ಅಧಿಕಾರಿಳು ಹಣ ಪಡೆಯುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ತಹಶೀಲ್ದಾರಗೆ ಮನವಿ

0
25
loading...

 

ಗೋಕಾಕ 09 : ತಾಲೂಕಿನ ಗ್ರಾಮ ಪಂಚಾಯತಗಳಲ್ಲಿ ಹೊಸ ರೇಷನ್ ಕಾರ್ಡ ಅರ್ಜಿ ಸಲ್ಲಿಸುವ ಫಲಾನುಭವಿಗಳ ಹತ್ತಿರ ಹೆಚ್ಚಿನ ರೀತಿಯಲ್ಲಿ ಹಣ ಪಡೆಯುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ತಾಲೂಕ ಅಧ್ಯಕ್ಷ ಯುನುಸ್ ನದಾಫ್ ನೇತ್ರತ್ವದಲ್ಲಿ ಕಾರ್ಯಕರ್ತರು ಸೋಮವಾರದಂದು ತಾಲೂಕ ಗ್ರೇಡ್2 ತಹಶೀಲ್ದಾರ ಕೆ ಎಫ್ ಸುಭಂಜಿ ಅವರಿಗೆ ಮನವಿಯನ್ನು ಮನವಿ ಸಲ್ಲಿಸಿದರು.

ಬಳೋಬಾಳ, ಮಾಲದಿನ್ನಿ, ನಲ್ಲಾನಟ್ಟಿ, ಶಿಲ್ತಿಭಾಂವಿ, ಖನಗಾಂವ, ತುಕ್ಕಾನಟ್ಟಿ, ಕೊಳವಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಹೊಸ ರೇಷನ್ ಕಾರ್ಡಗೆ ಬಡ ರೈತರು ಅರ್ಜಿ ಸಲ್ಲಿಸುತ್ತಿದ್ದು, ಗ್ರಾಮ ಪಂಚಾಯತಿಗಳ ಅಧಿಕಾರಿಗಳು ಸರಕಾರದ ಸೇವಾ ಶುಲ್ಕ 50/- ರೂ ಗಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದು, ಈ ಕೂಡಲೆ ಗ್ರಾಮಸ್ಥರ ಕಡೆ ಹೆಚ್ಚಿನ ರೀತಿಯಲ್ಲಿ ಹಣ ವಸೂಲಿ ಮಾಡುತ್ತಿರುವ ಗ್ರಾಮ ಪಂಚಾಯತಿ ಅಧಿಕಾರಿ ಹಾಗೂ ಆಪರೇಟರಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದರೇ ಮುಂಬರುವ ದಿನಗಳಲ್ಲಿ ಕರ್ನಾಟಕ ನವ ನಿರ್ಮಾನ ಸೇನೆ ಉಗ್ರಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕ ಉಪಾಧ್ಯಕ್ಷ ಕೆಂಪಯ್ಯಾ ಕುರಬನ್ನವರ, ಸಹಸಂಚಾಲಕ ಅಬ್ದುಲಖಾದರ ಯರಸುಲ, ಕೃಷ್ಣಾ ಪಾಟೀಲ, ಮಂಜುನಾಥ ಸನದಿ, ಆಕಾಶ ತಳವಾರ, ಶಿವಾನಂದ ಖೋತ, ಇಮ್ರಾನ ನದಾಫ್, ಉಮೇಶ ಬಡಿಗೇರ, ಬಸವರಾಜ ಹುಡೇದ, ಪ್ರಕಾಶ ಕಡೋಳಿ, ಅಡಿವೆಪ್ಪಾ ಪಾಟೀಲ, ಕುತುಬುದ್ದಿನ ಮುಲ್ಲಾ, ಲಗಮಣ್ಣಾ ಕುಳ್ಳೂರ, ಸಮೀರ ಮುಲ್ಲಾ ಸೇರಿದಂತೆ ಇತರರು ಇದ್ದರು.

loading...

LEAVE A REPLY

Please enter your comment!
Please enter your name here