ಹು-ಧಾ ಪಾಲಿಕೆಯ ಸಾಮಾನ್ಯ ಸಭೆ : ಇಬ್ಬರು ಅಧಿಕಾರಿಗಳ ವಜಾಕ್ಕೆ ಆದೇಶ

0
31
loading...

7
ಹುಬ್ಬಳ್ಳಿ ,30 : ಇಂದು ಬೆಳಿಗ್ಗೆ 11-30ಕ್ಕೆ ಮಹಾಪೌರರು ಪಾಲಿಕೆಯ ಸಾಮಾನ್ಯ ಸಭೆಗೆ ಆಗಮಿಸುತ್ತ್ತಿದ್ದಂತೆ ಪಾಲಿಕೆ ಸದಸ್ಯ ವೀರಣ್ಣ ಸವಡಿಯವರು ಗಮನ ಸೆಳೆಯು ಸೂಚನೆಗೆ ಮಹಾಪೌರರ ಮುಖಾಂತರ ಆಯುಕ್ತರನ್ನು ನಗರದ ಹಾಳಾದ ರಸ್ತೆಗಳ ಬಗ್ಗೆ ಪ್ರಸ್ತಾಪಿಸಿದಾಗ ಇದಕ್ಕೆ ಆಯುಕ್ತರು ಉತ್ತರಿಸಿದರು. ನಂತರ ಮಾಜಿ ಮೇಯರ ಪ್ರಕಾಶÀ ಕ್ಯಾರಕಟ್ಟಿ 1976, 1978,2009ರ ಕೆಎಂಸಿ ಆ್ಯಕ್ಟ ಪ್ರಕಾರ ಹಿಂದುಳಿದ ವರ್ಗಗಳಿಗೆ ಮೀಸಲಾಗಿದ್ದ ವಾಣಿಜ್ಯ ಮಳಿಗೆಗಳನ್ನು ನೀಡುವ ಕುರಿತು ಮಾತನಾಡಿದಾಗ ಸಾಮಾಜಿಕ ನ್ಯಾಯ ಆರೋಗ್ಯ, ಶಿಕ್ಷಣ,ಸ್ಥಾಯಿಸಮಿತಿಯ, ಅಧ್ಯಕ್ಷರಾದ ಮಹೇಶ ಬುರಲಿಯವರು ಅಧಿಕಾರಿಗಳ ಹತ್ತಿರ ಇದರ ಬಗ್ಗೆ ವಿವರ ಕೇಳಿ ಕ್ಯಾರಕಟ್ಟಿಯವರಿಗೆ ಉತ್ತರಿಸಿದಾಗ ಸ್ಪಷ್ಟವಾದ ಮಾಹಿತಿ ದೊರಕದೆ ಅಸಮಾಧಾನಗೊಂಡ ಕ್ಯಾರಕಟ್ಟಿ ಅಧಿಕಾರಿಗಳಿಂದ ಆದಷ್ಟು ಬೇಗನೆ ಸ್ಪಷ್ಟ ಮಾಹಿತಿಯನ್ನು ಒದಗಿಸುವಂತೆ ಮಾಹಾಪೌರರನ್ನು ಒತ್ತಾಯಿಸಿದರು.

ರಸ್ತೆಗಳು ಧೂಳು ತುಂಬಿರುವದರಿಂದ ಜನರಿಗೆ ವಿವಿಧ ಕಾಯಿಲೆ ಅಂಟಿಕೊಳ್ಳುವ ಸಾಧ್ಯತೆ ಇದ್ದು ರಸ್ತೆ ಕೆಲಸ ಪ್ರಾರಂಭವಾಗಿ ಮುಗಿಯುವವರೆಗೆ ದಿನಕ್ಕೆ ನಾಲ್ಕು ಹೊತ್ತು ನೀರು ಹೊಡೆಯುವಂತೆ ಪಾಲಿಕೆ ಸದಸ್ಯ ಡಿಕೆ ಚವ್ಹಾಣ ಒತ್ತಾಯಿಸಿದರು. ಧಾರವಾಡದ ಪಾಲಕೆ ಸದಸ್ಯೆ ಶೈಲಾ ಕಾಮರೆಡ್ಡಿ ಮಾತನಾಡಿ ಧಾರವಾಡದ ತಮ್ಮ ವಾರ್ಡ ವ್ಯಾಪ್ತಿಯಲ್ಲಿ ಅಂಗಡಿ ಮತ್ತು ಮನೆಗಳ ಮಾಲಕರು ರಸ್ತೆಗಳನ್ನು ಒತ್ತುವರಿ ಮಾಡಿರುವದರಿಂದ ರಸ್ತೆಗಳು ಕಿರಿದಾಗಿವೆ ಆದ್ದರಿಂದ ಒತ್ತುವರಿಯನ್ನು ಶೀಘ್ರವಾಗಿ ತೆರವು ಗೊಳಿಸುವಂತೆ ಮಾಹಾಪೌರರನ್ನು ಆಗ್ರಹಿಸಿದರು. ಪಾಲಿಕೆ ಸದಸ್ಯ ಮಂಜುನಾಥ ಚಿಂತಗಿಂಜಲ ಮಾತನಾಡಿ ಪಾಲಿಕೆಯಿಂದ ಹಾಕಿದ ಹೊಸ ಯುಜಿಡಿ ಪೈಪಗಳನ್ನು ತೆಗೆದು ಟೆಲಿಫೋನ್ ಕೇಬಲ್ ಹಾಕುವವರು ಮತ್ತು 24/7ನೀರಿನ ಪೈಪುಗಳ ಜೋಡಣೆ ಮಾಡುವವರು ಆವಾಂತರ ಸೃಷ್ಠಿಸಿದ್ದಾರೆಂದರು.

ಪಾಲಿಕೆ ಯಾವುದೇ ಅಧಿಕಾರಿಗಳು ಕಾಮಗಾರಿಯ ಮೇಲ್ವಿಚಾರಣೆ ಮಾಡದ ಕಾರಣ ಅಲ್ಲಲ್ಲಿ ಗುಂಡಿತೋಡಿ ಮುಚ್ಚದೆ ಹಾಗೆ ಬಿಟ್ಟು ರಸ್ತೆಗಳ ಎರಡೂ ಬದಿಗೆ ಮತ್ತು ರಸ್ತೆ ನಡುವೆ ಹೊಸ ಹೊಸ ಗುಂಡಿಗಳನ್ನು ತೊಡಿಕೊಂಡು ಹೊಗುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಪಾಲಿಕೆ ಅಧಿಕಾರಿಗಳಿಂದ ಆಗುತ್ತಿಲ್ಲವೆಂದು ಅಲವತ್ತು ಕೊಂಡರು. ಸದಸ್ಯ ರಾಮಣ್ಣ ಬಡಿಗೇರ ಮಾತನಾಡಿ 22ಗ್ರಾಮಗಳಿಂದ ನಿರ್ಮಿತವಾದ ಹುಬ್ಬಳ್ಳಿ –ಧಾರವಾಡ ಮಹಾನಗರ ಪಾಲಿಕೆ ನಿರ್ಮಿತವಾಗಿದೆ. ಇತ್ತೀಚಗೆ ಗ್ರಾಮಗಳು ಪಾಲಿಕೆ ವ್ಯಾಪ್ತಿಗೆ ಸೇರಿದ್ದರಿಂದ. ಗ್ರಾಮ ಪಂಚಾಯತಿ ನಿಯಮಗಳ ಪ್ರಕಾರ ಪರವಾನಿಗೆ ಪಡೆದು ಮನೆ ಕಟ್ಟಿದವರಿಗೆ ಮತ್ತೆ ಪಾಲಿಕೆಯ ಪರವಾನಿಗೆ ತೆಗೆದುಕೊಳ್ಳುವದು ಅನಿವಾರ್ಯ ಎಂದು ಹೇಳಿದಾಗ ಮಾಜಿ ಮೇಯರ ಪಾಂಡುರಂಗ ಪಾಟೀಲ ಮಧ್ಯ ಪ್ರವೇಶಿಸಿ ಗ್ರಾಮ ಪಂಚಾಯತಿಯಲ್ಲಿ ಪರವಾನಿಗೆ ಪಡೆದು ಕೊಂಡವರು ಪಾಲಿಕೆಯಲ್ಲಿ ಪರವಾನಗೆ ತೆಗೆಯುವ ಅವಶ್ಯಕತೆ ಇಲ್ಲ ಎಂದು ತಿಳಿ ಹೇಳಿದರು.

ಎಸ್.ಸಿ.ಎಸ್.ಟಿ. ಯವರಿಗೆ ಪಾಲಿಕೆಯಿಂದ ಸಿಗಬೇಕಾದ ಸೌವಲತ್ತುಗಳು ಮೋಟಕು ಗೊಂಡ ಬಗ್ಗೆ ಸಾರ್ವಜನಿಕ ಸಂಪರ್ಕಅಧಿಕಾರಿ ನರೇಗಲ್ ಮಾತನಾಡಿ ಇತ್ತಿತ್ತಲಾಗಿ ಪಾಲಿಕೆ ಬಜೆಟ್‍ನಲ್ಲಿ ಹಿಂದುಳಿದವರಿಗೆ ಸವಲತ್ತಗಳನ್ನು ನೀಡಲು ಜಿಲ್ಲಾ ಮ್ಯಾಜಿಸ್ಟೇಟರ್‍ಗೆ ಸರಕಾರ ಆದೇಶಿಸಿರುವದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಸವಲತ್ತು ನೀಡಲು ಮ್ಯಾಜಿಸ್ಟೇಟರರಿಂದ ಅನುಮತಿ ಮುಖ್ಯ ಎಂದರ ಸದಸ್ಯ ಕ್ಯಾರಕಟ್ಟಿಯವರ ಪ್ರಶ್ನೆಗೆ ಉತ್ತರಿಸಿದರು. ಈಸಮಯದಲ್ಲಿ ಕ್ಯಾರಕಟ್ಟಿ ಮಾತನಾಡಿ ನಾನು1990 ನೇ ಇಸ್ವಿಯಿಂದ ಪಾಲಿಕೆ ಸದಸ್ಯನಾಗಿದ್ದೇನೆ. ಇತ್ತೀಚೆಗೆ ಸರಕಾರ ಪಾಲಿಕೆಗಳಿಂದ ಎಲ್ಲ ಅಧಿಕಾರವನ್ನು ಕಿತ್ತು ಕೊಂಡು ಜಿಲ್ಲಾಡಳಿತಕ್ಕೆ ನೀಡುತ್ತ ಬಂದಿರುವದು ಕೌನ್ಸಿಲ್ ಗೆ ಮಾಡುತ್ತಿರುವ ದೊಡ್ಡ ಅನ್ಯಾಯವಾಗಿದೆ ಎಂದರು. ಈ ವಿಷಯವಾಗಿ ಸರಕಾರದ ಜೊತೆಗೆ ಪತ್ರ ವ್ಯವಹಾರ ಮಾಡಿ ಪಾಲಿಕೆಯಲ್ಲಿರುವ ಪ್ರಜಾಪ್ರತಿನಿಧಿಗಳಿಂದ ಅಧಿಕಾರ ಕಿತ್ತುಕೊಳ್ಳುಲು ಕಾರಣ ತಿಳಿಯಬೇಕಾಗಿದೆಯಂದರು. ಮಾಜಿ ಮೇಯರ ಪಾಂಡುರಂಗ ಪಾಟೀಲ ಇದಕ್ಕೆ ಧ್ವನಿಗೂಡಿಸಿದರು.

ಪಾಲಿಕೆ ಸದಸ್ಯ ಹಿರೇಮನಿ ಮಾತನಾಡಿ ತಮ್ಮ ವಾರ್ಡಿನ ಬಗ್ಗೆ ಮಾತನಾಡಲು ಅವಕಾಶ ನೀಡದಿದ್ದಕ್ಕೆ ಸಿಡಿಮಿಡಿಗೊಂಡರು. ಗಣೇಶ ಟಗರಗುಂಟಿ ಮಾತನಾಡಿ ಪಾಲಿಕೆ ಸಿವಿಲ್ ಕಾಮಗಾರಿ ಎಲ್ಲೇ ನಡೆದರೂ ಅದಕ್ಕೆ ಸರಿಯಾದ ಪಾಲಿಕೆ ಮೇಲ್ವಿಚಾರಣೆಯಿಲ್ಲದೆ ಗುತ್ತಿಗೆದಾರ ಅಲ್ಲಲ್ಲಿ ಕಟ್ಟಡದ ತ್ಯಾಜ್ಯಗಳನ್ನು ರಸ್ತೆ ಮೇಲೆ ಬಿಟ್ಟು ಹೊಗುವದರಿಂದ ರಸ್ತೆ ಮೇಲೆ ಜನರು ಅಲೆದಾಡುವದು ಅಲ್ಲದೇ ವಾಹನ ಓಡಿಸುವದಕ್ಕ ಎತೊಂದರೆ ಯಾಗುವದರಿಂದ ಗುತ್ತಿಗೆದಾರರು ರಸ್ತೆಗಳನ್ನು ಸ್ವಚ್ಛ ಮಾಡುವವರೆಗೆ ಎನ್‍ಓಸಿ ನೀಡಬಾರದೆಂದು ಮಹಾಪೌರರನ್ನು ಒತ್ತಾಯಿಸಿದರು. ಮಾರ್ಕೆಟ್ ಇನೆಸ್ಪೆಕ್ಟರ್ ರಾಯ್ಕರ ಅನಧಿಕೃತವಾಗಿ ಜನರನ್ನು ಬಿಟ್ಟು ಮಾರುಕಟ್ಟಯಲ್ಲಿ ಹಣ ಸಂಗ್ರಹ ಮಾಡುತ್ತಿರುವದು ಕಾನೂನು ಬಾಹೀರ ವಿಷಯವಾಗಿದ್ದು ತಕ್ಷಣ ಅವರನ್ನು ವಜಾ ಮಾಡಬೇಕೆಂದು ಪಾಲಿಕೆ ಸದಸ್ಯ ಲಕ್ಷ್ಮಣ ಗಂಡಗಾಳೇಕರ ವಿಡಿಯೋ ಕ್ಲಿಪ್ ಸಾÀಮಾನ್ಯ ಸಭೆಯಲ್ಲಿ ಪ್ರದರ್ಶಿಸಿದರು.

ಇದಕ್ಕೆ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾದ ನಾರಾಯಣ ಜರತಾರಘೆರ ,ಪಪ್ಪಿ ರಾಯನಗೌಡರ,ಶಿವು ಮೆಣಸಿನಕಾಯಿ, ಮೋಹನ ಹೀರೆಮನಿ, ಗಣೇಶ ಟಗರಗುಂಟಿ,ಶೈಲಾ ಕಾಮರೆಡ್ಡಿ ಒತ್ತಾಯಿಸಿದಾಗ ಮೇಯರ ಅವರು ರಾಯ್ಕರವರ ವಜಾ ಮಾಡುವ ಆದೇಶ ಹೊರಡಿಸಿದರು. ನಗರದಲ್ಲಿ ಆಹಾರ ಕಲಬೆರಕೆ ಪ್ರಕರಣಗಳು ಬಂದಾಗ ಯಾರ ಹತ್ತಿರ ದೂರನ್ನು ನೀಡಬೇಕು? ಅದನ್ನುಇತ್ಯರ್ಥ ಮಾಡುವವರು ಯಾರು? ಕಲಬೆರೆಕೆದಾರರನ್ನು ನಿಯಂತ್ರಿಸುವವರು ಯಾರು? ಎಂದು 23ನೇ ವಾರ್ಡಿನ ಸದಸ್ಯ ಕರಿಯಪ್ಪ ಬೀಸಗಲ್ಲ ಅವರು ಆರೋಗ್ಯ ಸ್ಥಾಯಿಸ ಮಿತಿಯ ಅಧ್ಯಕ್ಷ ಮಹೇಶ ಬುರ್ಲಿಯವರ ಜೊತೆಗೂಡಿ ಮೇಯರರನ್ನು ಒತ್ತಾಯಿಸಿದಾಗ ಮೇಯರ ಅವರು ಪಾಲಿಕೆ ಆರೋಗ್ಯ ಅಧಿಕಾರಿ ಬಿರಾದಾರ ಅವರಿಗೆ ಉತ್ತರಿಸಲು ಹೇಳಿದರು. ಅದಕ್ಕೆ ಅಧಿಕಾರಿ ಡಿಎಚ್‍ಓ ಕಚೇರಿಯಿಂದ ನಿಯೋಜಿತರಾದಂತಹ ಶಿವಕುಮಾರ ಅವರು ಹೊಣೆ, ಕಾರಣಾಂತರÀದಿಂದ ಅವರು ಆರೋಗ್ಯ ಸಭೆಗೆ ಬರುತ್ತಿಲ್ಲ ಮುಂದಿನ ಸಭೆಗಳಿಗೆ ಅವರ ಕಚೇರಿಗೆ ತಿಳಿಸಲಾಗುವದು ಎಂದರು.

ಪಾಳಿಕೆಯ ಈಜುಕೋಳದಲ್ಲಿ ತರಬೇತುದಾರರಾದಂತಹ ಎಸ್.ಆರ್.ಮಠ ಅವರನ್ನು ಪಾಲಿಕೆ ಅರಣ್ಯ ಇಲಾಖೆಯಲ್ಲಿ ವರ್ಗಾಯಿಸಿದಾಗಿಂದ ಅವರು ಆ ವಿಭಾಗದಲ್ಲಿಯ ಹಗರಣ ನಡೆದಿರುವದರಿಂದ ಅವರ ಮೇಲೆ ಇಲಾಖಾ ವಿಚಾರಣೆಗೆ ಮೇಯರ ಅವರು ಆದೇಶಿಸಿದರು. ಸಿವಿಲ್ಲ ಕಾಮಗಾರಿಗಳಲ್ಲಿ ಆಗುವಂತಹ ದೋಷಗಳನ್ನು ಕಂಡು ಹಿಡಿಯಲು ತಂಡಗಳನ್ನು ರಚಿಸಿದ್ದು ಇವುಗಳಿಂದ ಎಷ್ಟು ವರದಿಗಳು ಬಂದಿವೆ ? ಎಂದು ಮಾಜಿ ಮೇಯರ ಸಂಬಂಧ ಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಲು ಅಧಿಕಾರಿಗಳು ತಿಣುಕಾಡಿದರು. ಸಾರ್ವಜನಿಕ ಸೌಚಾಲಯ ಉದ್ಘಾಟನೆ ಆವ್ಹಾನಿಸದ್ದಕ್ಕೆ ಸದಸ್ಯರಾದ ಶಾಂತಾ ಬಸವರಾಜ ಚನ್ನೋಜಿ ಪಾಲಿಕೆ ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.

ಪಾಲಿಕೆ ಆರೋಗ್ಯ ಇಲಾಖೆ ನಿರ್ಲಕ್ಷ್ಯದಿಂದ 53ನೇ ವಾರ್ಡೀನಲ್ಲಿ ಕಡುಬಡ ಬಾಲಕ ಕೃಷ್ಣಾ ಅಶೋಕ ಕಲಾಲ ಡಂಗು ಜ್ವರಕ್ಕೆ ಬಲಿಯಾಗಿದ್ದಕ್ಕೆ ಅವರ ಕುಟುಂಬಕ್ಕೆ 5ಲಕ್ಷ ಪರಿಹಾರಕ್ಕಾಗಿ ಪಾಲಿಕೆ ಸದಸ್ಯರಾದ ಡಿಕೆ ಚವ್ಹಾಣ ಬಸೀರ, ಅಹಮದ ಗುಡಮಾಲ, ಸುಧೀರ ಸರಾಫ, ಕಮಲಾಕ್ಷಿ ಸಜ್ಜನರ, ರಾಬಿಯಾ ಬೇಗಂ ಅಮಟೂರ ಪಟ್ಟು ಹಿಡಿದರು ಅದಕ್ಕೆ ಮೇಯರ ಮಜ್ಜಿಗೆ ಅವರು ವಿಚಾರಣೆ ಮಾಡಿ ಕ್ರಮ ಕೈಗೊಳ್ಳಲಾಗುವದೆಂದು ಭರವಸೆ ನೀಡುದರು ಇದೇ ಸಂದರ್ಬದಲ್ಲಿ ಶಕ್ತಿ ಚಿತ್ರಮಂದಿರದ ರಸ್ತೆಯನ್ನು ಶಕ್ತಿ ದೇವಿ ರಸ್ತೆ ಎಂದು ಮರುನಾಮಕರಣಕ್ಕೆ ಡಿಕೆ ಚವ್ಹಾಣ ಮೇಯರ ಅವರನ್ನು ಒತ್ತಾಯಿಸಿದರು. ತಡ ರಾತ್ರಿ ಕುಡಿಯುವ ನೀರನ್ನು ಹಳೇಹುಬ್ಬಳ್ಳಿ ವ್ಯಾಪ್ತಿಯಲ್ಲಿ ಸರಬರಾಜು ಮಾಡುವುದಕ್ಕೆ ಮಾಜಿ ಮೇಯರ ಪಾಂಡುರಂಗ ಪಾಟೀಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸುವರ್ಣ ಕಲಕುಂಟ್ಲಾ ಅವರು ತಮ್ಮ ವಾರ್ಡಿನಲ್ಲಿ 9 ಇಂಚಿನ ಯುಜಿಡಿ ಪೈಪುಗಳ ಜೋಡಣೆಗೆ ಆಗ್ರಹಿಸಿದರು.

[highlight]ಸೋಮವಾರ ಸಮನ್ವಯ ಸಭೆ
ಅವಳಿನಗರ ರಸ್ತೆ ಹಾಗು ಇತರೆ ಸಮಸ್ಯೆಗಳ ಕುರಿತು ಚರ್ಚಿಸಲು ಜಲಮಂಡಳಿ, ಹೆಸ್ಕಾಂ,ಪಿಡಬ್ಲುಡಿ ಮುಂತಾದ ಇಲಾಖೆ ಅಧಿಕಾರಿಗಳ ಸಮನ್ವಯ ಸಭೆ ದಿ. 2ರಂದು ಸೋಮವಾರ ನಡೆಸಲಾಗುವದೆಂದು ಮೇಯರ ಮಜ್ಜಗಿ ತಿಳಿಸಿದರು.

loading...

LEAVE A REPLY

Please enter your comment!
Please enter your name here