ಬೈಕ್ ಮತ್ತು ಲಾರಿ ಡಿಕ್ಕಿ : ಬೈಕ್ ಸವಾರ ಸಾವು

0
10
loading...

ಮುಂಡಗೋಡ,28 : ಅಪರಿಚಿತ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶಿರಸಿ-ಹುಬ್ಬಳ್ಳಿ ಹೆದ್ದಾರಿ ತಾಲೂಕಿನ ಜೋಗೇಶ್ವರ ಹಳ್ಳದ ಬಳಿ ಮಂಗಳವಾರ ಸಂಬವಿಸಿದೆ.
ಗದಗ ಜಿಲ್ಲೆ ಶಿರಹಟ್ಟಿ ತಾಲೂಕು ಮೂಲದ ಅಕ್ಬರಬಾಷಾ ಬಾಬುಸಾಬ ನರೇಗಲ(24) ಖಾದರಬಾಷಾ ಹುಸೇನಸಾಬ ಬೈರಿಕುಂದ(20) ಮೃತ ದುರ್ದೈವಿಗಳು. ಶಿರಸಿ ಕಡೆಯಿಂದ ಮುಂಡಗೋಡ ಮಾರ್ಗವಾಗಿ ತಮ್ಮ ಊರಿಗೆ ಹೊರಟಿದ್ದ ಇವರ ಬೈಕ್ ಗೆ ತಿರುವಿನಲ್ಲಿ ಲಾರಿಯೊಂದು ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಲಾರಿ ಯಾವುದೆಂದು ಇನ್ನು ತಿಳಿದು ಬಂದಿಲ್ಲ. ಪೊಲೀಸರು ಅಲ್ಲಲಿ ನಾಖಾ ಬಂದಿ ಇರುವ ಕಡೆಗಳಲ್ಲೆಲ್ಲ ಮಾಹಿತಿ ನೀಡಿದ್ದಾರೆ. ಮುಂಡಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here