಕೆಸ್ಟ್ರಾದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ”
ನ. 2 ರಂದು ಸೋನವಾರ ಸಂಜೆ 7 ಗಂಟೆಗೆ ರಾಯಲ್ ಗ್ರೂಪ್ಸ್ ಇವರಿಂದ ಡಾನ್ಸ್ ಡಾನ್ಸ್ ಕಾರ್ಯಕ್ರಮ ಹಾಗೂ ಪ್ರತಿಭಾ ಪ್ರದರ್ಶನ ನಂತರ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಶಂಭು ಗೌಡ ಸಭೆಯನ್ನು ಉದ್ಘಾಟಿಸುವರು. ಸಾಂಬಾರು ಮಂಡಳಿ ಅಧ್ಯಕ್ಷ ಖಾಜಿಯಾ ಮುಜಾಮಿಲ್ ಅಧ್ಯಕ್ಷತೆ ವಹಿಸುವರು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ಬೆಂಗಳೂರಿನ ಕಲಾತ್ವಂ ತಂಡದ ಸಂಜೀತ್ ನಾಯಕ ಮತ್ತು ಗೌತಮ ನಾಯಕ ಇವರಿಂದ ಭಾರತೀಯ ಹಿಂದೂಸ್ಥಾನಿ ಸಂಗೀತದ ದ್ವಂದ್ವ ಬಾನ್ಸುರಿ ವಾದನ ಮತ್ತು ಫ್ಯೂಸನ್ ಮ್ಯೂಸಿಕ್ ಕಾರ್ಯಕ್ರಮವಿದೆ.

ನ. 3 ರಂದು ಮಂಗಳವಾರ ಸ್ಥಳೀಯರಿಂದ ಪ್ರತಿಭಾ ಪ್ರದರ್ಶನ ನಡೆಯಲಿದೆ. ಡಿ.ಎಫ್.ಓ. ವಸಂತ ರೆಡ್ಡಿ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಪತ್ರಕರ್ತ ಎಂ.ಎನ್.ಸುಬ್ರಮಣ್ಯ ಅಧ್ಯಕ್ಷತೆ ವಹಿಸುವರು. ನಟಿ ಅಭಿನಯ ವಿಶೇಷ ಆಹ್ವಾನಿತರಾಗಿ ಪಾಲ್ಗೊಳುವರು. ಶ್ರೀ ಕ್ಷೇತ್ರ ನೀಲಗೋಡದ ಧರ್ಮದರ್ಶಿ ಮಾದೇವ ಅಂಬಿಗ, ಸಾಹಸಿ ಮೀನುಗಾರ ಚಂದ್ರಕಾಂತ ತಾಂಡೇಲ, ಹೆಸ್ಕಾ ಕಿರಿಯ ಅಭಿಯಂತರ ಶಂಕರ ಗೌಡ, ಜೀವ ರಕ್ಷಕ ಸದ್ದಾಂ.ಇ.ಶಿರಾಲಿ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ರಿಚರ್ಡ್ ಲೂಯೀಸ್ ಬೆಂಗಳೂರು ಹಾಗೂ ತಂಡದವರಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಲಿದೆ.
ನ. 4 ರಂದು ಬುಧವಾರ ರಮಾ ಅರವಿಂದ, ಬೆಂಗಳೂರು ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಶಾಸಕ ಮಂಕಾಳು ವೈದ್ಯ ಕಾರ್ಯಕ್ರಮ ಉದ್ಘಾಟಿಸುವರು. ಸಾಹಿತಿ ಮನು ಬಳಗಾರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ನಾಗರಾಜ ನಾಯಕ ವಹಿಸುವರು. ನಟ ಪ್ರಣಯರಾಜ ಶ್ರೀನಾಥ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ನಂತರ ಏಕಲವ್ಯ ಪ್ರಶಸ್ತಿ ವಿಜೇತ ಮಾಜಿ ಅಂತರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ನಾಗರಾಜ ಹೆಗಡೆ, ಎ.ಇ.ಇ. ನಗರಾಭಿವೃದ್ಧಿ ಆರ್.ಪಿ.ನಾಯ್ಕ, ಅಂತರಾಷ್ಟ್ರೀಯ ಚೆಸ್ ಪ್ರತಭೆ ಸಮರ್ಥ ರಾವ್ ರವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಎಂದರು
ಸಂಘದ ಸಂಸ್ಥಾಪಕ ಅಧ್ಯಕ್ಷ ಉದಯರಾಜ ಮೇಸ್ತ ಮಾತನಾಡಿ ನವೆಂಬರ್ 1 ರಂದು ರಾಜ್ಯೋತ್ಸವದ ಅಂಗವಾಗಿ ಪಟ್ಟಣದಲ್ಲಿ ಬೈಕ್ ರ್ಯಾಲಿ ನಡೆಸಲಾಗುವುದು ಎಂದು ತಿಳಿಸಿದರು. ಸಂಘದ ಕಾರ್ಯಾಧ್ಯಕ್ಷರಾದ ಸುಧಾಕರ ಹೊನ್ನಾವರ, ಜಿ.ಜಿ.ಶಂಕರ, ಪದಾಧಿಕಾರಿಗಳಾದ ಗಣಪತಿ ಮೇಸ್ತ, ವಿನಾಯಕ, ಸ್ಟಿಫನ್ ರೋಡ್ರಗಿಸ್, ಸಯ್ಯದ್ ಹಮೀದ್, ಎನ್.ಎಚ್.ಗೌಡ, ವಿ.ಎಂ.ಭಂಡಾರಿ, ಶೇಖರ್ ವಗ್ಗರ್, ಮಾರುತಿ ಸಂಕೊಳ್ಳಿ, ಭಾಸ್ಕರ ತಾಂಡೇಲ, ಅಜಿತ್ ನಾಯ್ಕ, ಆನಂದ ಅಂಬಿಗ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here