ಇತಿಹಾಸ ಮರೆತರೆ ಭವಿಷ್ಯಕ್ಕೆ ಬಲವಿಲ್ಲ; ಡಾ.ಶಿವಯೋಗಿ ಶಿವಾಚಾರ್ಯ

0
18
loading...

 

ಮೋಳೆ 19: ಹಣ ನೀಡಿ ಖರೀದಿಸುವ ಪ್ರತಿಯೊಂದು ವಸ್ತುವಿಗೆ ತನ್ನದೇ ಆದ ಗ್ಯಾರಂಟಿ ಅವಧಿ ಇದೆ. ಆದರೆ ಅದನ್ನು ಖರಿದಿಸುವ ಮಾಲೀಕನಿಗೆ ತಾನು ಎಷ್ಟು ದಿನ ಬದುಕುತ್ತೇನೆಂಬುದು ಗ್ಯಾರಂಟಿ ಇಲ್ಲ. ಅದಕ್ಕಾಗಿ ಪ್ರತಿಯೊಬ್ಬ ಮನುಷ್ಯ ತನ್ನ ಜಿವೀತಾವಧಿಯಲ್ಲಿ ಧರ್ಮದಿಂದ ಬಾಳಿ ಬದುಕಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ಮೈಶಾಳ ಸುಕ್ಷೇತ್ರ ಹಿರೇಮಠದ ಡಾ. ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ನುಡಿದರು.

ಗುರುವಾರ.ದಿ19 ರಂದು ಫರೀದಖಾನವಾಡಿ(ಲಕ್ಷ್ಮೀ ನಗರ)ದಲ್ಲಿ ಶ್ರೀ ಗಜಾನನ ಮಂದಿರದ ನೂತನ ಕಟ್ಟಡದ ವಾಸ್ತು ಶಾಂತಿ, ಮೂರ್ತಿ ಪ್ರತಿಷ್ಠಾಪಣೆ, ಕಳಸಾರೋಹಣ ಸಮಾರಂಭದ ದಿವ್ಯ ಸಾನಿದ್ಯವನ್ನು ವಹಿಸಿ ಮಾತನಾಡಿದ ಅವರು,ಹಿಂದೆಂದಿಗಿಂತಲೂ ಇಂದು ಎಲ್ಲಾ ರಂಗಗಳಲ್ಲಿ ಅದ್ಬುತ ಸಾಧಣೆ ಆಗಿದೆ. ಎನೆಲ್ಲ ಸಂಪನ್ಮೂಲ ಹೊಂದಿದ್ದರೂ ಸಹ ಮಾನಸಿಕ ಶಾಂತಿ ನೆಮ್ಮದಿಯಿಲ್ಲ. ಇತಿಹಾಸವನ್ನು ನಾವೇನಾದರೂ ಮರೆತರೇ ಭವಿಷ್ಯತ್ತಿಗೆ ಬಲ ದೊರೆಯುವುದಿಲ್ಲ ಎಂದರು.

ಉತ್ಕøಷ್ಟø ಭಾರತೀಯ ಸಂಸ್ಕøತಿ ಮೇಲೆ ವೈಚಾರಿಕತೆಯ ದಬ್ಬಾಳಿಕೆ ಹೆಚ್ಚುತ್ತಿದೆ.ಅತಿಯಾದ ಒತ್ತಡಕ್ಕೆ ಮನುಷ್ಯ ಸಿಲುಕಿ ಮಾನಸಿಕ ಶಾಂತಿ, ಸಮಾಧಾನ ಇಲ್ಲದಂತಾಗಿದೆ. ವೈಚಾರಿಕತೆ ಮನೋಭಾವನೆ ಬೆಳೆದು ಬರಲಿ. ಆದರೆ ನಾಸ್ತಿಕ ಮನೋಭಾವ ಬೆಳೆಯಬಾರದು. ಮನಸ್ಸನ್ನು ಭಗವಂತನಿಗೆ ದೇಹವನ್ನು ದುಡಿಮೆಗೆ ಅರ್ಪಿಸಿಕೊಂಡು ಬಾಳಿದ್ದಾದರೆ ಮನುಷ್ಯ ಜನ್ಮ ಸಾರ್ಥಕವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಹಂಚಿನಾಳ ಭಕ್ತಿಯೋಗಾಶ್ರಮದ ಶ್ರೀ ಮಹೇಶಾನಂದ ಸ್ವಾಮಿಗಳು ಆಶೀರ್ವಚನ ನೀಡುತ್ತ, ಹಿಂದಿನ ಕಾಲದಲ್ಲಿ ಗ್ರಾಮದ ಪಕ್ಕದಲ್ಲಿ ವ್ಯಾಯಾಮ ಶಾಲೆಗಳಿರುತ್ತಿದ್ದವು, ಅಲ್ಲಿ ಯುವಕರು ಹಾಲು ಕುಡಿದು ಕುಸ್ತಿ ಆಡುತ್ತಿದ್ದರು, ಆದರೆ ಈಗ ಊರ ಪಕ್ಕದಲ್ಲಿ ದಾಭಾಗಳಿವೆ, ಊರ ತುಂಬ ಸರಾಯಿ ಅಂಗಡಿಗಳಿವೆ, ಇದರಿಂದ ಇಂದಿನ ಯು ಪೀಳಿಗೆ ದಾರಿ ತಪ್ಪುತ್ತಿವೆ ಎಂದು ವಿಷಾದ ವ್ಯಕ್ತ ಪಡಿಸಿದರು. ಇಂದಿನ ಯುವಕರಿಗೆ ಪಾಲಕರು ಭಾರತೀಯ ಸಂಸ್ಕøತಿ, ಸಂಸ್ಕಾರದ ಅರಿವನ್ನು ಮಕ್ಖಳಲ್ಲಿ ಮೂಡಿಸಬೇಕೆಂದರು.

ವೇದಿಕೆಯ ಮೇಲೆ ಶ್ರೀ ಬಸವಲಿಂಗ ಸ್ವಾಮಿಗಳು, ಶ್ರೀ, ಯತೀಶ್ವರಾನಂದ ಸ್ವಾಮಿಗಳು, ಶ್ರೀ ಬಸವೇಶ್ವರ ಶ್ರೀಗಳು, ಶ್ರೀ ಸೇವಾಳೆ ಮಹಾರಾಜರು, ಶಾಸಕ ರಾಜು ಕಾಗೆ,ರಾಜಾಭಾವು ಶಿರಗಾಂವಕರ, ಜಿಪಂ ಸದಸ್ಯೆ ತೇಜಸ್ವಿನಿ ದಾನೊಳ್ಳಿ, ದೀಪಕ ಪಾಟೀಲ, ಬಾಳಾಸಾಬ ಕಟಗೇರಿ, ಮಹಾದೇವ ಕಟಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಮಾತನಾಡಿದರು,

loading...

LEAVE A REPLY

Please enter your comment!
Please enter your name here