ಮಕ್ಕಳ ಹಿಡಿಯುವವರು ಬಂದಿದ್ದಾರೆ ಎನ್ನುವದು ಕೇವಲ ವದಂತಿ: ಜಯರಾಮ ಗೌಡ

0
18
loading...

jayarajgouda

ಸಿದ್ದಾಪುರ,31: ತಾಲೂಕಿಗೆ ಮಕ್ಕಳನ್ನು ಹಿಡಿಯುವವರು ಬಂದಿದ್ದಾರೆ ಎನ್ನುವದು ಕೇವಲ ವದಂತಿಯಾಗಿದ್ದು ಈ ಕುರಿತು ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದು ಸಿ.ಪಿ.ಐ. ಜಯರಾಮ ಗೌಡ ತಿಳಿಸಿದರು.
ಅವರು ಬುಧವಾರ ಸಂಜೆ ಪೊಲೀಸ್ ಠಾಣೆಯಲ್ಲಿ ಜರುಗಿದ ಜಾಗೃತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಪಟ್ಟಣ ಪ್ರದೇಶ ಸೇರಿದಂತೆ ಗ್ರಾಮೀಣ ಪ್ರದೇಶದ ಎಲ್ಲ ಕಡೆಗಳಲ್ಲಿ ಮಕ್ಕಳು ಹಿಡಿಯುವವರು ಬಂದಿದ್ದಾರೆ ಎನ್ನುವ ಸುದ್ದಿಯಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಇಲ್ಲಿಯವರೆಗೆ ತಾಲೂಕಿನಲ್ಲಿ ಯಾವುದೇ ಮಕ್ಕಳು ಕಾಣೆಯಾಗಿಲ್ಲ. ಕೇವಲ ವದಂತಿಯಾಗಿದೆ. ಸಾಗರ, ಸೊರಬ, ಶಿರಸಿ ತಾಲೂಕಿನಲ್ಲಿಯೂ ಈ ಕುರಿತು ಹೆಚ್ಚು ಸುದ್ದಿ ಹರಡಿದೆ. ಯಾವುದೇ ಸ್ಥಳದಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಜಯರಾಮ ಗೌಡ ತಿಳಿಸಿದರು.
ಪಿ.ಎಸ್.ಐ. ಶಿವಕುಮಾರ ಬಿ, ಜಿ.ಪಂ. ಸದಸ್ಯ ಈಶ್ವರ ನಾಯ್ಕ ಮನಮನೆ, ಪ.ಪಂ. ಸದಸ್ಯ ಮಾರುತಿ ಟಿ.ನಾಯ್ಕ, ಸುರೇಶ ನಾಯ್ಕ, ರವಿ ನಾಯ್ಕ, ಮುನ್ನಾ ಸಾಬ್ ಮತ್ತಿತರರಿದ್ದರು.

loading...

LEAVE A REPLY

Please enter your comment!
Please enter your name here