ಸೊಲು ಮತ್ತು ಗೆಲುವು ಪ್ರತಿಯೋಬ್ಬ ವಿದ್ಯಾರ್ಥಿಗಳು ಸಮಾನವಾಗಿ ಸ್ವಿಕರಿಸಿ: ಎನ್ ಶೆಟ್ಟಿ

0
63
loading...

 

ರಾಮದುರ್ಗ 31 : ಸೊಲು ಮತ್ತು ಗೆಲುವುಗಳನ್ನು ಪ್ರತಿಯೋಬ್ಬ ವಿದ್ಯಾರ್ಥಿಗಳು ಸಮಾನವಾಗಿ ಸ್ವಿಕರಿಸಿ. ಕ್ರೀಡಾಕೂಟದಲ್ಲಿ ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಬೇಕು ಎಂದು ಉದ್ಯಮಿ ವಿಜಯ ಎನ್ ಶೆಟ್ಟಿ ಹೇಳಿದರು.

ಸ್ಥಳೀಯ ಆಪ್ಟೇ ಸೋಶಿಯಲ್ ಕ್ಲಬ್ ಹಾಗೂ ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆಡಳಿತ ಬೆಳಗಾವಿ ಮತ್ತು ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ (ದ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಾಮದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶೇಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವದರಿಂದ ವಿದ್ಯಾರ್ಥಿಗಳು ಮಾನಸಿಕ ಹಾಗೂ ದೈಹಿಕವಾಗಿ ಸದೃಡವಾಗಿರಲು ಸಾಧ್ಯ ಎಂದು ಹೇಳಿದರು.

ಉದ್ಯಮಿಗಳಾದ ವೆಂಕಟೇಶ ಹಿರೇರಡ್ಡಿ ಮಾತನಾಡಿ ಇಂತಹ ಕ್ರೀಡೆಗಳು ಬಹಳಷ್ಟು ಗ್ರಾಮೀಣ ವಿದ್ಯಾರ್ಥಿಗಳಿಗೆ ಗೊತ್ತಿಲ್ಲ, ಕಾರಣ ಈ ಭಾಗದಲ್ಲಿ ನಡೆಯುತ್ತಿರುವ್ಯದರಿಂದ ವಿದ್ಯಾರ್ಥಿಗಳಿಗೆ ಪರಿಚಯಿಸದಂತೆಯಾಗಿದೆ ಆದ್ದರಿಂದ ವಿವಿಧ ಜಿಲ್ಲೆಗಳಿಂದ ಬಂದ ಎಲ್ಲ ಕ್ರೀಡಾಪಟುಗಳು ನಮ್ಮ ರಾಮದುರ್ಗದ ಆತಿಥ್ಯವನ್ನು ಸ್ವಕರಿಸಬೇಕು ಎಚಿದು ತಿಳಿಸಿದರು
ಅಧ್ಯಕ್ಷರು ಜ್ಯೇಂಟ್ಸ ಗ್ರುಫ್ ಅದ್ಯಕ್ಷರು ಶೇಫಿ ಬೆಣ್ಣಿ ಮಾತನಾಡಿ ವಿಭಾಗ ಮಟ್ಟದ ಶೇಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ನಡೆಯುತ್ತಿರುವುದು ತುಂಬಾ ಸಂತೋಷ ಆದ್ದರಿಂದ ಇಲ್ಲಿ ವಿಜೇತವಾದÀ ತಂಡಗಳು ರಾಜ್ಯ ಹಾಗೂ ರಾಷ್ಡ್ರಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಬೆಳಗಾವಿ ವಿಭಾಗದ ಕಿರ್ತಿ ತರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಆಪ್ಟೇ ಸೋಶಿಯಲ್ ಕ್ಲಬ್ ಅಧ್ಯಕ್ಷ ಬಿ ಎಚ್ ಸಂಕನವರ ಅದ್ಯಕ್ಷತೆ ವಹಿಸಿ ಮಾತನಾಡಿ ಉಪಸ್ಥಿತಿ ಪುರಸಭೆಯ ಸದಸ್ಯ ರಾಜು ಮಾನೆ, ಚಂದ್ರು ಮಾಳದಕರ. ಮುತ್ತು ಪತ್ಯೆಪೂರ,ಪತ್ರಕರ್ತ ಸಂಘದ ನೂತನ ಅಧ್ಯಕ್ಷ ಈರಣ್ಣ ಬುಡ್ಡಾಗೋಳ,ಪಿ ಜೆ ಲಮಾಣಿ. ರವಿ ರಾಠೋಡ, ಮಹಾಂತೇಶ ಪಟ್ಟಣ, ಗುಲಾಮ ಸರ್ಕಾಜಿ,ಅನಿಲ ಹಲ್ಯಾಳ,ರವಿ ಕೋಳದೂರ, ಕೆ. ಆರ್ ಕಂಬಾರ,ಭಾಗವಹಿದ್ದರು ಸ್ವಾಗತ ಆರ್ ಎಸ್ ವಾಸನದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ನಿರೂಪಣೆ ಪಿ ಡಿ ಕಾಲವಾಡ, ಎಂ ಬಿ, ಮುಕಾರಿ ವಂದಿಸಿದರು, ವ್ಯಾಪಾರಸ್ಥರು ರಾಮದುರ್ಗ

loading...

LEAVE A REPLY

Please enter your comment!
Please enter your name here