ಮುಂದುವರಿದ ಲೋಕಾಯುಕ್ತ ತನಿಖೆ

0
16
loading...

ಹಳಿಯಾಳ: ಜಿಲ್ಲಾ ಪಂಚಾಯತ ಇಂಜಿನೀಯರಿಂಗ್ ಇಲಾಖೆಯ ಹಳಿಯಾಳ ಉಪವಿಭಾಗ ವ್ಯಾಪ್ತಿಯ ತೇರಗಾಂವ ಜಿ.ಪಂ. ಕ್ಷೇತ್ರದಲ್ಲಿ ಕಾಮಗಾರಿಗಳ ಅನುಷ್ಠಾನದಲ್ಲಿ ಭಾರಿ ಅಕ್ರಮವೆಸಗಲಾಗಿದೆ ಎಂದು ನಾರಾಯಣ ದಡ್ಡಿ ಎನ್ನುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಯವರು ಅ. 30 ರಂದು ಎರಡನೇ ದಿನವೂ ಸಹ ತಮ್ಮ ತನಿಖೆ ಮುಂದುವರಿಸಿದ್ದಾರೆ.
ದೂರಿನಲ್ಲಿ ಉಲ್ಲೇಖಿತ ಒಟ್ಟು 35 ಕಾಮಗಾರಿಗಳ ಪೈಕಿ ಆರಂಭದ ದಿನ ಅ. 29 ರಂದು 32 ಕಾಮಗಾರಿಗಳನ್ನು ಪರಿಶೀಲಿಸಲಾಗಿದ್ದು, ಶುಕ್ರವಾರ ಕೆಸರೊಳ್ಳಿ ಕಿರು ನೀರು ಸರಬರಾಜು ಯೋಜನೆ, ಪಾಳಾದ ಶಾಲಾ ದುರಸ್ತಿ ಕಾಮಗಾರಿ ಹಾಗೂ ಅರ್ಲವಾಡ-ಗೋದಗೋರಿ ಸಂಪರ್ಕ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದರು. ದೂರುದಾರ ನಾರಾಯಣ ದಡ್ಡಿ ಹಾಗೂ ಜಿ.ಪಂ. ಇಂಜಿನೀಯರಿಂಗ್ ಉಪವಿಭಾಗದ ಅಧಿಕಾರಿಗಳು ತನಿಖೆ ಸಮಯದಲ್ಲಿ ಹಾಜರಿದ್ದರು.

loading...

LEAVE A REPLY

Please enter your comment!
Please enter your name here