ರೈತರಿಗಾಗಿ ಸಮ್ಮೇಳನ

0
31
loading...

news29 photo
ಹೊನ್ನಾವರ,30: ಜಿಲ್ಲೆ ರೈತರ ಸಮಸ್ಯೆಗಳು, ರೈತ ಸಂಘಟನೆಯ ಕುರಿತು ಜಿಲ್ಲೆಯ ರೈತ ಕಾರ್ಯಕರ್ತ ಬಂಧುಗಳು ಒಂದೆಡೆ ಸೇರಿ ಹಕ್ಕೋತ್ತಾಯ ಮಂಡಿಸಲು ಭಾರತೀಯ ಕಿಸಾನ್ ಸಂಘ ಉ.ಕ. ಜಿಲ್ಲಾ ಸಮ್ಮೇಳನವನ್ನು ನ.3 ಮಂಗಳವಾರ ಹವ್ಯಕ ಸಭಾಭವನ ಕರ್ಕಿಯಲ್ಲಿ ಆಯೋಜಿಸಲಾಗಿದೆ ಎಂದು ಉತ್ತರ ಪ್ರಾಂತದ ಕಾರ್ಯಧರ್ಶಿ ಶ್ರೀಧರ ಹೆಬ್ಬಾರ ಹೇಳಿದರು. ಅವರು ಹೊನ್ನಾವರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ರೈತ ಬೆಳೆದ ಬೆಳೆಗೆ ಮೌಲ್ಯಧಾರಿತ ಬೆಲೆ ಸಿಗದೆ ರೈತ ಕಳೆದ 4-5 ವರ್ಷಗಳಿಂದ ಸಣ್ನ ಪುಟ್ಟ ಉದ್ಯೋಗಕ್ಕೆ ಹೋಗುತ್ತಿದ್ದಾನೆ.
ಭಾರತೀಯ ಕಿಸಾನ್ ಸಂಘ ಹರ್ ಕಿಸಾನ ಹಮಾರಾ ನೇತಾ ಎಂಬ ಧ್ಯೇಯ ಉದ್ದೇಶ ಹೊಂದಿದ್ದು ರೈತರಿಗೆ ಸ್ಥೈರ್ಯ ತುಂಬುವ ಉದ್ದೇಶದಿಂದ ಸಮ್ಮೇಳನ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ಬವಿಷ್ಯದಲ್ಲಿ ಕುಷಿಗೆ ಯುವಕರ ಅಭಾವ, ಅದರ ಪರಿಣಾಮ ಕಡಿಮೆ ಬೆಲೆಯ ಕೃಷಿಯ ಅವಶ್ಯ ಯಂತ್ರಗಳ ಸಂಶೋಧನೆಯ ಅವಶ್ಯಕತೆ ಮತ್ತು ಸಮಸ್ಯೆಗಳು ಹಾಗೂ ಇತರ ಸಮಸ್ಯೆಗಳ ಮೇಲೆ ಬೆಲಕು ಚಲ್ಲಲು ವಿವಿಧ ವಿಷಯಗಳ ಮೇಲೆ ಸಂಪನ್ಮೂಲ ವ್ಯಕ್ತಿಗಳಿಂದ ಗೋಷ್ಠಿಗಳು ನಡೆಯಲಿದೆ ರೈತ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೊರಿದರು ಸಭÁಕಾರ್ಯಕ್ರಮ ಮಂಜಾನೆ 9-30ರಿಂದ 11-00 ಗಂಟೆಯವರೆಗೆ. ಮಾಜಿ ಶಾಸಕ ಡಾ. ಎಂ .ಪಿ.ಕರ್ಕಿ ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಲಿದ್ದಾರೆ.
ಅಧ್ಯಕ್ಷತೆಯನ್ನು ಭಾರತೀಯ ಕಿಸಾನ್ ಸಂಘದ ರಾಜ್ಯಾಧ್ಯಕ್ಷ ವೈ. ರಂಗನಾಥ ವಹಿಸಲಿದ್ದಾರೆ. ಮುಖ್ಯ ಅತಿಥಿ ಉಜ್ವಲ್ ಕುಮಾರ ಘೋಷ ಪಾಲ್ಗೋಳ್ಳುವರು. ಕಿಸಾನ್ ಸಂಘದ ಪ್ರಮುಖರಾದ ಜಯರಾಮ ಬೊಳ್ಳಾಚೆ, ರಾಘವೇಂದ್ರ ಕಾಮಟಗಿ. ಶ್ರೀಧರ ಹೆಬ್ಬಾರ, ಶಿವರಾಮ ಗಾಂವಕರ, ಎಂ.ಡಿ.ನಾಯ್ಕ. ಎಂ.ಆರ್ ಹೆಗಡೆ, ಸತ್ಯನಾರಾಯಣ ಹೆಗಡೆ, ನರಸಿಂಹ ಮೂರ್ತಿ ಹೆಗಡೆ, ಸತ್ಯನಾರಾಯಣ ಉಡುಪ, ಪರಮೇಶ್ವರ ಭಟ್ಟ ಅಗ್ನಿ, ಆರ್.ಕೆ.ಹೆಗಡೆ ಉಪಸ್ಥಿತರಿರುವರು. ಪ್ರಥಮಗೋಷ್ಠಿ 11ರಿಂದ 12ಗಂಟೆಯವರೆಗೆ, ವಿಷಯ: ಬರಡುಭೂಮಿಯಲ್ಲಿ ಅರಣ್ಯ ಕೃಷಿ ಉತ್ಪಾದನೆ ಕುರಿತು ಪ್ರಕಾಶಹೆಗಡೆ ಮಂಚಾಲೆ ಸಾಗರ ವಿಚಾರಮಂಡಿಸಲಿದ್ದಾರೆ.
ಚಿತ್ರಗಳ ಪ್ರಾತ್ಯಕ್ಷತೆ ಕುರಿತು ಸಂದೀಪಹೆಗಡೆ ವಿಚಾರಮಂಡಿಸಲಿದ್ದಾರೆ, 2ನೆ ಗೋಷ್ಟಿ 12 ರಿಂದ 1-30ರವರೆಗೆ. ವಿಷಯ: ಕೃಷಿ ಅರಣ್ಯ ಅವಶ್ಯಕತೆ ಮತ್ತು ಇಲಾಖಾ ಸವಲತ್ತುಗಳು ಕುರಿತು ಡಿ.ಎಫ ಓ ವಸಂತ ರೆಡ್ಡಿ ವಿಚಾರಮಂಡಿಸಲಿದ್ದಾರೆ. ವಿಷಯ: ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956 ಮತ್ತು ರೈತ ಮಾಲ್ಕಿ ಜಮೀನಿನ ಭೂಸ್ವಾದೀನ ಮತ್ತು ಮಾಲ್ಕಿ ಮರಗಳ ಮೌಲ್ಯ ಮಾಪನ ಕುರಿತು ಎ.ಸಿ ಎಫ್ ಲಕ್ಷ್ಮಿನಾರಾಯಣ ಬೆಂಗಳೂರು ವಿಚಾರ ಮಂಡಿಸಲಿದ್ದಾರೆ.
ಗೋ ಆಧಾರಿತ ಕೃಷಿ, ರೈತರಬೆಳೆಗಳಿಗೆ ವೈಜ್ಷಾನಿಕ ಬೆಲೆ, ರೈತರ ಆತ್ಮಹತ್ಯಗೆ ಮೂಲಕಾರಣಗಳ ಕುರಿತು ಜಯರಾಮ ಬೊಳ್ಳಾಜೆ, ವಿಚಾರಮಂಡಿಸಲಿದ್ದಾರೆ. 3ನೆ ಗೋಷ್ಟಿ 2-15ರಿಂದ 3-15ರವರೆಗೆ ವಿಷಯ: ಕೃಷಿ ಉಪಕರಣಗಳ ಸಹಾಯ ಧನ, ಸಮಸ್ಯೆಗಳು, ಪರಿಹಾರಗಳು, ಕೃಷಿಯಂತ್ರಗಳ ಸಂಶೋಧನೆಯ ಅವಶ್ಯಕತೆಗಳ ಕುರಿತು ನರಸಿಂಹಮೂರ್ತಿ ಹೆಗಡೆ, ಕೃಷಿ ಪಂಡಿತ ಪುರಸ್ಕತರು ಇವರು ವಿಚಾರಮಂಡಿಸಲಿದ್ದಾರೆ. ವಿಷಯ: ವಿದ್ಯುತ ಸಮಸ್ಯೆಗಳ ಕುರಿತು ಸತ್ಯನಾರಾಯಣ ಉಡುಪ ವಿಚಾರ ಮಂಡಿಸಲಿದ್ದಾರೆ. ರೈತರ ಮತ್ತು ಬ್ಯಾಂಕಗಳ ಸಂಭಂಧ ಕುರಿತು ಎನ್ ಎಲ್ ಹೆಗಡೆ, ನಿವೃತ್ತ ಪ್ರಾಚಾರ್ಯರು ಹೊಸಕುಳಿ ಇವರು ಮಂಡಿಸಲಿದ್ದಾರೆ.
4ನೇ ಗೋಷ್ಟಿ 3-20ರಿಂದ 4-30ರವರೆಗೆ ವಿಷಯ: ಅರಣ್ಯ ಅತಿಕ್ರಮಣ, ರೈತರ ಸಮಸ್ಯೆಗಳು, ಅರಣ್ಯ ಕಾನೂನು ಸಮಸ್ಯೆ ನಿವಾರಣೆಗಳಿಗೆ ಮಾರ್ಗೊಪಾಯ, ಕಾಡುಪ್ರಾಣಿಗಳಿಂದ ರೈತರ ಬೆಳೆಗೆ ಬೆಳೆನಾಶಕ್ಕೆ ಪರಿಹಾರ ಕುರಿತು ಮಾಜಿ ಸಚಿವ ಆರ್. ಎನ್ ನಾಯ್ಕ ವಿಚಾರ ಮಂಡಿಸಲಿದ್ದಾರೆ. ಕಂದಾಯ ಕಾನೂನು ಸಮಸ್ಯೆ ನಿವಾರಣೆಗೆ ಮಾರ್ಗೊಪಾಯಗಳು ಕುರಿತು ಕೆ.ಎಸ್. ಭಟ್ಟ ಕರ್ಕಿ, ರೈತರ ಹಾಡಿ ಬೆಟ್ಟಗಳ ಸಮಸ್ಯೆ ಪರಿಹಾರ , ಕಂದಾಯ ಇಲಾಖೆ ಪಡೆದ ಕೆಲವು ಮಾಹಿತಿಗಳು. ಕುರಿತು ನಿವೃತ್ತ ಕಂದಾಯ ಅಧಿಕಾರಿ ಎಸ್.ಡಿ.ಅವಧಾನಿ ನವಿಲಗೋಣ ವಿಚಾರಮಂಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here