ಸದ್ನಳ್ಳಿ ಗ್ರಾಮದ ಭೂಸ್ವಾಧಿನ ರದ್ದುಪಡಿಸುವಂತೆ ಒತ್ತಾಯ

0
18
loading...

ಬೆಳಗಾವಿ:17  ಬಳ್ಳಾರಿ ನಾಲಾ ಯೋಜನೆಯಡಿ ಸಿದ್ನಳ್ಳಿ ಗ್ರಾಮದ ಸಮೀಪ ಜಲಾಶಯದ ವಿಷಯವಾಗಿ ಭೂಸ್ವಾದಿನಾಧಿಕಾರಿಗಳಿಗೆ ಮಾಡಿದ ಅಧಿಸೂಚನೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಶನಿವಾರ ಸದ್ನಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬಳ್ಳಾರಿ ನಾಲಾ ಯೋಜನೆಯಡಿಯಲ್ಲಿ ಮುಳುಗಡೆ ಹೊಂದಲಿರುವ ಗ್ರಾಮಗಳಿಗೆ ಖನಗಾಂವ ಬಿ,ಕೆ. ಹಾಗೂ ಚಂದೂರ ಗ್ರಾಮಗಳ ಜಮೀನನ್ನು ಸ್ವಾಧಿನಪಡಿಸಿಕೊಂಡು ಪುನರ್ ವಸತಿ ಪುನರ್ ನಿರ್ಮಾಣಕ್ಕೆ ಈ ಜಮೀನುಗಳನ್ನು ನೀಡಲು ನಿಶ್ಚಯಿಸಿರುವುದು ಖಂಡನೀಯವಾಗಿದೆ ಮನವಿಯಲ್ಲಿ ತಿಳಿಸಿದ್ದಾರೆ.
ಗ್ರಾಮಸ್ಥರು ಬಳ್ಳಾರಿ ನಾಲಾ ಯೋಜನೆಯಡಿಯಲ್ಲಿ ಜಮೀನುಗಳನ್ನು ಕಳೆದುಕೊಂಡವರಾಗಿದ್ದು ಹಾಗೂ ದಾಬೊಲಿಯನ್ ಗ್ಯಾಸ್ ಪೈಪಲೈನಿನವರು ಮತ್ತು ಕೆಪಿಟಿಸಿಎಲ್ ತಮ್ಮ ಜಮೀನುಗಳನ್ನು ವಶಪಡಿಸಿಕೊಂಡಿದ್ದಾರೆ. ಒಂದು ವೇಳೆ ಈ ಆದೇಶ ರದ್ದುಪಡಿಸದಿದ್ದರೆ ನಮ್ಮ ಕುಟುಂಬಗಳು ಬೀದಿಗೆ ಬರುತ್ತದೆ ಆದ್ದರಿಂದ ಈ ಆದೇಶವನ್ನು ರದ್ದು ಪಡಿಸುವಂತೆ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಖನಗಾಂವ ಹಾಗೂ ಚಂದೂರ ಗ್ರಾಮದ ರಹವಾಸಿಗಳು ಹಾಜರಿದ್ದರು.

loading...

LEAVE A REPLY

Please enter your comment!
Please enter your name here