ಉಕ್ಕಲಿ ಕರವೇ ನೇತೃತ್ವದಲ್ಲಿ ಸರಾಯಿ ಮುಕ್ತ ತಾಂಡಾ ಘೋಷಣೆ: ಪರ್ಯಾಯ ಉದ್ಯೋಗ ಕೈಗೊಳ್ಳಿ

0
21
loading...

 

 

ಬಸವನಬಾಗೇವಾಡಿ: ಜಾಗತೀಕ ಮಟ್ಟದ ಉದಾತ್ ಸಂಸ್ಕøತಿಯನ್ನು ಹೊಂದಿದ ಭಾರತ ದೇಶವಾಗಿದ್ದು ಸ್ವಸ್ಥ ಸ್ವಾಭಿಮಾನ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಮನಗೂಳಿ ಹಿರೇಮಠದ ಸಂಗನಬಸವ ಮಹಾಸ್ವಾಮಿಜಿ ಹೇಳಿದರು.
ತಾಲೂಕಿನ ಉಕ್ಕಲಿ ತಾಂಡಾದ ಶ್ರೀ ಸೇವಾಲಾಲ ಹಾಗೂ ದುರ್ಗಾದೇವಿ ದೇವಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡ ಸರಾಯಿ ಮುಕ್ತ ತಾಂಡಾ ಘೋಷಣೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು ದೇಶದಲ್ಲಿ ಯುವ ಜನಾಂಗ ದಾರಿ ತಪ್ಪುತ್ತಿದ್ದು ಸನ್ಮಾರ್ಗದಲ್ಲಿ ಮುನ್ನಡೆಸುವದು ಎಲ್ಲರ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.
ಸುಂದರ ಸಮಾಜಕ್ಕಾಗಿ ಶರಣರು, ಸಂತರು ಉನ್ನತ ವಿಚಾರಧಾರೆಯನ್ನು ಪ್ರತಿಪಾದಿಸಿದ್ದು ಅವರಲ್ಲಿ ಸಂತ ಸೇವಾಲಾಲರು ಕೂಡಾ ಒಬ್ಬರಾಗಿದ್ದು ವಿಶಿಷ್ಠ ಸಂಸ್ಕøತಿ ಹೊಂದಿದ ಲಂಬಾಣಿ ತನ್ನ ಸಂಸ್ಕøತಿಯನ್ನು ಉಳಿಸಿಕೊಳ್ಳಬೇಕು ಅಲ್ಲದೆ ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿರುವ ಕುಡಿತ, ಸರಾಯಿ ಮಾರಾಟದಂತ ಕಾರ್ಯಗಳಿಗೆ ಮಂಗಲ ಹಾಡಿ ಸುಂದರ ಬದುಕನ್ನು ಕಟ್ಟಿಕೊಳ್ಳಬೇಕಾದ ಜವಾಬ್ದಾರಿ ಲಂಬಾಣಿ ಸಮಾಜ ಮೇಲಿದೆ ಹೇಳಿದರು.
ಅಬಕಾರಿ ನಿರೀಕ್ಷಕ ಐ.ಎಮ್. ಮಣೂರ ಮಾತನಾಡಿ ಲಂಬಾಣಿ ಸಮಾಜಕ್ಕೆ ಸ್ವಉದ್ಯೋಗ ನಡೆಸಲು ಸರಕಾರ ಸವಲತ್ತು ನೀಡುತ್ತದೆ ಸವಲತ್ತನ್ನು ಸದ್ದುಪಯೋಗ ಪಡಿಸಿಕೊಂಡು ಸ್ವಉದ್ಯೋಗಿಯಾಗಿ ಜೀವನ ಸಾಗಿಸಬೇಕು. ಯುವಕರು ಸಂಘಟಿತರಾಗಿ ಸಮಾಜವಿರೋಧಿ ಕೃತ್ಯಗಳಿಗೆ ಕಡಿವಾಣ ಹಾಕಿ ಸರಾಯಿ ಮುಕ್ತ ತಾಂಡಾವನ್ನಾಗಿ ಘೋಷಣೆಗೆ ಮುಂದಾಗಿದ್ದು ಶ್ಲಾಘನೀಯವಾಗಿದ್ದು ಸರಾಯಿ ಕುಡಿತದಿಂದ ಇಡೀ ಸಮುದಾಯ ವ್ಯಸನಕ್ಕೆ ದಾಸವಾಗಿ ಅಂತಹ ಕುಟುಂಬಗಳು ಬೀದಿಗೆ ಬರುವ ಜೊತೆಗೆ ಸಮಾಜದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು.
ಕರವೇ ತಾಲೂಕ ಅಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿ ಕರವೇ ಸಮಾಜದ ಅಭಿವೃದ್ದಿಪೂರಕವಾದ ವಾತಾವರಣ ನಿರ್ಮಾಣಕ್ಕೆ ಬದ್ದವಾಗಿದ್ದು ಸರಾಯಿ ಮುಕ್ತ ಘೋಷಣೆಗೆ ಮುಂದಾದ ನಿವಾಸಿಗಳ ಚಿಂತನೆಗಳು ನಿರಂತರವಾಗಿರಬೇಕು ಅಲ್ಲದೆ ಯುವಕರು ಜಾಗೃತರಾಗಿ ಲಂಬಾಣಿ ಸಮಾಜದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡುವ ನಿಟ್ಟಿನಲ್ಲಿ ಚಿಂತಿಸಬೇಕೆಂದು ಹೇಳಿದರು.
ಪತ್ರಕರ್ತ ಮಲ್ಲಿಕಾರ್ಜುನ ದೇವರಮನಿ(ವಕೀಲರು), ಸಂತ ಗಣಪತಿ ಚವ್ಹಾಣ ಮಾತನಾಡಿದರು, ಅಬಕಾರಿ ಇಲಾಖೆ ಉಪ ನಿರೀಕ್ಷಕ ಆದಿನಾಥ ನರಸಗೊಂಡ, ಪತ್ರಕರ್ತ ಬಸವರಾಜ ನಂದಿಹಾಳ, ನಾಗೇಶ ನಾಗೂರ, ಕರವೇ ಮುಖಂಡರಾದ ಉಮೇಶ ಅವಟಿ, ರಾಜು ರಾಠೋಡ, ಮಲ್ಲಿಕಾರ್ಜುನ ರಾಠೋಡ, ಪಾಂಡು ರಾಠೋಡ, ಸಂತೋಷ ಚವ್ಹಾಣ, ಸೋಮನಾಥ ಚವ್ಹಾಣ, ಅಣ್ಣು ಚವ್ಹಾಣ, ಗ್ರಾಪಂ ಸದಸ್ಯ ಗಣಪತಿ ಚವ್ಹಾಣ, ವಿಲಾಸ ರಾಠೋಡ, ಕೃಷ್ಣಾ ರಾಠೋಡ, ನಾವದೇವ ಚವ್ಹಾಣ, ಭಾಸು ಜಾಧವ, ರತ್ನು ರಾಠೋಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು, ಸಿ.ಟಿ.ಮಾದರ ಸ್ವಾಗತಿಸಿ ನಿರೂಪಿಸಿದರು, ಗಣಪತಿ ಚವ್ಹಾಣ ವಂದಿಸಿದರು, ಇದೇ ಸಂದರ್ಭದಲ್ಲಿ ತಾಂಡಾದ ಹಿರಿಯರು ಈಗಾಗಲೇ ತಾಂಡಾದಲ್ಲಿ ಶೇ 95ರಷ್ಟು ಸರಾಯಿ ಮುಕ್ತವಾಗಿದ್ದು ಯುವಕರ ಆಶೆಯಂತೆ ಮುಂಬರುವ ದಿನಗಳಲ್ಲಿ ಸಂಪೂರ್ಣ ತೊಲಗಿಸಲಾಗುವದು ಎಂದು ಸಂಗನಬಸವ ಶ್ರೀಗಳಿಗೆ ಹಾಗೂ ಅಬಕಾರಿ ಅಧಿಕಾರಿಗಳಿಗೆ ಭರವಸೆ ನೀಡಿದರು.

loading...

LEAVE A REPLY

Please enter your comment!
Please enter your name here