ಮಾನಸಿಕ ಸಮಸ್ಯೆ ಅರಿತು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು: ರೇಶ್ಮಾ ಗೋಣಿ

0
43
loading...

29mnd1p
ಮುಂಡಗೋಡ,30: ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬ ಮನುಷ್ಯ ಮಾನಸಿಕ ಒತ್ತಡದಲ್ಲಿರುತ್ತಾನೆ. ಒತ್ತಡ ತೀವ್ರವಾದಾಗ ಅದು ಮಾನಸಿಕ ಸ್ಥಿತಿಗೆ ತಲುಪುತ್ತದೆ. ಅದನ್ನು ಉಲ್ಬಣಗೊಳ್ಳಲು ಬಿಡದೆ ಸಮಸ್ಯೆ ಅರಿತು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು ಎಂದು ಇಲ್ಲಿಯ ಸಿವಿಲ್ ನ್ಯಾಯಾಲಯದ ನ್ಯಾಯಾದೀಶೆ ರೇಶ್ಮಾ ಗೋಣಿ ಹೇಳಿದರು.
ಗುರುವಾರ ಇಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಯಾರಿಗೆ ಯಾರೂ ಮಾನಸಿಕ ಹಿಂಸೆ ನೀಡಬಾರದು ಹಾಗೂ ಹಗೆತನ ಮಾನಸಿಕ ಹಿಂಸೆಯಿಂದ ಕುಟುಂಭಗಳನ್ನು ಯಾರು ಹಾಳು ಮಾಡಲು ಯತ್ನಿಸಬಾರದು ಎಂದು ಹೇಳಿದರು.
ತಾಲೂಕಾ ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ಮಾತನಾಡಿ, ಮಾನಸಿಕ ಆರೋಗ್ಯವನ್ನು ಕಡೆÀಗಣಿಸುವಂತಿಲ್ಲ. ಈ ಖಾಯಿಲೆ ಪುರಾತನ ಕಾಲದಿಂದಲೂ ಇದೆ. ಇದಕ್ಕೆ ಚಿಕಿತ್ಸೆ ಇರಲಿಲ್ಲವಷ್ಟೇ. ಯಾವುದೇ ಮನುಷ್ಯ ಮಾನಸಿಕಕ್ಕೊಳಗಾದರೆ ಆತನನ್ನು ಹುಚ್ಚನೆಂದು ಲಗುವಾಗಿ ಪರಿಗಣಿಸುವುದು ಸಭ್ಯತೆಯಲ್ಲ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಾಯಿಲೆಗೂ ಚಿಕಿತ್ಸೆ ಔಷದಿ ಉಪಚಾರದಿಂದ ಗುಣಪಡಿಸಬಹುದು ಮನಸಿನ ಮೇಲೆ ನಮ್ಮ ಆರೋಗ್ಯ ನಿರ್ಧರಿತವಾಗುತ್ತದೆ.
ಮಾನಸಿಕ ಸ್ಥಿತಿ ಸೀಮಿತ ಕಳೆದುಕೊಳ್ಳುವುದರಿಂದ ಆರೋಗ್ಯ ಹದಗೆಡುತ್ತದೆ. ಮನಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರತಿಯೊಬ್ಬರು ಪ್ರಯತ್ನಿಸಬೇಕು. ಮನಸನ್ನು ಜಾಗ್ರತವಾಗಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಇದರಿಂದ ಯಾರೂ ಕೂಡ ಯಾರ ಮನಸಿಗೆ ದಕ್ಕೆಯಾಗದಂತೆ ವರ್ತಿಸುವ ಬದಲು ಮನಸ್ಥಿತಿ ದುರ್ಬಲವಿದ್ದವರಿಗೆ ದೈರ್ಯ ತುಂಬುವ ಕೆಲಸ ಮಾಡಬೇಕೆಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಗುಡ್ಡಪ್ಪ ಕಾತೂರ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ವಕೀಲ ಅಜೀತ ಜಿನ್ನಪ್ಪಗೌಡ, ತಜ್ಞ ವೈದ್ಯ ಕಿರಣಕುಮಾರ ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಬೈಲಪತ್ತಾರ, ನ್ಯಾಯವಾದಿ ಸಲೀಂ ನಂದಿಕಟ್ಟಿ, ರಾಜಶೇಖರ ಹುಬ್ಬಳ್ಳಿ, ಆರ್.ಎಸ್ ಹಂಚಿನಮನಿ, ಗೀತಾ ಮುಂತಾದವರಿದ್ದರು.
ಪಿ.ಜೆ ಪಡ್ತಿ ಪ್ರಾಸ್ಥಾವಿಕ ಮಾತನಾಡಿದರು. ಶ್ರೀಶೈಲ ಪಟ್ಟಣಶೆಟ್ಟಿ ನಿರೂಪಿಸಿದರು. ಆರ್.ಎಸ್.ಹುಬ್ಬಳ್ಳಿ ವಂದಿಸಿದರು.

loading...

LEAVE A REPLY

Please enter your comment!
Please enter your name here