ಎಲ್ಲ ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ಶ್ರೇಷ್ಠವಾದದ್ದು : ಶಿವಬಸವ ಸ್ವಾಮೀಜಿ

0
16
loading...

3ATHANI-2

ಅಥಣಿ 03 : ಎಲ್ಲ ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ಶ್ರೇಷ್ಠವಾದದ್ದು, ಪ್ರತಿಯೊಬ್ಬರು ಸತ್ವಯುತವಾದ ಆಹಾರ ಮತ್ತು ಶುದ್ದ ನೀರು ಕುಡಿದು ಆರೋಗ್ಯ ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.

ಅವರು ಇಲ್ಲಿನ ಬಸ್ ನಿಲ್ದಾಣದಲ್ಲಿ ಶುದ್ದ ಕುಡಿಯುವ ನೀರಿನ ಘಟಕದ ಉದ್ಗಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ನೀರು ಅಮೃತಕ್ಕೆ ಸಮಾನವಾದ್ದು, ಆದರೆ ಇಂದಿನ ಕೈಗಾರಿಕಾ ಬೆಳೆವಣಿಗೆ ಮಧ್ಯ ನೀರು ಕಲುಷಿತವಾಗುತ್ತಿದೆ. ಇದರಿಂದ ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದು,ಈಗ ಶೀಥಿಲೀಕರಣವಾದ ನೀರನ್ನೇ ಸೇವಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಕಡಿಮೆ ದರದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಆರಂಭವಾಗಿರುವದು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜನರು ಈ ನೀರನ್ನು ಹಿತಮಿತವಾಗಿ ಬಳಸಿಕೊಳ್ಳಬೇಕು ಬಳಸಿಬೇಕೆಂದು ಹೇಳಿದರು.

ಶುದ್ದ ಕುಡಿಯುವ ನೀರಿನ ಘಟಕ ಉದ್ಗಾಟಿಸಿದ ಶಾಸಕ ಲಕ್ಷ್ಮಣ ಸವದಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕೂಡಾ ಶುದ್ದ ಕುಡಿಯುವ ನೀರಿನ ಘಟಕಗಳನ್ನು ತೆರೆಯಲಾಗಿದ್ದು, ಅದೇ ರೀತಿ ಕಡಿಮೆ ದರದಲ್ಲಿ ಶುದ್ದ ನೀರು ಪುರೈಸುವ ಘಟಕಯೊಂದು ಬಸ್ ನಿಲ್ದಾಣದಲ್ಲಿ ಅಗತ್ಯವಿತ್ತು. ಅದು ಈಗ ಕಾರ್ಯಾರಂಭವಾಗಿರುವದರಿಂದ ಅನೇಕ ಬಡ ಪ್ರಯಾಣಿಕರಿಗೆ ಮತ್ತು ಪಟ್ಟಣದ ಜನತೆ ಅನುಕೂಲವಾಗಲಿದೆ ಎಂದು ಹೇಳಿದ ಅವರು ಅಥಣಿ ಬಸ್ ನಿಲ್ದಾಣ ಅಭಿವೃದ್ದಿಯಾಗಿ ಸು. 4 ಕೋಟಿ ರೂ ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ ದಿನಮಾನಗಳಲ್ಲಿ ಸುವ್ಯವಸ್ಥಿತ ನೂತನ ಬಸ್ ನಿಲ್ದಾಣ ನಿರ್ಮಾಣವಾಗಲಿದೆ ಎಂದರು.

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಪಿ.ಪಿ ನೀಲಕಂಠಮಠ, ಸಾರಿಗೆ ಘಟಕದ ವ್ಯವಸ್ಥಾಪಕ ಬಿ.ಎಲ್ ಗೇಣ್ಣೂರ, ಪರಶುರಾಮ ಚುಬಚಿ,ರಾಜು ಮಾಳಿ, ಹಣಮಂತ ಕಲಮಡಿ, ಪ್ರಶಾಂತ ಭಟ್ಟ ಇನ್ನಿತತರು ಉಪಸ್ಥಿತರಿದ್ದರು. ಶ್ರೀನಿವಾಸ ಪಟ್ಟಣ ಸ್ವಾಗತಿಸಿದರು. ವಿಕ್ರಮ ಹಾತ್ವಾರ ವಂದಿಸಿದರು.

loading...

LEAVE A REPLY

Please enter your comment!
Please enter your name here