ಮುಸಗುಪ್ಪಿಯಲ್ಲಿ ಆರ್ಥಿಕ ಸಾಕ್ಷರತಾ ಶಿಬಿರ

0
19
loading...

ಗೋಕಾಕ.07: ಮುಸಗುಪ್ಪಿಯಲ್ಲಿ ಆರ್ಥಿಕ ಸಾಕ್ಷರತಾ ಶಿಬಿರ ಗ್ರಾಮದ ಸರ್ಕಾರಿ ಪ್ರೌಡಶಾಲೆಯಲ್ಲಿ ಆರ್ಥಿಕ ಸಾಕ್ಷರತಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಶಿಬಿರದಲ್ಲಿ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಗೋಕಾಕ ಸಮಾಲೋಚಕರಾದ ಸಿ.ಡಿ.ಹಂಜಿ ಯವರು ವಿದ್ಯಾರ್ಥಿಗಳಿಗೆ ಆರ್ಥಿಕ ಸಾಕ್ಷರತಾ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ನಂತರ ಮಕ್ಕಳ ವಿದ್ಯಾಬ್ಯಾಸದ ಅನೂಕೂಲಕ್ಕಾಗಿ ಸುಮಾರು 6000 ರೂ ಬೆಲೆಬಾಳುವ ನಾಲ್ಕು ಸಿಲಿಂಗ್ ಪ್ಯಾನಗಳನ್ನು ಕೊಡುಗೆಯಾಗಿ ನೀಡಿದರು.
ಶಾಲೆಯ ಪ್ರಧಾನ ಗುರುಗಳು ಬಿರಾದರ ಅಧ್ಯಕ್ಷತೆ ವಹಿಸಿದ್ದರು. ಪ್ರಥಮ ದರ್ಜೆಯ ಗುತ್ತಿಗೆದಾರರಾದ ಲಕ್ಷ್ಮಣ ದಂಡಿನ ಹಾಗೂ ಎಸ್ ಡಿ ಎಮ್ ಸಿ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 160 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಎಸ್ ಡಿ ಎಮ್ ಸಿ ಸದಸ್ಯರು, ಸಿಬ್ಬಂದ್ದಿ ವರ್ಗ ಹಾಗೂ ವಿದ್ಯಾರ್ಥಿಗಳು ಗ್ರಾಮದ ಜನತೆ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಗೋಕಾಕ ಸಮಾಲೋಚಕರಾದ ಸಿ.ಡಿ.ಹಂಜಿ ಯವರ ಈ ಕಾರ್ಯವನ್ನು ಶ್ಲಾಘಿಸಿದರು.

loading...

LEAVE A REPLY

Please enter your comment!
Please enter your name here