ನೀತಿಶಾಸ್ತ್ರ ಬೋಧಿಸುವ ರಾಮಾಯಣ ಶ್ರೇಷ್ಠ ಗ್ರಂಥ ರಚಿಸಿದ ವಾಲ್ಮಿಕಿ ನಿತ್ಯ ಸ್ಮರಣೀಯ: ತಳವಾರ

0
38
loading...

ಹಳಿಯಾಳ,28: ನೀತಿಶಾಸ್ತ್ರವನ್ನು ಬೋಧಿಸುವ ರಾಮಾಯಣದಂತಹ ಶ್ರೇಷ್ಠ ಗ್ರಂಥವನ್ನು ರಚಿಸಿದ ವಾಲ್ಮಿಕಿ ಮಹರ್ಷಿ ನಿತ್ಯ ಸ್ಮರಣೀಯರಾಗಿದ್ದಾರೆ ಎಂದು ಹಿರಿಯ ಆಧ್ಯಾತ್ಮಿಕ ಚಿಂತಕ ಎಂ.ಎನ್. ತಳವಾರ ಹೇಳಿದರು.
ಸರ್ಕಾರದ ವತಿಯಿಂದ ಮಂಗಳವಾರ ಪುರಸಭೆಯ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ತಪ್ಪಿನ, ಪಾಪದ ಅರಿವು ಮಾಡಿಕೊಂಡ ಪ್ರತಿಯೊಬ್ಬರು ವಾಲ್ಮಿಕಿಯಾಗಬಹುದು ಎಂದು ತಿಳಿಸಿದ ಅವರು ಒಳ್ಳೆಯವರಾಗಿದ್ದು, ಒಳ್ಳೆಯತನವನ್ನು ಮಾಡುವಂತೆ ಕರೆ ನೀಡಿದರು.
ಶಿಕ್ಷಕ ರಂಗನಾಥ ವಾಲ್ಮಿಕಿ ಉಪನ್ಯಾಸ ನೀಡಿದರು. ನಮ್ಮ ಭಾರತೀಯ ಶ್ರೇಷ್ಠ ಕುಟುಂಬ ಪದ್ಧತಿ ನೆಲೆ ನಿಂತಿದ್ದು, ರಾಮಾಯಣದ ಆದರ್ಶದ ಮೇಲೆ ಮಹರ್ಷಿ ವಾಲ್ಮಿಕಿಯಿಂದ ರಚಿತವಾದ ರಾಮಾಯಣ ಮಹಾಗ್ರಂಥ ಶಿಕ್ಷಿತ, ಅಶಿಕ್ಷಿತ ಎಂಬ ಬೇಧಭಾವವಿಲ್ಲದೇ ಪ್ರತಿಯೊಬ್ಬರು ಅರಿತಿರುವ ಗ್ರಂಥವಾಗಿದ್ದು, ಜಗತ್ತಿನಾದ್ಯಂತ ಹೆಚ್ಚು ಪ್ರಭಾವ ಹೊಂದಿರುವ ಮಹಾಕಾವ್ಯವಾಗಿದೆ ಎಂದರು.

ಪುರಸಭೆ ಅಧ್ಯಕ್ಷೆ ಪ್ರೇಮಾ ಅಶೋಕ ತೋರಣಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣರಾವ ಯಕ್ಕುಂಡಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅಜ್ಜಪ್ಪಾ ಸೊಗಲದ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ನಾಯ್ಕ, ಪುರಸಭೆ ಉಪಾಧ್ಯಕ್ಷ ಫಯಾಜ ಶೇಖ, ಸದಸ್ಯರಾದ ಉಮೇಶ ಬೋಳಶೆಟ್ಟಿ, ಮಂಜುಳಾ ಮಾನಗಾಂವಿ, ಸುಬಾನಿ ಹುಬ್ಬಳ್ಳಿ, ಮುಖ್ಯಾಧಿಕಾರಿ ಮನ್ಸೂರಅಲಿ, ಸಿಪಿಐ ಶ್ರೀನಿವಾಸ, ಉಪವಲಯ ಅರಣ್ಯಾಧಿಕಾರಿ ಯಲ್ಲಾನಾಯ್ಕ ಹಮಾಣಿ, ವಾಲ್ಮಿಕಿ ಸಮಾಜ ಸಂಘಟನೆಯ ಪದಾಧಿಕಾರಿಗಳಾದ ಸಿ.ವೈ. ತಳವಾರ, ಸಂತೋಷ ನಾಯಕ, ಸುರೇಶ ವಗ್ರಾಯಿ, ಮಹೇಶ ಇಟಗಿ, ಗಂಗವ್ವಾ ಮುತವಾಡ, ಶಿವಲೀಲಾ ಮಾಸಮರ್ಡಿ, ಕಮಲಾ ಸನದಿ, ರೇಣುಕಾ ಬೇಡರ್, ರುದ್ರಪ್ಪಾ ಬಂಬರ್ಗಿ, ನೀಲವ್ವಾ ಪಾಟೀಲ ಮೊದಲಾದವರು ಪಾಲ್ಗೊಂಡಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ನಾಯ್ಕ ಸ್ವಾಗತಿಸಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಅವರು ನೀಡಿರುವ ಸಂದೇಶವನ್ನು ಓದಿದರು. ಶಿಕ್ಷಕ ಸಿದ್ದಪ್ಪಾ ಬಿರಾದಾರ ಕಾರ್ಯಕ್ರಮ ನಿರ್ವಹಿಸಿದರು.

loading...

LEAVE A REPLY

Please enter your comment!
Please enter your name here