ಈಶ್ವರಪ್ಪ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ

0
14
loading...

23 HLY NPS-1 Aಹಳಿಯಾಳ,23: ರಾಷ್ಟ್ರದ್ರೋಹಿ ಮುಸ್ಲಿಂರು ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ ವಿಧಾನ ಪರಿಷತ್ ನಾಯಕ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡಿಸಿ ಸೋಮವಾರ ಹಳಿಯಾಳದಲ್ಲಿ ನೂರಾರು ಸಂಖ್ಯೆಯ ಮುಸಲ್ಮಾನ ಸಮುದಾಯದವರು ಪ್ರತಿಭಟನೆ ನಡೆಸಿದರು.
ಶಿವಾಜಿ ವೃತ್ತದಲ್ಲಿ ಸ್ವಲ್ಪಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು `ಭಾರತ ಮಾತಾಕಿ ಜೈ’, `ಈಶ್ವರಪ್ಪಗೆ ಧಿಕ್ಕಾರ’ ಎಂಬ ಘೋಷಣೆಗಳನ್ನು ಹಾಕಿದರು. ಕರ್ನಾಟಕ ಸರಕಾರವು ರಾಷ್ಟ್ರದ್ರೋಹಿ ಮುಸ್ಲಿಂರಿಗೆ ರಕ್ಷಣೆ ನೀಡುತ್ತಿದೆ ಎಂದು ಈಶ್ವರಪ್ಪನವರು ನೀಡಿದ ಹೇಳಿಕೆಯಲ್ಲಿ `ರಾಷ್ಟ್ರದ್ರೋಹಿ ಮುಸ್ಲಿಂರು’ ಎಂಬ ಶಬ್ದ ಬಳಕೆಯಿಂದ ನಮ್ಮ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಹೇಳಿದ ಪ್ರತಿಭಟನಾಕಾರರು ಈಶ್ವರಪ್ಪನವರು ತಮ್ಮ ಹೇಳಿಕೆಯನ್ನು ಹಿಂಪಡೆದು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿಯಂತಹ ಒಳ್ಳೆಯ ಪಕ್ಷದಲ್ಲಿರುವ ಈಶ್ವರಪ್ಪರಂತಹ ಬೆರಳೆಣಿಕೆಯಷ್ಟಿರುವ ಮುಖಂಡರನ್ನು ಬಿಜೆಪಿ ವರಿಷ್ಠರು ತಮ್ಮ ಪಕ್ಷದಿಂದ ತೆಗೆದುಹಾಕಿ ಪಕ್ಷವನ್ನು ಸ್ವಚ್ಛಗೊಳಿಸಬೇಕು. ಈ ರೀತಿ ಹೇಳಿಕೆ ನೀಡದಂತೆ ಮಾನ್ಯ ರಾಜ್ಯಪಾಲರು ಈಶ್ವರಪ್ಪನನ್ನು ಸೂಚಿಸಬೇಕು. ಇಲ್ಲದಿದ್ದರೆ ಇದೇ ರೀತಿ ತಮ್ಮ ಹೇಳಿಕೆ ಮುಂದುವರೆಸಿದರೆ ಅವರನ್ನು ವಿಧಾನ ಪರಿಷತ್ ಪ್ರತಿಪಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಲಾಯಿತು.
ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು, ಇಲ್ಲಿನ ಮುಸಲ್ಮಾನರು ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದು ಜೀವನಪರ್ಯಂತ ಇಲ್ಲಿಯೇ ಇರುತ್ತಾರೆ. ಭಾರತದ ಗೌರವಕ್ಕಾಗಿ ನಮ್ಮ ಪ್ರಾಣವನ್ನಾದರೂ ಕೊಡಲು ಸಿದ್ಧರಿರುತ್ತಾರೆ ಎಂದು ರಾಜ್ಯಪಾಲರಿಗೆ ಬರೆದ ಮನವಿಪತ್ರದಲ್ಲಿ ಒತ್ತಾಯಿಸಲಾಗಿದೆ. ಇಸ್ಲಾಂ ಧರ್ಮದಲ್ಲಿ ಭಯೋತ್ಪಾದನೆ, ದೇಶದ್ರೋಹಿಗಳಿಗೆ ಅವಕಾಶವಿಲ್ಲ. ಕೆಲ ಮುಸಲ್ಮಾನರು ಮಾಡಿದ ತಪ್ಪಿಗೆ ಎಲ್ಲಾ ಮುಸಲ್ಮಾನರನ್ನು ದೂಷಿಸಕೂಡದು ಎಂದು ತಹಶೀಲ್ದಾರ ವಿದ್ಯಾಧರ ಗುಳಗುಳಿ ಅವರಿಗೆ ನೀಡಿದ ಪತ್ರದಲ್ಲಿ ವಿನಂತಿಸಲಾಗಿದೆ.
ಅಂಜುಮನ್ ಸಂಸ್ಥೆಯ ಮುಖ್ಯಸ್ಥ ಎಲ್.ಎಸ್. ದಲಾಲ, ಫಯಾಜ ಮುಖ್ತಿ, ಮುಸ್ತಾಕ ಮುಖ್ತಿ ಇವರುಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಮುಖರಾದ ಎಂ.ಎಂ. ದೊಡ್ಡವಾಡ, ಮಕ್ಬುಲಸಾಬ, ಅಹ್ಮದಸಾಬ ಮನಿಯಾರ, ಅಲ್ಲಿಸಾಬ ಕಾಕರ, ಅಲ್ತಾಫ್ ಅಂಕೋಲೆಕರ, ಖಾಕೇಶಾ ಮಕಾನದಾರ, ಹಕೀಮಸಾಬ, ಜಹಾಂಗೀರ ದಲಾಲ, ರಾಜು ಮುಲ್ಲಾ, ಫಾರೂಕ ಬಾಳೇಕುಂದ್ರಿ, ಸಿರಾಜ್ ಮುನವಳ್ಳಿ ಮೊದಲಾದವರು ನೇತೃತ್ವ ವಹಿಸಿದ್ದರು.

loading...

LEAVE A REPLY

Please enter your comment!
Please enter your name here