ಅಧಿಕಾರಿಗಳ ನೀರಾಸಕ್ತಿ, ಅತಿಕ್ರಮಣದಾರರಿಗೆ ಅತಿಕ್ರಮಣ ಪಟ್ಟಾ ಮರೀಚಿಕೆ : ರಾಮಾ ಮೊಗೇರ

0
27
loading...

20151103_111941

ಭಟ್ಕಳ,3 : ರಾಜ್ಯದಲ್ಲಿ ಅಧಿಕಾರಿದಲ್ಲಿರುವ ಕಾಂಗ್ರೇಸ್ ಸರ್ಕಾರ ಅರಣ್ಯ ಅತೀಕ್ರಮಣದಾರರಿಗೆ ಪಟ್ಟಾ ನೀಡಲು ಆಸಕ್ತಿ ತೋರಿ ಪಟ್ಟಾ ವಿತರಿಸಲು ಇದೇ ಡಿ.31 ಕೊನೆಯ ದಿನಾಂಕ ನಿಗದಿಪಡಿಸಿದೆ. ಆದರೆ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದಾಗಿ ಈ ಕಾರ್ಯಕ್ಕೆ ಬಾರಿ ಹಿನ್ನೇಡೆಯುಂಟಾಗುತ್ತಿದೆ ಎಂದು ತಾಲೂಕಾ ಅರಣ್ಯ ಅತೀಕ್ರಮಣ ಹೋರಾಟ ಸಮಿತಿ ಅಧ್ಯಕ್ಷ ರಾಮಾ ಮೊಗೇರ ತಿಳಿಸಿದರು.
ಅವರು ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಕರೇದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ರಾಜ್ಯ ಸರ್ಕಾರ ಅರಣ್ಯ ಅತೀಕ್ರಮಣದಾರರಿಗೆ ಪಟ್ಟಾ ವಿತರಿಸಲು ಡಿ.31 ಕೊನೆಯ ದಿನಾಂಕ ನಿಗದಿಪಡಿಸಿದೆ. ಅದರಂತೆ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾದ ಆರ್.ವಿ ದೇಶಪಾಂಡೆಯವರು ಆ ನಿಟ್ಟಿನಲ್ಲಿ ತಿಂಗಳಿಗೆರಡರಂತೆ ಅಧಿಕಾರಿಗಳ ಸಭೆ ಕರೆದು ಇದರ ಬಗ್ಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಆದರೆ ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಅರಣ್ಯ ಅತೀಕ್ರಮಣದಾರರಿಗೆ ಪಟ್ಟಾ ವಿತರಿಸಲು ಅರ್ಜಿ ಸ್ವೀಕಾರ ಮಾಡಲು ಅಧಿಕಾರಿಗಳಿಗೆ ಆಧೇಶ ಮಾಡಿದ ದಿನದಿಂದ ಇಲ್ಲಿಯ ತನಕ ಕೇವಲ ಎರಡೂವರೆ ಪರ್ಸೆಂಟ್ ಜನರಿಗೆ ಮಾತ್ರ ಪಟ್ಟಾ ವಿತರಿಸಿರುವ ಇವರು ಡಿಸೆಂಬರ 31ರ ಒಳಗೆ ಎಲ್ಲರ ದಾಖಲೆಗಳನ್ನು ಪರಿಶೀಲನೆ ಮಾಡಿ ಪಟ್ಟಾ ವಿತರಿಸಲು ಅಧಿಕಾರಿಗಳಿಂದ ಸಾಧ್ಯವಿಲ್ಲ ಎಂದು ತಿಳಿಸಿದರು. ಈಗಾಗಲೇ ಅರಣ್ಯ ಅತೀಕ್ರಮಣದಡಿ 10 ಸಾವಿರ ಅರ್ಜಿಗಳು ಬಂದಿವೆ. ಬಂದಂತಹ ಅರ್ಜಿಗಳನ್ನು ಪರಿಶೀಲನೆ ಮಾಡುತ್ತಿರುವ ಅಧಿಕಾರಿಗಳು ಒಂದಲ್ಲಾ ಒಂದು ಕಾರಣ ನೀಡಿ ಅರ್ಜಿಯನ್ನು ತೀರಸ್ಕಾರ ಮಾಡುತ್ತಿದ್ದಾರೆ. ಅರಣ್ಯ ಹಕ್ಕು ಕಾನೂನಿನಲ್ಲಿ ಅತೀಕ್ರಮಣದಾರರಿಗೆ ಪಟ್ಟಾ ನೀಡಲು ಆ ಸ್ಥಳದಲ್ಲಿ ವಾಸಿಸುತ್ತಿರುವ ಬಗ್ಗೆ 1 ಕ್ಕಿಂತ ಹೆಚ್ಚೂ ದಾಖಲೆ ಕೇಳಿದಾರೇ ವಿನಃ ಇಂತಹದೇ ದಾಖಲೆ ಬೇಕು ಎಂದು ಎಲ್ಲಿಯೂ ಉಲ್ಲೆಖಿಸಿಲ್ಲ. ಮತ್ತು 85 ವರ್ಷದವರ ಹೇಳಿಕೆ ಪತ್ರವನ್ನು ಬಿಳಿ ಹಾಳೆಯ ಮೇಲೆ ಬರೆದುಕೊಟ್ಟರೂ ಸಾಕು ಅಂತ ಕಾನೂನಿನಲ್ಲಿದೆ. ಆದರೆ ಅಧಿಕಾರಿಗಳು ಬೇಕಂತಲೇ ಅದನ್ನು ಬಾಂಢ್ ಪೇಪರ್ ಮೇಲೆ ಬರೆಯಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ತಾಲೂಕಿನಲ್ಲಿ 25-30 ಅರ್ಜಿಗಳನ್ನು ಹಿಡುವಳಿ ಇದೆ ಎಂಬ ಕಾರಣಕ್ಕೆ ತೀರಸ್ಕರಿಸಲಾಗಿದೆ. ಹಿಡುವಳಿ ಇದ್ದ ಮಾತ್ರಕ್ಕೆ ಅರಣ್ಯ ಜಮೀನು ಮಂಜೂರಿ ಮಾಡಬಾರದೆಂಬ ಕಾನೂನು ಅರಣ್ಯ ಹಕ್ಕು ಕಾನೂನಿನಲ್ಲಿಲ್ಲ. ಇವೆಲ್ಲವನ್ನೂ ಗಮನಿಸಿದರೆ ಅಧಿಕಾರಿಗಳು ತಮ್ಮ ಮನಬಂದಂತೆ ಕಾನೂನು ರಚಿಸಿಕೊಂಡು ಅರಣ್ಯ ಅತೀಕ್ರಮಣದಾರರಿಗೆ ವಿನಾಃ ಕಾರಣ ತೊಂದರೆ ನೀಡುತ್ತಿರುವುದು ಸ್ಪಷ್ಠವಾಗುತ್ತಿದೆ ಎಂದು ತಿಳಿಸಿದರು.
ಅತೀಕ್ರಮಣ ಅರ್ಜಿಯ ಜೋತೆಯ ಲಗತ್ತಿಸಬೇಕಾದ ದಾಖಲೆಗಳ ಬಗ್ಗೆ ಅತೀಕ್ರಮಣದಾರರಿಗೆ ಅರಿವು ಮೂಡಿಸುವ ಸಲುವಾಗಿ ಹಾಗೂ ಅರಣ್ಯ ಅತೀಕ್ರಮಣದಾರರಿಗೆ ಸರ್ಕಾರ ಪಟ್ಟಾ ವಿತರಿಸಲು ನೀಡಿದ ಡಿಸೆಂಬರ 31 ದಿನಾಂಕವನ್ನು ಮುಂದೂಡುವಂತೆ ಆಗ್ರಹಿಸುವ ಸಲುವಾಗಿ ನ.7ರಂದು ಶಿರಿಸಿಯಲ್ಲಿ ಅರಣ್ಯ ಹಕ್ಕು ಕಾಯ್ದೆಯ ಜಾಗೃತಿ ಅಭಿಯಾನ ಹಮ್ಮಿಕೋಂಡಿದ್ದು ಅದರಲ್ಲಿ ಸರಿಸುಮಾರು 50 ಸಾವಿರ ಅರಣ್ಯ ಅತೀಕ್ರಮಣದಾರರು ಪಾಲ್ಗೊಳ್ಳುವ ನೀರಿಕ್ಷೆ ಇದೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ನಂತರ ಭಟ್ಕಳ ಅರಣ್ಯ ಹೋರಾಟ ಸಮಿತಿ ವತಿಯಿಂದ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಈ ಅಭಿಯಾನ ನಡೆಸಿ ಎಲ್ಲರೂ ಸೂಕ್ತ ದಾಖಲೆಯೊಂದಿಗೆ ಅರ್ಜಿ ಸಲ್ಲಿಸುವಂತೆ ಮಾಡುವಂತೆ ಶೀಘ್ರದಲ್ಲಿ ಪಟ್ಟಾ ಪಡೆದುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ತಾಲೂಕಾ ಅರಣ್ಯ ಹೋರಾಟ ಸಮಿತಿ ಸದಸ್ಯರಾದ ಗಣಪತಿ ನಾಯ್ಕ ಜಾಲಿ, ಸುಲೇಮಾನ್, ರಿಜ್ವಾನ್, ನಜೀರ್ ಕಾಶೀಂಜೀ, ಪ್ರಕಾಶ ನಾಯ್ಕ, ಅಜೀತ್, ದೇವಿದಾಸ್ ಜಾಲಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here