ಸಾಯಿ ಬಾಬಾ 90ನೆ ಜನ್ಮದಿನೋತ್ಸವ

0
18
loading...

sayi ratayatre

ಕುಮಟಾ,31 : ಶ್ರೀ ಸತ್ಯಸಾಯಿ ಬಾಬಾರವರ 90ನೇ ಜನ್ಮದಿನೋತ್ಸವ ಹಾಗೂ ಸತ್ಯಸಾಯಿ ಸೇವಾ ಸಂಸ್ಥೆಗಳ ಸುವರ್ಣ ಮಹೋತ್ಸವದ ಪ್ರಯುಕ್ತ ಸತ್ಯಸಾಯಿ ಸಾಧನಾ ರಥಯಾತ್ರೆಯನ್ನು ಶುಕ್ರವಾರ ಗಿಬ್ ಸರ್ಕಲ್‍ನಲ್ಲಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು ರಥಯಾತ್ರೆಗೆ ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ಸಾಧನಾ ರಥಯಾತ್ರೆಯೊಂದಿಗೆ ಸುಮಾರು 500 ಸಾಧನಾಕಾಂಕ್ಷಿಗಳು ಆಗಮಿಸಿದ್ದರು. ರಥವು ಗಿಬ್ ಸರ್ಕಲ್‍ದಿಂದ ಕೋರ್ಟ ರಸ್ತೆ ಮಾರ್ಗವಾಗಿ ಗುಡಿಗಾರಗಲ್ಲಿ, ಸುಬಾಸ ರಸ್ತೆ, ಬಸ್ತಿಪೇಟೆ, ಕುಂಬೇಶ್ವರ ದೇವಸ್ಥಾನ ರಸ್ತೆ, ಮೂರಕಟ್ಟಾ ಹೋಗಿ ಅಲ್ಲಿಂದ ಪುನ: ಕುಂಬೇಶ್ವರ ದೇವಸ್ಥಾನ ರಸ್ತೆಯ ಮುಖಾಂತರ ಹಳೇ ಬಸ್ ನಿಲ್ದಾಣ, ಮಾಸ್ತಿಕಟ್ಟೆ ಸರ್ಕಲ್‍ದಿಂದ ಹೆದ್ದಾರಿ ಮೂಲಕ ಮೂರೂರು ರಸ್ತೆಯಲ್ಲಿರುವ ಹವ್ಯಕ ಕಲ್ಯಾಣ ಮಂಟಪಕ್ಕೆ ತಲುಪಿತು.
ಹವ್ಯಕ ಕಲ್ಯಾಣ ಮಂಟಪದಲ್ಲಿ ಶ್ರೀ ಸತ್ಯಸಾಯಿ ಬಾಬಾರವರ ರಥಕ್ಕೆ ಆರತಿ ಮಾಡಿ ಪ್ರಸಾದ ಭೋಜನದ ವ್ಯವ್ಯಸ್ಥೆ ಮಾಡಲಾಯಿತು. ನಂತರ ರಥಯಾತ್ರೆಯು ಕೋಡ್ಕಣಿ ಹಾಗೂ ಅಂಕೋಲಾದ ಮೂಲಕ ಕಾರವಾರ ತಲುಪಲಿದ್ದು, ಕಾರವಾರದಲ್ಲಿ ನ 2 ರಂದು ಸಮಾರೋಪ ಸಮಾರಂಭ ಜರುಗಲಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here