ಹಳಿಯಾಳದ ಹೈಟೆಕ್ ಗ್ರಂಥಾಲಯ

0
27
loading...

29 HLY NPS-1
• ಶಾಪುರಕರ ನಾಗರಾಜ
ಹಳಿಯಾಳ,30: ರಾಜ್ಯದಲ್ಲಿಯೇ ಮಾದರಿಯಾಗಬಹುದಾದ ಹೈಟೆಕ್ ಗ್ರಂಥಾಲಯ ಕಟ್ಟಡವೊಂದು ತಾಲೂಕಾ ಕೇಂದ್ರ ಹಳಿಯಾಳದಲ್ಲಿ ನಿರ್ಮಾಣಗೊಂಡಿದ್ದು, ಅ. 31 ರಂದು ಉದ್ಘಾಟನೆಗೊಳ್ಳಲಿದೆ.
ರಾಜ್ಯ ಹಣಕಾಸು ಆಯೋಗ (ಎಸ್‍ಎಫ್‍ಸಿ) ವಿಶೇಷ ಅನುದಾನದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಪುರಸಭೆ ವತಿಯಿಂದ ಈ ಹೈಟೆಕ್ ಗ್ರಂಥಾಲಯ ನಿರ್ಮಾಣಗೊಂಡಿದ್ದು, ಈ ಮೊದಲು ಹಲವಾರು ದಶಕಗಳಿಂದ ಇದ್ದ ಹಳೆಯ ಗ್ರಂಥಾಲಯ ಕಟ್ಟಡವನ್ನು ತೆರವುಗೊಳಿಸಿ ಅದೇ ನಿವೇಶನದಲ್ಲಿ ಎರಡಂತಸ್ತಿನ ಹೊಸ ಗ್ರಂಥಾಲಯ ನಿರ್ಮಾಣಗೊಂಡಿದೆ. ಸದರಿ ಗ್ರಂಥಾಲಯ ನಿವೇಶನವನ್ನು ಹಾಗೂ ಕಟ್ಟಡವನ್ನು ದಾನರೂಪದಲ್ಲಿ ನೀಡಿದ್ದ ರಾವಬಹದ್ದೂರ ಗೋಪಾಲ ಗಿರಿ ಇವರ ಹೆಸರನ್ನೇ ಹೊಸ ಗ್ರಂಥಾಲಯಕ್ಕೂ ಸಹ ಮುಂದುವರೆಸಲಾಗುತ್ತಿದೆ.
ಪುರಸಭೆ ಕಾರ್ಯಾಲಯದ ಪಕ್ಕದಲ್ಲಿಯೇ ವಿ.ಆರ್.ದೇಶಪಾಂಡೆ ಮುಖ್ಯರಸ್ತೆಯಲ್ಲಿರುವ ಈ ಹೈಟೆಕ್ ಗ್ರಂಥಾಲಯವನ್ನು ಮುಖ್ಯಾಧಿಕಾರಿ ಮನ್ಸೂರಅಲಿ, ಇಂಜಿನೀಯರ್ ಹರೀಶ ಇವರುಗಳ ನಿರ್ದೇಶನದಲ್ಲಿ ಹಿರಿಯ ಗುತ್ತಿಗೆದಾರ ಟಿ.ಆರ್. ನಾಕಾಡಿ ಇವರು ನಿರ್ಮಿಸುತ್ತಿದ್ದಾರೆ. ಎರಡು ಅಂತಸ್ತು ಸೇರಿ 3600 ಚದರ ಅಡಿ ಇದೆ. ಗಾಳಿ, ಬೆಳಕು ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದ್ದು, ವಾತಾವರಣಕ್ಕೆ ಅಂದಗೆಡದ ಎಸಿಪಿ ಪ್ಯಾನೆಲ್‍ಗಳನ್ನು ಕಟ್ಟಡದ ಹೊರಮೈಗೆ ಅಳವಡಿಸಲಾಗಿದ್ದು, ಇದರಿಂದ ಕಟ್ಟಡದ ಸೌಂದರ್ಯ ಆಕರ್ಷಣೀಯವಾಗಿದೆ.
ಈ ನೂತನ ಗ್ರಂಥಾಲಯ ಕಟ್ಟಡಕ್ಕೆ ಲಗತ್ತಾಗಿ ಕೆಲ ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಮತ್ತೊಂದು ಗ್ರಂಥಾಲಯ ಕಟ್ಟಡವಿದೆ. ಮಾತ್ರವಲ್ಲದೇ 20 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ಮಕ್ಕಳ ಗ್ರಂಥಾಲಯವನ್ನೂ ಸಹ ನಿರ್ಮಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಮನ್ಸೂರಅಲಿ ಮಾಹಿತಿ ನೀಡಿದ್ದಾರೆ.

ಉದ್ಘಾಟನೆ, ಶಂಕು ಸ್ಥಾಪನೆ: ಈ ಹೈಟೆಕ್ ಗ್ರಂಥಾಲಯ ಕಟ್ಟಡದ ಉದ್ಘಾಟನೆ ಹಾಗೂ ನೂತನವಾಗಿ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮಕ್ಕಳ ಗ್ರಂಥಾಲಯದ ಶಂಕು ಸ್ಥಾಪನೆ ಸಮಾರಂಭವನ್ನು ಅ. 31 ಶನಿವಾರ ಬೆಳಿಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ. ಸಚಿವ ಆರ್.ವಿ. ದೇಶಪಾಂಡೆ, ಎಂಎಲ್‍ಸಿ ಎಸ್.ಎಲ್. ಘೋಟ್ನೇಕರ ಪಾಲ್ಗೊಳ್ಳುವ ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ಪ್ರೇಮಾ ಅಶೋಕ ತೋರಣಗಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

loading...

LEAVE A REPLY

Please enter your comment!
Please enter your name here