ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ

0
27
loading...

ಕುಮಟಾ,29 : ಪ್ರಪಂಚದಲ್ಲಿ ಶ್ರೇಷ್ಠವಾದುದೆಂದರೆ ಜ್ಞಾನದಾನ ಎಂದು ನೀಲಗೋಡ ಯಕ್ಷಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಮಾದೇವ ಜಿ ಅಂಬಿಗ ಕರೆ ನೀಡಿದರು.
ಅವರು ಉ. ಕ ಜಿಲ್ಲಾ ಅಂಬಿಗ ಸಮಾಜ ವಿದ್ಯಾವರ್ಧಕ ಸಂಘ ಮಿರ್ಜಾನ ಹಾಗೂ ಉ ಕ ಜಿಲ್ಲಾ ಅಂಬಿಗ ಸಮಾಜ ನೌಕರರ ಸಂಘ ಮತ್ತು ಅಂಬಿಗ ಸಮಾಜ ದೀವಗಿ, ತಂಡ್ರಕುಳಿ, ಮಣಕೋಣ ಇವರ ಸಂಯುಕ್ತ ಆಶ್ರಯದಲ್ಲಿ ದೀವಗಿಯ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಧ್ಯಕ್ಷತೆಯನ್ನು ಕರ್ನಾಟಕ ಯುನಿವರ್ಸಿಟಿ ಧಾರವಾಡದ ಕನ್ನಡ ವಿಭಾಗದ ಪ್ರಾಧ್ಯಾಪಕ ಎಸ್ ಕೆ ಮೇಲಕಾರ ವಹಿಸಿದ್ದರು. ಗೋಕರ್ಣ ಜಿ ಪಂ ಸದಸ್ಯ ಪ್ರದೀಪ ನಾಯಕ ಪ್ರತಿಭಾವಂತರನ್ನು ಪುರಸ್ಕರಿಸಿದರು. ಕುಮಟಾದ ಉದ್ದಿಮೆದಾರ ವೆಂಕಟೇಶ ಆರ್ ನಾಯಕ ಸಾಧಕರನ್ನು ಸನ್ಮಾನಿಸಿದರು.
ಶಿಕ್ಷಕ ಮಂಜುನಾಥ ಗಾಂವ್ಕರ್ ಬರ್ಗಿ, ದೀವಗಿ ಗ್ರಾ ಪಂ ಅಧ್ಯಕ್ಷ ಕೃಷ್ಣ ಜೆ ಗೌಡ, ಉಪಾಧ್ಯಕ್ಷೆ ಮಾಲಾ ಆರ್ ಅಂಬಿಗ, ದೀವಗಿ ಅಂಬಿಗಸಮಾಜದ ಮುಖಂಡ ಎಲ್ ಎಸ್ ಅಂಬಿಗ ಮಾತನಾಡಿದರು. ಪುರಸ್ಕøತರ ಪರವಾಗಿ ಕಾವ್ಯ ನಾರಾಯಣ ಅಂಬಿಗ ಮಿರ್ಜಾನ ಅನಿಸಿಕೆ ಹೇಳಿದರು. ಅಂಬಿಗ ಸಮಾಜ ಹದಿನೆಂಟು ಹಳ್ಳಿ ಯಜಮಾನ ಗಣಪತಿ ವೆಂಕ್ಟಾ ಅಂಬಿಗ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುನೀಲ ಕಾರ್ಕಳ, ಗಣೇಶ ಎಸ್ ಅಂಬಿಗ, ಎಸ್ ಕೆ ಅಂಬಿಗ, ಆರ್ ಕೆ ಅಂಬಿಗ, ಎಸ್ ಜೆ ಅಂಬಿಗ ಸುನೀಲ ಅಂಬಿಗ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here