ಈಶ್ವರಪ್ಪ ಮಂಪರು ಪರೀಕ್ಷೆ ಮಾಡಿಸಿಕೊಳ್ಳಲಿ: ಇಂಗಳಗಿ

0
22
loading...

ಹುಬ್ಬಳ್ಳಿ 19: ಆಗಿಂದಾಗ್ಗೆ ಅತಿರೇಕವಾಗಿ ಮಾತನಾಡುತ್ತಿರುವ ಬಿಜೆಪಿ ಪಕ್ಷದ ಈಶ್ವರಪ್ಪನವರು ಸ್ವಯಂ ದೇವರ ಹೆಸರನ್ನು ಹೊಂದಿದ್ದು ಇವರು ಆಡುವ ಮಾತುಗಳು ಸ್ವಯಂ ಪ್ರೇರಿತವೆ ಅಥವಾ ದೇವರು ಒಡನುಡಿಯುತ್ತಿದ್ದಾನೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲು ಅವರು ಮಂಪರು ಪರೀಕ್ಷೆ ಮಡಿಸಿಕೊಳ್ಳ ಬೇಕು. ಎಂದು ಕಾಂಗ್ರೆಸ್ ಧುರೀಣರಾದ ಜೆ.ಡಿ.ಇಂಗಳಗಿ ಅವರು ಅಭಿಪ್ರಾಯಪಟ್ಟರು.
ಟಿವಿ ಮತ್ತು ವೃತ್ತಪತ್ರಿಕೆಗಳನ್ನು ನಿಷೇಧಿಸ ಬೇಕೆಂದು ಹೇಳಿರುವ ಅವರು ಸಮಾಜವು, ನಾಗರಿಕರು ಪ್ರಜ್ಞಾವಂತರಾಗಲು, ಜಾಣರಾಗಲು ಇವೆರಡು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ತಿಳಿದುಕೊಂಡಂತೆ ಕಾಣುವುದಿಲ್ಲ ಎಂದು ಇಂಗಳಗಿ ಲೇವಡಿ ಮಾಡಿದ್ದಾರೆ.

loading...

LEAVE A REPLY

Please enter your comment!
Please enter your name here