ನ.2ರಿಂದ ಕೃಷಿ ಅಭಿಯಾನ: ಬಸವರಾಜ

0
33
loading...

30 SDP 2
ಸಿದ್ದಾಪುರ,31:ಕೃಷಿ ಮತ್ತು ಇತರ ಅಭಿವೃದ್ದಿ ಇಲಾಖೆಗಳು ಸೇರಿ ಮೇ 1ರಿಂದ ಜೂನ್ 31ರ ಒಳಗೆ ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ಕೃಷಿ ಅಭಿಯಾನವನ್ನು ಮಾಡಬೇಕೆಂದು ಸರಕಾರ ನಿರ್ದೇಶನ ನೀಡಿತ್ತು.ಆದರೆ ಮೇ ತಿಂಗಳಿನಲ್ಲಿ ಗ್ರಾ.ಪಂ ಚುನಾವಣಾ ನೀತಿಸಂಹಿತೆ ಮತ್ತು ಜೂನ್ ತಿಂಗಳಿನಲ್ಲಿ ಮಳೆ ಪ್ರಾರಂಭವಾಗುದರಿಂದ ಈ ಸಮಯದಲ್ಲಿ ಕೃಷಿ ಅಭಿಯಾನವನ್ನು ಮಾಡಲು ಸಾಧ್ಯವಾಗಿಲ್ಲ.ಆದ್ದರಿಂದ ನ.2ರಿಂದ 16ರ ವರೆಗೆ ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ‘ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ‘ ಎಂಬ ಶೀರ್ಷಿಕೆ ಅಡಿಯಲ್ಲಿ ಕೃಷಿ ಅಭಿಯಾನವನ್ನು ಆಯೋಜಿಸಿರುವದಾಗಿ ಸಹಾಯಕ ಕೃಷಿ ನಿರ್ದೇಶಕ ಡಿ.ಎಂ ಬಸವರಾಜ ತಿಳಿಸಿದ್ದಾರೆ.

ಅವರು ತಮ್ಮ ಕಛೇರಿಯಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದರು
ಪ್ರತಿ ಹೋಬಳಿಯಲ್ಲಿ 3ದಿನಗಳ ಕಾರ್ಯಕ್ರಮ ಆಯೋಜಿಸಿದ್ದು ಕೃಷಿಮಾಹಿತಿ ಮತ್ತು ಕಾರ್ಯತಂಡ ಮೊದಲ 2ದಿನ ವೇಳಾಪಟ್ಟಿಯ ಪ್ರಕಾರ ಹೋಬಳಿಯ ಆಯಾ ಗ್ರಾಮ ಪಂಚಾಯತದಲ್ಲಿ ಹಾಜರಿದ್ದು ಎಲ್ಲಾ ಇಲಾಖೆಗಳ ಬಗ್ಗೆ ಪ್ರಚಾರ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆ,ಸಾಧ್ಯವಾಗುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.3ನೇ ದಿನ ಹೋಬಳಿಯ ಕೇಂದ್ರ ಸ್ಥಾನದಲ್ಲಿ ವಸ್ತು ಪ್ರದರ್ಶನ,ಸಂವಹನ ಮುಂತಾದ ಕಾರ್ಯಕ್ರಮಗಳನ್ನು ಎರ್ಪಡಿಸಲಾಗಿದೆ. ಅಭಿಯಾನವನ್ನು ಕೊಂಡ್ಲಿ ಹೋಬಳಿ ಮೂಲಕ ಪ್ರಾರಂಭಿಸಲಾಗುವದು. ನ2 ರಂದು ಕಾರ್ಯಕ್ರಮನ್ನು ಶಾಸಕ ವಿಶ್ವೇಶ್ವರ ಹೆಗಡೆ ಕಾಗೆರಿ ಬೆಳಿಗ್ಗೆ 10.30 ಗಂಟೆಗೆ ಕೃಷಿ ಇಲಾಕೆಯ ಕಛೇರಿಯ ಆವರಣದಲ್ಲಿ ಉದ್ಘಾಟನೆ ಮಾಡಲಿದ್ದು ಈ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಕೃಷಿ ಉಪಕರಣ ವಿತರಣೆ ಮಾಡಲಾಗುವದು. ಮೂಲಕ ಪ್ರಾರಂಭಿಸಲಾಗುವದು ಎಂದು ಹೇಳಿದರು
ಪಶುಸಂಗೋಪನಾ ಇಲಾಕೆಯ ಸಹಾಯಕ ನಿರ್ದೇಶಕ ನಂದಕುಮಾರ ಪೈ ಮಾತನಾಡಿ ನ.7ಕ್ಕೆ ಇಟಗಿ ಮತ್ತು 16ಕ್ಕೆ ಹೆರೂರಿನಲ್ಲಿ ಜಾನುವಾರು ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಬೆಳಿಗ್ಗೆ 9-10ಘಂಟೆಯ ವರೆಗೆ ಆಯೋಜಿಸಿರುವದಾಗಿ ತಿಳಿಸಿದರು.
ಪ್ರಮುಖವಾಗಿ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೆಶಕ ಮಹಾಬಲೇಶ್ವರ್ ಟಿ.ರೈತ ಸಂಘದ ಅಧ್ಯಕ್ಷ ವೀರಭದ್ರ ನಾಯ್ಕ ,ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಕೃಷಿ ವಿಸ್ತರಣಾಧಿಕಾರಿ ಗೋವಿಂದಪ್ಪ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here