ಭಗತ್‍ಸಿಂಗರ ಸ್ವಾತಂತ್ರಪ್ರೇಮ ಶ್ಲಾಘನೀಯ: ಈರಣ್ಣ ಬಡಿಗೇರ

0
53
loading...

ಹಾರೂಗೇರಿ 05: ತಮ್ಮಎಳೆಯ ವಯಸ್ಸಿನಲ್ಲಿಯೇ ದೇಶದ ಸ್ವಾತಂತ್ರ್ಯ ಜ್ಯೋತಿಗೆ ರಕ್ತದ ತೈಲ ಎರೆದು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಶೂರ ಭಗತ್‍ಸಿಂಗರ ಸ್ವಾತಂತ್ರಪ್ರೇಮ ಶ್ಲಾಘನೀಯವೆಂದು ನಿವೃತ್ತ ಉಪನ್ಯಾಸಕ ಈರಣ್ಣ ಬಡಿಗೇರ ಅಭಿಮತ ವ್ಯಕ್ತಪಡಿಸಿದರು.
ರಾಯಬಾಗ ತಾಲೂಕಿನ ಯಬರಟ್ಟಿ ಗ್ರಾಮದಲ್ಲಿ ಭಗತ್‍ಸೇನಾ ಹಾಗೂ ರೈತ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಭಗತ್‍ಸಿಂಗರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಗತ್‍ಸಿಂಗರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಮ್ಮನಗೌಡ ಪಾಟೀಲ, ನಾಗರಾಜ ಬೂದಣ್ಣವರ, ನಯನ ನಂದಿಗೌಡರ, ಸಚೀನ ರಾವತ, ರಮೇಶ ನಾಗರಡ್ಡಿ, ಆದರ್ಶ ಬಡಿಗೇರ, ಅಣ್ಣಯ್ಯ ಹಿರೇಮಠ, ರೈತ ಮುಖಂಡ ಮಲ್ಲಪ್ಪ ಬಿರಾದರ, ಆನಂದ ಮೋಳೆ, ಮಹೇಶ ಮೋಳೆ, ಆನಂದ ಬಿರಾದರ, ಪುಂಡಲೀಕ ಬಿರಾದರ, ಸುನೀಲ ಬೂದಣ್ಣವರ, ಮಂಜು ಮೋಳೆ, ಶ್ರೀಧರ ಗಾಣಿಗೇರ, ವಿಷ್ಟು ಬಿರಾದರ, ಶಿವಾನಂದ ಗಾಣಿಗೇರ, ಪ್ರಕಾಶ ಚವ್ಹಾಣ, ಪರಶುರಾಮ ಹುಲ್ಲೆಣ್ಣವರ ಸೇರಿದಂತೆ ಭಗತ್‍ಸೇನಾ ಸಂಘದ ಕಾರ್ಯಕರ್ತರು ಹಾಗೂ ರೈತ ಭಾಂದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here