ಮಣಕಿ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ: ನುಡಿ ಹಬ್ಬ

0
24
loading...

29kmt2
ಕುಮಟಾ,29 : ಸಮಸ್ತ ನಾಗರಿಕರು ಒಗ್ಗೂಡಬೇಕೆಂಬ ಹೆಬ್ಬಯಕೆಯಿಂದ ನವೆಂಬರ್ 1ರಂದು ಸಂಜೆ 6 ಗಂಟೆಗೆ ಪಟ್ಟಣದ ಮಣಕಿ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಸಮಿತಿ ವತಿಯಿಂದ ನುಡಿ ಹಬ್ಬ ಕಾರ್ಯಕ್ರಮ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಮನೀಶ ನಾಯಕ ತಿಳಿಸಿದ್ದಾರೆ.
ಅವರು ಬುಧವಾರ ಪಟ್ಟಣದ ಹೊಟೇಲ್‍ವೊಂದರಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ನುಡಿ ಹಬ್ಬ ಕಾರ್ಯಕ್ರಮ ವಿಶೇಷವಾಗಿ ಆಚರಿಸಲಾಗುವುದ. ಅಂದು ಕನ್ನಡ ನುಡಿಗಾಗಿ ಸೇವೆಗೈದ ಸಾದನೆ ಮಾಡಿದ ಸಾಧಕರಿ ಸನ್ಮಾನ, ಹುಳ್ಸೆಮಕ್ಕಿ ರಾಮ ಹೆಗಡೆ ಅವರಿಂದ ಯಕ್ಷಗಾನ, ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ ಅವರಿಂದ ಕನ್ನಡ ನಾಡ ನುಡಿ ಬಗ್ಗೆ ವಿಶೇಷ ಉಪನ್ಯಾಸ, ಮನೋರಂಜನ ಕಾರ್ಯಕ್ರಮ, ಫ್ರೆಂಡ್ಸ್ ಮೆಲೋಡಿಸ್ ಇವರಿಂದ ರಸಮಂಜರಿ, ಪ್ರಸಿದ್ಧ ನೃತ್ಯ ತಂಡಗಳಿಂದ ಕನ್ನಡ ನಾಡು ನುಡಿಗೆ ಸಂಬಂಧಿಸಿದಂತ ನೃತ್ಯಗಳು ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಸುದ್ಧಿಗೋಷ್ಠಯಲ್ಲಿ ಸಮಿತಿ ಪ್ರಮುಖರಾದ ಎಂ ಜಿ ಭಟ್, ಆರ್ ಜಿ ನಾಯ್ಕ, ಎಸ್ ಟಿ ನಾಯ್ಕ, ಜಗದೀಶ ನಾಯಕ, ಅಜೀತ ಪಂಡಿತ, ಸುಬ್ಬಯ್ಯ ನಾಯ್ಕ, ಜಯಂತ ನಾಯ್ಕ, ಶ್ರೀಧರ ಹರಿಕಂತ್ರ, ವೆಂಕಟ್ರಮಣ ನಾಯ್ಕ, ಸುರೇಶ ಹರಿಕಂತ್ರ, ಎಂ ಎನ್ ಭಟ್, ರಾಘವೇಂದ ಗಾಡಿಗ, ಗೌರೀಶ ಧಾರೇಶ್ವರ ಹಾಗೂ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here