ಓಸಿ ನಂಬರ್ ಬರೆದುಕೊಟ್ಟುಸಾರ್ವಜನಿಕರಿಗೆ ಮೋಸ:ಬಂಧನ

0
121
loading...

ಧಾರವಾಡ,24: ಓಸಿ ನಂಬರ್ ಬರೆದುಕೊಟ್ಟು ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದ ಮೂವರನ್ನು ಬಂಧಿಸಿದ ಘಟನೆ ವಿದ್ಯಾಗಿರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ. ರವಿವಾರ ಪೇಟೆ ನಿವಾಸಿ ಯುವರಾಜ ಕಲಾಲ, ತೇಜಸ್ವಿನಗರದ ದಾವಲಸಾಬ ಸವಣೂರ ಹಾಗೂ ರಫೀಕ್ ಸವಣೂರ ಬಂಧಿತ ಆರೋಪಿಗಳು.
1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ನಂಬಿಸಿ ಬಿಳಿಹಾಳೆ ಮೇಲೆ ನಂಬರ್ ಬರೆದು ಸಾರ್ವಜನಿಕರಿಂದ ಹಣ ಪಡೆಯುವಾಗ ಪೊಲೀಸ್‍ರ ದಾಳಿಗೆ ಸಿಲುಕಿದ್ದಾರೆ. ಬಂಧಿತರಿಂದ 20 ಸಾವಿರ ನಗದು ಹಣ ಹಾಗೂ ಇತರೇ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಕೊಳ್ಳಲಾಗಿದೆ.

loading...

LEAVE A REPLY

Please enter your comment!
Please enter your name here