ಮನಸ್ಸು, ಶರೀರ ಒಂದುಗೂಡಿ ಮಾಡಿರುವ ಯೋಗ ಕಾಯಿಲೆ ದೂರಮಾಡುತ್ತದೆ:ಸೋಮಶೇಖರ ಪಾಟೀಲ

0
25
loading...

ಕಾಗವಾಡ,26: ಮಹಿಳೆಯರು ತಮ್ಮ ಆರೋಗ್ಯ ಕಾಪಾಡಲು ದಿನನಿತ್ಯ ಯೋಗಾಭ್ಯಾಸ ಮಾಡುವುದು ಅಗತ್ಯ, ಮನಸ್ಸು ಮತ್ತು ಶರೀರ ಒಂದುಗೂಡಿ ಮಾಡಿರುವ ಯೋಗದಿಂದ ಅನೇಕ ಕಾಯಿಲೆಗಳು ದೂರಾಗಲು ಸಾಧ್ಯ. 5 ದಶಕದ ಹಿಂದೆ ಹಿರಿಯರು (ಮಹಿಳೆಯರು) ದಿನನಿತ್ಯದ ಕಾರ್ಯಗಳು ಮನಸ್ಸು ಮತ್ತು ಶರೀರ ಒಂದೂಗೂಡಿಸಿ ಮಾಡುತ್ತಿರುವ ಕಷ್ಟಕರಿ ಕೆಲಸಗಳಿಂದ ಕಾಯಿಲೆಗಳು ಅವರ ಬಿಟ್ಟು ದೂರ ಇದ್ದವು ಎಂದು ಮಿರಜದ ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ. ಸೋಮಶೇಖರ ಪಾಟೀಲ ಉಗಾರದಲ್ಲಿ ಹೇಳಿದರು.
ಉಗಾರ ಖುರ್ದ ಗ್ರಾಮದ ಪತಂಜಲಿ ಯೋಗ ಜಾಗೃತಿ ವೇದಿಕೆ, ಶ್ರೀ ಗುರುದೇವ ಆಶ್ರಮ ಇವರ ಸಯುಂಕ್ತ ಆಶ್ರಯದಲ್ಲಿ ಆಯೋಜಿಸಿದ ಮಿರಜದ ತಜ್ಞೆ ವೈದ್ಯರಿಂದ ರವಿವಾರ ಮಧ್ಯಾಹ್ನ ಉಗಾರ ವಿಹಾರ ಸಭಾಂಗಣದಲ್ಲಿ ಉಪನ್ಯಾಸ ಕಾರ್ಯಕ್ರಮ ಆಯೂಜಿಸಿದರು. ಉಪನ್ಯಾಸಕರಾಗಿ ಡಾ. ಸೋಮಶೇಖರ ಪಾಟೀಲ ಮೇಲಿನಂತೆ ವಿಚಾರ ವ್ಯಕ್ತಪಡಿಸಿದರು.
ಡಾ. ಸೋಮಶೇಖರ ಪಾಟೀಲ್ ಇವರು ಸಾಮಾನ್ಯವಾಗಿ ಮಹಿಳೆಯರಲ್ಲಿ ಕಾಣುವ ಶಾರೀರಿಕ ತೊಂದರೆ, ರೋಗಗಳು, ಗರ್ಭಾವಸ್ಥೆಯಲ್ಲಿ ಮಹಿಳೆಯರು ತೆಗೆದುಕೊಳ್ಳಬೇಕಾದ ಜಾಗರೂಕತೆಯ ಬಗ್ಗೆ ಬೋಧನೆ ಮತ್ತು ಸ್ತ್ರೀ ಆರೋಗ್ಯದಲ್ಲಿ ಯೋಗಾಸನ, ಪ್ರಾಣಾಯಾಮದ ಪಾತ್ರ ಬಗ್ಗೆ ವಿವರಿಸಿದರು. ಇದೇ ರೀತಿ ನೇರೆಯ ಸಾಂಗ್ಲೀ ಜಿಲ್ಲೆಯ ಜತ್ತ ತಾಲೂಕಿನ ಸ್ತ್ರೀ ರೋಗ ತಜ್ಞರಾದ ಡಾ. ರವೀಂದ್ರ ಅರಳಿ ಇವರು ಮಹಿಳೆಯರು ಶಾರೀರಿಕವಾಗಿ ಮತ್ತು ಪ್ರಸೊತಿಪೂರ್ವ, ಪ್ರಸೊತಿನಂತರ ಆರೋಗ್ಯದಾಯಕರಾಗಿರಲು ಅನುಸರಿಸಿ ಬೇಕಾದ ಜಾಗರೂಕತೆ ಬಗ್ಗೆ ಭೋದನೆ, ಗರ್ಭಿಣಿ ಸ್ತ್ರೀಯರು ಅನುಸರಿಸಬೇಕಾದ ಯೋಗಾಸನ ಮತ್ತು ಪ್ರಾಣಾಯಮದ ಬಗ್ಗೆ ಮಾಹಿತಿ ನೀಡಿದರು.
ಡಾ. ಸುಧೀರ ಶಾಹ ಕೀಲು ಮತ್ತು ಎಲುಬುಗಳ ತಜ್ಞರು ಇವರು ಎಲುಬುಗಳ ಸಂಬಂಧಪಟ್ಟ ಕಾಯಿಲೆಗಳು ಆಕಸ್ಮಿಕವಾಗಿ ಜರಗುವ ಎಲುಬುಗಳ ತೊಂದರೆಯಿಂದ ಪರಿಹಾರದ ಬಗ್ಗೆ ಮತ್ತು ಎಲುಬುಗಳ ಸಂರಕ್ಷಣೆಯ ಬಗ್ಗೆ ಭೋದನೆ, ಅಸ್ತಿ ಸ್ವಾಸ್ಥ್ಯದಲ್ಲಿ ಯೋಗಾಸನ, ಪ್ರಾಣಾಯಮಗಳ ಬಗ್ಗೆ ಮಾಹಿತಿ ನೀಡಿದರು. ಸಾಂಗ್ಲೀಯ ಡಾ. ಕಪೀಲ ಪಾಟೀಲ ಮಧುಮೇಹ ತಜ್ಞರು ಇವರು ಸಕ್ಕರೆ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿ ಇದರಲ್ಲಿ ಯೋಗಾಸನ ಮತ್ತು ಪ್ರಾಣಾಯಮ ಬಗ್ಗೆ ಮಾಹಿತಿ ನೀಡಿದರು. ಸಂಕೇಶ್ವರದ ನಿಸರ್ಗೋಪಚಾರ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಶಂಕರಗೌಡ ಪಾಟೀಲ ಹೃದಯರೋಗ, ರಕ್ತದ ಒತ್ತಡ, ಥಾಯಿರಾಯ್ಡ ಕಾಯಿಲೆಯಿಂದ ಮುಕ್ತಿ ಮತ್ತು ಪರಿಹಾರ ಬಗ್ಗೆ ಮಾಹಿತಿ ನೀಡಿದರು. ಮಿರಜದ ಆಹಾರ ಮತ್ತು ಪಥ್ಯ ತಜ್ಞರಾದ ಡಾ. ತೃಪ್ತಾ ಮೆಹತಾ ಇವರು ಮನುಷ್ಯ ಯಾವ ಯಾವ ಆಹಾರ ಸೇವಿಸಬೇಕು ಯಾವ ಆಹಾರ ಬೇಡ ಈ ಬಗ್ಗೆ ಮಾಹಿತಿ ನೀಡಿದರು. ಮಿರಜದ ದಂತವೈದ್ಯರಾದ ಡಾ. ಸಚೀನ ಮೆಹತಾ ಇವರು ದಂತಗಳನ್ನು ಸಂರಕ್ಷೀಸುವ ಬಗ್ಗೆ ಮಾಹಿತಿ ನೀಡಿದರು.
ದೀವ್ಯ ಸಾನಿಧ್ಯ ಉಗಾರ ಗುರುದೇವಾಶ್ರಮದ ಪ.ಪೂ ಬಸವಲಿಂಗ ಸ್ವಾಮೀಜಿ ವಹಿಸಿದರು. ಅಥಿತಿಗಳಾಗಿ ಉಗಾರ ಮಹಿಳಾ ಮಂಡಳ ಅಧ್ಯಕ್ಷ ಸ್ಮೀತಾತಾಯಿ ಶಿರಗಾಂವಕರ, ಕನ್ನಡ ಯುವಕ ಸಂಘದ ಅಧ್ಯಕ್ಷ ಶಿವಗೌಡ ಕಾಗೆ ಅಥಿತಿಗಳಾಗಿ ಉಪಸ್ಥೀತರಿದ್ದರು. ಕಾರ್ಯಕ್ರಮದ ನೇತೃತ್ವ ಉಗಾರ ಪತಂಜಲಿ ಯೋಗ ಜಾಗೃತಿ ವೇದಿಕೆಯ ಉದಯಕುಮಾರ ಪಂಚಾಕ್ಷರಿ ವಹಿಸಿದರು. ಕಾರ್ಯಕ್ರಮ ಯಶಶ್ವಿಗೋಳಿಸಲು ಮಂಜುನಾಥ ತೇರದಾಳೆ, ಶಿವಪುತ್ರ ಗಬ್ಬೂರ, ಸದಾಶಿವ ಕುಂಬಾರ ಇನ್ನಿತರ ಕಾರ್ಯಕರ್ತರು ಶ್ರಮಿಸಿದರು.

loading...

LEAVE A REPLY

Please enter your comment!
Please enter your name here