ಅಂತರ್ಜಾಲದಲ್ಲಿ ಕಮೆಂಟ್: ಬಂಧನ

0
15
loading...

22bkl4_aಭಟ್ಕಳ,22: ಕರ್ನಾಟಕದ ಭಟ್ಕಳ ಮೂಲದ ವ್ಯಕ್ತಿಯೊರ್ವನನ್ನು ಐಎಸ್‍ಐಎಸ್ ಉಗ್ರರ ಪರ ಅಂತರ್ಜಾಲದಲ್ಲಿ ಕಮೆಂಟ್ ಹಾಕಿದ್ದಾನೆ ಎನ್ನುವ ಆರೋಪದಲ್ಲಿ ದುಬೈ ಪೊಲೀಸರು ಬಂಧಿಸಿ ವಶಕ್ಕೆ ಪಡೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಸಾಗರರೋಡ ನಿವಾಸಿ ಅದ್ನಾನ ಹಸನ್ ದಾಮುದಿ ದುಬೈ ಪೊಲೀಸರಿಂದ ಬಂಧಿತ ಶಂಕಿತ ವ್ಯಕ್ತಿ. ಸ್ಥಳೀಯ ತಾಂತ್ರಿಕ ವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾನೆ. ಈತನ ತಂದೆ ದುಬೈನಲ್ಲಿ ಸಣ್ಣ ಪ್ರಮಾಣದ ರಿಯಲ್ ಎಸ್ಟೇಟ ಉದ್ಯೋಗ ಮಾಡಿಕೊಂಡಿದ್ದಾರೆ. ಇತ ಕಳೆದ 3 ವರ್ಷದ ಹಿಂದೆ ಭಟ್ಕಳದಿಂದ ಉದ್ಯೋಗಕ್ಕಾಗಿ ದುಬೈಗೆ ತೆರಳಿದ್ದ ಎನ್ನಲಾಗಿದೆ. ಐಎಸ್‍ಐಎಸ್ ಸಂಘಟನೆಯೊಂದಿಗೆ ಸಂಪರ್ಕಕ್ಕೆ ಬಂದು ಆನ್‍ಲೈನ್ ಮೂಲಕ ಯುವಕರನ್ನು ಬಯೋತ್ಪಾದನೆಗೆ ಸೆಳೆದುಕೊಳ್ಳಲು ಯತ್ನಿಸುತ್ತಿದ್ದ ಎನ್ನುವ ಆರೋಪಗಳು ಕೇಳಿ ಬರುತ್ತಿದೆ. ಕಳೆದ 2 ತಿಂಗಳ ಹಿಂದೆ ಇತನನ್ನು ಬಂಧಿಸಿದ್ದಾರೆ ಎನ್ನಲಾಗಿದೆಯಾದರೂ ಇವರೆಗೂ ಈತನ ವಿರುದ್ದವಾದ ಸಾಕ್ಷ್ಯಗಳು ದೊರೆತಿಲ್ಲ ಎಂದು ತಿಳಿದುಬಂದಿದೆ. ತಾಲೂಕಿನ ಭಟ್ಕಳ ಠಾಣೆಯಲ್ಲಿ ಕೂಡ ಈತನ ವಿರುದ್ದ ಯಾವುದೆ ಪ್ರಕರಣಗಳಿಲ್ಲ. 2013ರ ರಮ್ಜಾನ ಹಬ್ಬಕ್ಕೆ ಭಟ್ಕಳಕ್ಕೆ ಬಂದಿದ್ದ ಎನ್ನಲಾಗಿದೆ.
[highlight]
ದುಬೈನಲ್ಲಿದ್ದ ತನ್ನ ಮಗ ಸಭ್ಯ. ಅವನು ಐಎಸ್‍ಐಎಸ್ ಉಗ್ರರಿಗೆ ಸಂಬಂಧಿಸಿದ ಅಂತರ್ಜಾಲದ ಮೇಸೆಜೊಂದಕ್ಕೆ ಪ್ರತಿಕ್ರಿಯಿಸಿದ್ದ. ಅದಕ್ಕೆ 2 ತಿಂಗಳ ಹಿಂದೆ ದುಬೈ ಪೋಲಿಸರು ಆತನನ್ನು ವಿಚಾರಣೆಗೆಂದು ಬಂಧಿಸಿದ್ದರು. ಈವರೆಗೂ ಆತನನ್ನು ಬಿಡುಗಡೆಗೊಳಿಸುತ್ತೇವೆ ಎಂದು ಹೇಳುತ್ತಾ ಇದ್ದಾರೆ. ಆತನು ದೇಶವಿರೋದಿ ಚಟುವಟಿಕೆಗಳಲ್ಲಿ ಬಾಗವಹಿಸುವಂತವನಲ್ಲ. ಬಂಧಿತನ ತಾಯಿ

loading...

LEAVE A REPLY

Please enter your comment!
Please enter your name here