ಸಚಿವರಿಂದ ಪ್ರಕೃತಿ ವಿಕೋಪ ಪರಿಶೀಲನಾ ಸಭೆ

0
24
loading...

30 HLY NPS-1
ಹಳಿಯಾಳ,31: ಮಳೆಯ ತೀವೃ ಅಭಾವದಿಂದ ಬರಗಾಲ ಸ್ಥಿತಿ ಉದ್ಭವವಾಗಿರುವುದರಿಂದ ಪ್ರಕೃತಿ ವಿಕೋಪ ಪರಿಶೀಲನಾ ಸಭೆಯನ್ನು ಸಚಿವ ಆರ್.ವಿ. ದೇಶಪಾಂಡೆಯವರು ಅ. 30 ರಂದು ತಾಲೂಕ ಪಂಚಾಯತ ಸಭಾಭವನದಲ್ಲಿ ನೆರವೇರಿಸಿದರು.
44 ವರ್ಷಗಳ ನಂತರ ರಾಜ್ಯದಲ್ಲಿ ಭೀಕರ ಬರಗಾಲ ಬಂದಿದ್ದು, ದುಡಿಯುವ ಕೈಗಳಿಗೆ ಕೆಲಸ ನೀಡುವುದು. ಬೆಳೆಹಾನಿ ಸಮೀಕ್ಷೆ ಮಾಡುವುದು, ಕುಡಿಯುವ ನೀರಿನ ಕೊರತೆ ನೀಗಿಸುವುದು, ಜಾನುವಾರುಗಳಿಗೆ ನೀರು-ಮೇವು ಸಮಸ್ಯೆ ಉದ್ಭವವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ದೇಶಪಾಂಡೆಯವರು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ ಇವರು ಸಂಯೋಜಿಸಿರುವ ತಾಲೂಕಿನಾದ್ಯಂತ ಗ್ರಾಮ ಪಂಚಾಯತಿಗಳ 2015-16 ರಿಂದ 2019-20ರ ವರೆಗೆ ಗ್ರಾಮೀಣ ಅಭಿವೃದ್ಧಿ ಯೋಜನೆ ತಯಾರಿಕೆ ಕ್ರಿಯಾ ಯೋಜನೆಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.
ಎಂಎಲ್‍ಸಿ ಎಸ್.ಎಲ್. ಘೋಟ್ನೇಕರ, ತಾಲೂಕ ಪಂಚಾಯತ ಅಧ್ಯಕ್ಷೆ ಇಂದುಬಾಯಿ ನಾಗೇಂದ್ರ ಗೌಡಾ, ಉಪಾಧ್ಯಕ್ಷೆ ರೇಣುಕಾ ಶಂಕರ ನಾಯ್ಕ, ಜಿ.ಪಂ. ಸದಸ್ಯರಾದ ಕೃಷ್ಣಾ ಪಾಟೀಲ, ನಂದಾ ಕೋರ್ವೆಕರ, ಪುರಸಭೆ ಅಧ್ಯಕ್ಷೆ ಪ್ರೇಮಾ ಅಶೋಕ ತೋರಣಗಟ್ಟಿ, ಉಪಾಧ್ಯಕ್ಷ ಫಯಾಜ ಶೇಖ ವೇದಿಕೆಯಲ್ಲಿದ್ದರು.
ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು, ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷ, ಅಭಿವೃದ್ಧಿ ಅಧಿಕಾರಿಗಳು, ರೈತರ ಸೇವಾ ಸಹಕಾರಿ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಾಹಕರುಗಳು ಮೊದಲಾದವರು ಸಭೆಯಲ್ಲಿದ್ದರು.

loading...

LEAVE A REPLY

Please enter your comment!
Please enter your name here