ಐಕ್ಯತಾ ಮನೋಭಾವ ಬೆಳೆಸಿಕೊಳ್ಳಬೇಕು : ಡಿ.ಆರ್.ನಾಯ್ಕ

0
30
loading...

22 sdp 1ಸಿದ್ದಾಪುರ,22: ಐಕ್ಯತಾ ಮನೋಭಾವದಿಂದ ದೇಶದ ಏಳಿಗೆ ಆಗಲು ಸಾಧ್ಯ ಭಾಷೆ, ಧರ್ಮ ಜನಾಂಗಗಳ ಹೆಸರಿನಲ್ಲಿ ದ್ವೇಷದ ವಾತಾವರಣ ಬೆಳಸಿಕೊಳ್ಳಬಾರದು. ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವ ಕಲೆ ದೊಡ್ಡದು. ಭಾಷೆಗಳಿಗಾಗಿ ಜಗಳವಾಡದೆ ಭಾವೈಕ್ಯದಿಂದ ಬೆಳೆದು ಬರಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್ ನಾಯ್ಕ ಹೇಳಿದರು.
ಅವರು ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ನಡೆದ ಭಾಷಾ ಸೌಹಾರ್ದ ಕಾರ್ಯಕ್ರಮ ಹಾಗೂ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿ ನುಡಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕøತ ನಿವೃತ್ತ ಮುಖ್ಯ ಶಿಕ್ಷಕ ಜಿ.ಜಿ.ಹೆಗಡೆ ಬಾಳಗೋಡ ಆಶಯ ನುಡಿಗಳನ್ನಾಡಿದರು. ವಿಶೇಷ ಉಪನ್ಯಾಸವನ್ನು ನಾಣಿಕಟ್ಟಾ ಸರಕಾರಿ ಪ.ಪೂ ಮಹಾವಿದ್ಯಾಲಯದ ಪ್ರಾಧ್ಯಾಪಕ ಎಂ.ಕೆ ನಾಯ್ಕ ಹೊಸಳ್ಳಿರವರು ನೀಡಿ ಭಾಷೆಯಿಂದ ಭಾವೈಕ್ಯ ಬೆಳೆಸಿಕೊಳ್ಳಬೇಕಲ್ಲದೆ ನಮ್ಮೊಳಗಿನ ಸಂಕುಚಿತ ಮನೋಭಾವವನ್ನು ಅಳಿಸಿಹಾಕಬೇಕು. ಸುಮಧುರ ಬದುಕಿನ ಪ್ರಬಲ ವಾಹಿನಿ ಭಾಷೆ ಎಂದು ಹೇಳಿದರು.
ಬಹುಭಾಷಾ ಕವಿಗೋಷ್ಠಿಯಲ್ಲಿ ವೆಂಕಟೇಶ ಮಡಿವಾಳ (ಕನ್ನಡ) ಸುಧಾರಾಣಿ ನಾಯ್ಕ (ಹಿಂದಿ) ಟಿ.ಎನ್ ಭಟ್ಟ (ಸಂಸ್ಕøತ) ಗೋಪಾಲ ಕೆ. ನಾಯ್ಕ (ಕನ್ನಡ) ಪೀಟರ್ ಡಿಸೋಜಾ (ಕೊಂಕಣಿ) ಶ್ರೇಯಾ ವೆರ್ಣೇಕರ (ಕೊಂಕಣಿ) ಎಂ.ಎಸ್. ಹೆಗಡೆ (ಕನ್ನಡ) ಎ.ಎಸ್. ಕಂಚಿ (ಉರ್ದು) ಎಚ್. ನಾಗರಾಜಪ್ಪ (ಕನ್ನಡ) ಅವರುಗಳು ಕಾವ್ಯ ವಾಚನ ಮಾಡಿದರು. ವೇದಿಕೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಎಸ್.ಎಸ್.ಜಹಗೀರದಾರ ಕಿರಿಯ ಅಭಿಯಂತರ ಅನಿಲಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಾಲಿಕೊಪ್ಪ ಮಾದರಿ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ದೈಹಿಕ ಶಿಕ್ಷಣ ಪರಿವೀಕ್ಷಕ ಅಧಿಕಾರಿ ಎಂ.ವಿ. ನಾಯ್ಕ ರಿಂದ ಸ್ವಾಗತÀ ಶಿಕ್ಷಕ ಗೋಪಾಲ ಕೆ.ನಾಯ್ಕ , ಪ್ರಾಸ್ತಾವಿಕ ಮಾತು, ಹಾಗೂ ಶಿರಳಗಿ ಹಿ. ಪ್ರಾ. ಶಾಲಾ ಮುಖ್ಯಶಿಕ್ಷಕ ಎಂ.ಆರ್ ಭಟ್ಟರಿಂದ ನಿರೂಪಣೆ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಯೋಜಕ ಗಣಪತಿ ಗೌಡರಿಂದ ವಂದನಾರ್ಪಣೆ ನಡೆಯಿತು.

loading...

LEAVE A REPLY

Please enter your comment!
Please enter your name here