ಸಹಾಯಕ ಕಮೀಷನರ್ ಕಚೇರಿ ಜಫು: ಕಚೇರಿ ಸಾಮಗ್ರಿ ವಶ

0
13
loading...

ಕುಮಟಾ,29: ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ ಕೋರ್ಟ್ ಅಧಿಕಾರಿಗಳು ಬುಧವಾರ ಸಹಾಯಕ ಕಮೀಷನರ್ ಕಚೇರಿಯನ್ನು ಜಫ್ತು ಮಾಡಿ, ಅಲ್ಲಿನ ಕಚೇರಿಯ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಲಿನ ಹೆಡ್ ಬಂದರ್‍ನಲ್ಲಿರುವ ಸಿಗಡಿ ಮೀನು ಸಾಕಾಣಿಕ ಕೇಂದ್ರ ನಿರ್ಮಿಸಲು ಜಮೀನು ನೀಡಿದ ಮಾಲೀಕರಿಗೆ ಹೆಚ್ಚಿನ ಪರಿಹಾರ ವಿತರಿಸದ ಕಾರಣಕ್ಕಾಗಿ ಕೋಟ್ ಅಧಿಕಾರಿಗಳು 3 ಕಂಪ್ಯೂಟರ್, 1 ಪ್ರಿಂಟರ್, 1 ಝೆರಾಕ್ಸ್ ಯಂತ್ರ, 34 ಪ್ಲಾಸ್ಟಿಕ್ ಖುರ್ಚಿ, 9 ಟೇಬಲ್, 4 ಬೆಂಚ್ ಮತ್ತು 14 ಕಟ್ಟಿಗೆಯ ಖುರ್ಚಿಗಳನ್ನು ವಶಪಡಿಸಿಕೊಂಡು ನ್ಯಾಯಾಲಯದ ಸುಪರ್ದಿಗೆ ನೀಡಿದ್ದಾರೆ.
ಹೆಡ್ ಬಂದರಿನ ಸಮೀಪ ಮೀನು ಸಾಕಾಣಿಕಾ ಕೇಂದ್ರ ನಿರ್ಮಿಸಲು 1989-90ರಲ್ಲಿ ಸ್ಥಳೀಯ ರಂಗದಾಸ ಪೈ ಮಾಲೀಕತ್ವದ 1.20 ಎಕರೆ ಜಮೀನನ್ನು ಆಗಿನ ಸಹಾಯಕ ಕಮೀಷನರ್ ಅವರನ್ನು ಸ್ವಾಧೀನ ಮಾಡಿಕೊಂಡಿದ್ದರು. ಸಹಾಯಕ ಕಮೀಷನರ್, ತಹಸೀಲ್ದಾರ್ ಸೇರಿದ ಜಂಟಿ ಸಮಿತಿಯ ಸಭೆಯಲ್ಲಿ ಗುಂಟೆಗೆ ಸುಮಾರು 120 ರೂ. ಯಂತೆ ಪರಿಹಾರ ವಿತರಿಸಲು ಅವಾರ್ಡ್ ಮಾಡಿದ್ದರು. ಆದರೆ ಹೆಚ್ಚಿನ ಪರಿಹಾರಕ್ಕಾಗಿ ಭೂ ಮಾಲೀಕರು ಕುಮಟಾದ ಹಿರಿಯ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶರು ಗುಂಟೆಗೆ 13,978 ರೂ. ಹೆಚ್ಚಿನ ಪರಿಹಾರ ನೀಡುವಂತೆ 2006ರಲ್ಲೆ ಆದೇಶಿಸಿದ್ದರು. ಆದರೆ ಕೋರ್ಟ್ ಆದೇಶದಂತೆ ಸಂತ್ರಸ್ತರಿಗೆ ಇಂದಿಗೂ ಪರಿಹಾರ ದೊರೆಯದ ಕಾರಣ ಹಿರಿಯ ಸಿವಿಲ್ ನ್ಯಾಯಾಧೀಶರು ಉಪವಿಭಾಗಾಧಿಕಾರಿ ಕಚೇರಿಯನ್ನು ಜಫ್ತು ಮಾಡುವಂತೆ ಬುಧವಾರ ಆದೇಶಿಸಿದ್ದಾರೆ. ಕೋಟ್ ಆದೇಶದಂತೆ ಅಧಿಕಾರಿಗಳು ಜಫ್ತು ಪ್ರಕ್ರಿಯೆ ಕೈಗೊಂಡಿದ್ದಾರೆ. ಈ ಕುರಿತು ಸಾಕಷ್ಟು ಬಾರಿ ಸಹಾಯಕ ಕಮೀಷನರ್ ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಲಕ್ಷಾಂತರ ರೂ. ಸರ್ಕಾರಿ ಹಣ ವ್ಯಯವಾಗುತ್ತಿದೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತರ ಪರವಾಗಿ ವಕೀಲ ಕೆ ಆರ್ ನಾಯ್ಕ ಹಾಗೂ ಶ್ರೀನಾಥ ಜಟ್ಟಿ ನಾಯ್ಕ ವಾದಿಸಿದ್ದರು.

loading...

LEAVE A REPLY

Please enter your comment!
Please enter your name here