ಅಂಬಾಭವಾನಿ ಯೋಗಾಶ್ರಮದ ಕಾರ್ಯ ಶ್ಲಾಘನೀಯವಾಗಿದೆ : ಚಿದಾನಂದ ಸವದಿ

0
18
loading...

 

ಕೋಹಳ್ಳಿ 15 ; ಸಮಾಜದ ಜನತೆಯಲ್ಲಿ ಆಧ್ಯಾತ್ಮದ ಜ್ಞಾನವನ್ನು ಹರಡುತ್ತಿರುವ ಅಂಬಾಭವಾನಿ ಯೋಗಾಶ್ರಮದ ಕಾರ್ಯ ಶ್ಲಾಘನೀಯವಾಗಿದೆ ಎಂದು ಯುವ ಧುರೀಣ ಚಿದಾನಂದ ಸವದಿ ಹೇಳಿದರು.

ಅವರು ಸಮೀಪದ ಕಕಮರಿ ಗ್ರಾಮದ ಶ್ರೀ ಅಂಬಾಭವಾನಿ ಯೋಗಾಶ್ರಮದಲ್ಲಿ ನಡೆದ ನಾಡದೇವಿ ನವರಾತ್ರಿ ದೇವಿಯ ಪುರಾಣ ಮಂಗಲ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಇಂದು ಮನುಷ್ಯರು ಪ್ರತಿನಿತ್ಯ ದೇವರ ಸೇವೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ದಿನನಿತ್ಯದ ಸ್ವಲ್ಪ ಸಮಯವನ್ನಾದರೂ ಜ್ಞಾನಕ್ಕೆ ಮೀಸಲಾಗಿಡಬೇಕು. ಕಕಮರಿ ಆಶ್ರಮದಲ್ಲಿ ಗುಣಮಟ್ಟದ ಸಮುದಾಯ ಭವನವನ್ನು ನಿರ್ಮಿಸಲಾಗುವುದು, ಆಶ್ರಮದಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಒಂದು ವಾರದಲ್ಲಿಯೇ ಬೋರವೆಲ್ ಕೊರೆಸಿ ಸಮಸ್ಯೆ ಬಗೆ ಹರಿಸಲಾಗುವುದು ಎಂದು ಹೇಳಿದರು.

ಕಕಮರಿ ಅಂಬಾಭವಾನಿ ಆಶ್ರಮದ ಅಧ್ಯಕ್ಷ ಎ ಎಸ್ ಗಡಾಲೋಟಿ ಮಾತನಾಡಿ, ಸ್ಥಳೀಯ ಆಶ್ರಮಕ್ಕೆ ವರ್ಷಕ್ಕೆ 15 ಸಾವಿರ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಆಶ್ರಮದ ಶಕ್ತಿಮಾತೆಯ ಆಶೀರ್ವಾದದಿಂದ ಭಕ್ತರ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಇಲ್ಲಿ ನನ್ನದು ಎಂಬುದು ಇರುವುದಿಲ್ಲ, ಎಲ್ಲವೂ ದೇವಿಯ ಕೃಪೆಯಿಂದ ನಡೆಯುತ್ತದೆ. ಈ ಆಶ್ರಮ ಬೆಳೆಯಲು ಎಲ್ಲರೂ ಒಂದಾಗಿ ಸಹಾಯ ಸಹಕಾರದಿಂದ ದುಡಿಯೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಕೋಳಗೇರಿ ಮಹಾರಾಜರು ವಹಿಸಿ ಮಾತನಾಡಿದರು, ತಾಪಂ ಸದಸ್ಯ ಸಿದರಾಯ ಬಸರಿಕೋಡಿ, ಸುರೇಶ ಇಚಾರಿ, ಶ್ರೀಶೈಲ ನಾಯಿಕ, ನಾಗಪ್ಪ ಘೂಳಪ್ಪನ್ನವರ, ಗುರಪ್ಪ ದಾಸ್ಯಾಳ, ಸಿದ್ರಾಮ ಬಿಳ್ಳೂರ, ಬಸಪ್ಪ ದುಂಡಿ, ಲಗಮಣ್ಣ ಅಥಣಿ, ಸಂಜುಗೌಡ ಪಾಟೀಲ, ಅಣ್ಣಾಸಾಹೇಬ ಮಗದುಮ್ಮ, ರಾಮಗೊಂಡ ಅಲಬಾಳ, ಮುತ್ತಣ್ಣ ಪಾಟೀಲ, ಮಹಾಂತೇಶ ಅಥಣಿ, ಪರಮಾನಂದ ಬಾವಡೇಕರ, ನಿಂಗಪ್ಪ ನಂದೇಶ್ವರ, ರಾಚಪ್ಪ ತಂಗಡಿ, ಮಲ್ಲಿಕಾರ್ಜುನ ಕಲಮಡಿ, ಮಲ್ಲಿಕಾರ್ಜುನ ದುಂಡಿ ಸೇರಿದಂತೆ ಅನೇಕರುಉಪಸ್ಥಿತರಿದ್ದರು.
ನಾಡದೇವಿ ನವರಾತ್ರಿ ದೇವಿಯ ಪುರಾಣ ಮಂಗಲ ಉತ್ಸವದ ಸಮಾರೋಪ ಸಮಾರಂಭದ ನಿಮಿತ್ಯ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಭವ್ಯ ದೇವಿಯ ಮೂರ್ತಿ ಮೆರವಣಿಗೆ ಹಾಗೂ ಕುಂಬಮೇಳವು ಆಶ್ರಮದವರೆಗೆ ಜರುಗಿತು.
ಎಮ್ ಬಿ ಕರಡಿ ಸ್ವಾಗತಿಸಿದರು, ಎನ್ ಬಿ ಬಾಳಿಕಾಯಿ ನಿರೂಪಿಸಿದರು, ಎಮ್ ಎನ್ ವಾಲಿ ವಂದಿಸಿದರು.

loading...

LEAVE A REPLY

Please enter your comment!
Please enter your name here