ಅಳಿವಿನ ಅಂಚಿನಲಿ ಕಾಡು ಪ್ರಾಣಿಗಳು

0
115
loading...

8KMT2

ಕುಮಟಾ,9: ಅಳಿವಿನ ಅಂಚಿನಲ್ಲಿರುವ ಕಾಡು ಪ್ರಾಣಿಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ಕಾನೂನುಗಳನ್ನು ಬಲಗೊಳಿಸಿದ್ದರೂ ಎಲ್ಲೊ ಒಂದು ಕಡೆ ಅಧಿಕಾರಿಗಳ ಕಣ್‍ತಪ್ಪಿಸಿ ಪ್ರಾಣಿಗಳ ಭೇಟೆಯಾಡಿ ಭಕ್ಷಿಸುತ್ತಿರುವ ಪ್ರಕರಣಗಳು ಆಗಾಗಾ ಬೆಳಕಿಗೆ ಬರುತ್ತಿವೆ.
ಅಂತೆಯೇ ಭಾನುವಾರ ಕೂಡ ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಎದುರಿನ ಗಟಾದಲ್ಲಿ ಉಡದ ಚರ್ಮ ಪತ್ತೆಯಾಗಿದೆ. ಉಡದ ಮಾಂಸವನ್ನು ಭಕ್ಷಿಸಿದ ಬೇಟೆಗಾರರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಟೆನ್ಸ್‍ನ್ ಕೋಡುವ ಉದ್ದೇಶದಿಂದ ಅದರ ಚರ್ಮವನ್ನು ಬಾಂಕ್  ಬೀಸಾಡಿದ್ದಾರೆ.
ಬ್ಯಾಂಕ್ ಎದುರಿನ ಗಟಾರದಲ್ಲಿ ರಟ್ಟಿನ ಬಾಕ್ಸ್‍ನಲ್ಲಿದ್ದ ಉಡದ ತಲೆ ಬುರುಡೆ, ಹಾಗೂ ಅದರ ಚರ್ಮದ ಗುರುತು ಹಿಡಿದ ಇಲೆಕ್ಟ್ರಿಕಲ್ ಶಾಪ್ ಮಾಲೀಕ ಕೂಜಳ್ಳಿಯ ರಾಮಾ ಶಂಭು ನಾಯ್ಕರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಎಸಿಎಫ್ ಎಸ್ ವಿ ನಾಯಕ, ಅರಣ್ಯ ಅಧಿಕಾರಿಗಳಾದ ಎಸ್ ಟಿ ಪಟಗಾರ, ಎಸ್ ಪಿ ಮಡಿವಾಳ, ಎಸ್ ಬಿ ನಾಯ್ಕ, ರಾಜೇಶ ಕೊಚ್ರೆಕರ್, ಎಸ್ ಟಿ ನಾಯ್ಕ, ಶಂಕರ ನಾಯ್ಕ ಪರಿಶೀಲಿಸಿದ್ದಾರೆ.
ಚರ್ಮದ ಪಂಚನಾಮೆ ನಡೆಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅಲ್ಲದೇ ಚರ್ಮ ದೊರೆತ ಸ್ಥಳದ ಅಕ್ಕಪಕ್ಕದ ಮನೆ ಹಾಗೂ ಹೋಟೆಲ್‍ಗಳನ್ನು ಪರಿಶೀಲಿಸಿಸುವ ಜೊತೆಗೆ ಅಡಿಗೆ ಕೋಣೆಗಳಿಗೆ ತೆರಳಿ ಉಡ ಬೇಯಿಸಿದ ಪಾತ್ರೆಗಳ ವಾಸನೆ ಹಿಡಿಯುವ ಪ್ರಯತ್ನ ಮಾಡಿದ್ದಾರೆ.

loading...

LEAVE A REPLY

Please enter your comment!
Please enter your name here