ಅಲ್ಲಮಪ್ರಭುದೇವರ ದೇವಸ್ಥಾನ ಜಿರ್ಣೋದ್ಧಾರಕ್ಕೆ ಶ್ರೀಗಳಿಂದ ಚಾಲನೆ

0
26
loading...

swamiji

 

ತೇರದಾಳ: ಪಟ್ಟಣದ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ದೇವಸ್ಥಾನದ ಜಿರ್ಣೋದ್ಧಾರ ಕಾರ್ಯಕ್ಕೆ ಶ್ರೀಶೈಲ ಪೀಠದಿಂದ ಎರಡು ಲಕ್ಷ ಹಣ ದೇಣಿಗೆ ನೀಡುವುರೊಂದಿಗೆ, ಪ್ರಭುದೇವರ ಮೂಲಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆಯನ್ನು ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಘೋಷನೆ ಮಾಡಿದರು.
ನಂತರ ಮಾತನಾಡಿದ ಅವರು 12ನೇ ಶತಮಾನದಲ್ಲಿ ಆಧ್ಯಾತ್ಮ ಹಾಗೂ ಸಾಮಾಜಿಕ ಎಂಬ ಕ್ರಾಂತಿಗಳು ನಡೆದವು. ಅದರಲ್ಲಿ ಆಧ್ಯಾತ್ಮದ ಜಾಗೃತಿ ಹಾಗೂ ಅದರ ಶಕ್ತಿ, ಮಹತ್ವವನ್ನು ಅಲ್ಲಮಪ್ರಭುದೇವರು ದೇಶದಲ್ಲೆಡೆ ಸಾರಿದರು ಎಂದು ಹೇಳಿದರು.
ನೆರೆಯ ರಾಯಬಾಗ ತಾಲೂಕಿನ ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಶ್ರೀಗಳು ಮಾತನಾಡಿ, ಅಲ್ಲಮಪ್ರಭುದೇವರ ಮಹಾಶಕ್ತಿ ಕೇವಲ ತೇರದಾಳಕ್ಕೆ ಸಿಮೀತಗೊಳ್ಳದೆ ಇಡೀ ಪ್ರಪಂಚಕ್ಕೆ ಹಬ್ಬಿಸುವ ಕಾರ್ಯ ನಡೆಯಲಿ. ಅಲ್ಲಮಪ್ರಭುದೇವರನ್ನು ಕಂಡ ಈ ನಾಡು ಶ್ರೇಷ್ಠವಾಗಿದ್ದು, ಇಲ್ಲಿ ಜನಿಸಿರುವುದೇ ಒಂದು ಭಾಗ್ಯ ಎಂದರು. ದೇವಸ್ಥಾನ ತೆರವುಗೊಳಿಸುವ ಕಾರ್ಯಕ್ಕೆ ಯಾವುದೇ ತರಹದ ವಿಘ್ನಗಳು ಎದುರಾಗದೆ ಸುಸೂತ್ರವಾಗಿ ನಡೆಯಲಿ ಎಂದು ದೇವಸ್ಥಾನದಲ್ಲಿ ಹೋಮ, ಹವನ, ವಿಶೇಷ ಪೂಜೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಮುರಡೇಶ್ವರದ ಜೈರಾಮ ಆಡಿಗ ನೇತೃತ್ವದಲ್ಲಿ ಹೋಮ ನಡೆಸಲಾಯಿತು. ಶೇಗುಣಸಿಯ ಶಂಕರ ಶ್ರೀ, ಮಹಾಂತ ದೇವರು, ಬನಹಟ್ಟಿಯ ಶರಣಬಸವ ಶಿವಾಚಾರ್ಯ, ಚಿಮ್ಮಡ ಪ್ರಭು ಶ್ರೀ, ಜಗದೀಶ ಗುಡುಗುಂಟಿಮಠ, ಪ್ರವೀಣ ನಾಡಗೌಡ, ಜಿಪಂ ಮಾಜಿ ಸದಸ್ಯ ದೇವಲ ದೇಸಾಯಿ, ನಾಗಪ್ಪ ಸನದಿ, ಗುತ್ತಿಗೆದಾರ ರಾಜಶೇಖರ ಹೆಬ್ಬಾರ, ಅರ್ಚಕ ಮಗಯ್ಯ ತೆಳಗಿನಮನಿ ಸೇರಿದಂತೆ ಜಿರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಅರ್ಚಕರು, ಹಿರಿಯರು, ಮಾತೆಯರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here