ಕಳಸಾ ಬಂಡೂರಿ ಹೋರಾಟ: ಸರಕಾರಕ್ಕೆ ದಾಖಲೆಯತ್ತ ಮನವಿ ಪತ್ರಗಳು

0
77
loading...

ಹುಬ್ಬಳ್ಳಿ, 2: ಉತ್ತರ ಕರ್ನಾಟಕ ಜನತೆಯ ಬಹು ದಿನದ ಕನಸಾದ ಕಳಸಾ ಬಂಡೂರಿ ಮತ್ತು ಮಹದಾಯಿ ನದಿ ತಿರುವ ಯೋಜನೆಗಳ ಅನುಷ್ಟಾನಕ್ಕೆ ಜನ ಸಂಘಟನೆ ಮತ್ತು ರೈತರು, ಸಂಘ ಸಂಸ್ಥೆಗಳಿಂದ ಸರಕಾರಕ್ಕೆ ದಾಖಲೆಯ ಮನವಿ ಪತ್ರಗಳ ಮಹಾಪೂರವೇ ಹರಿದು ಬರುತ್ತಿದೆ. ಆದರೂ ರಾಜ್ಯದ ಮುಖ್ಯಮಂತ್ರಿ, ಮಹಾ ಮತ್ತು ಗೋವಾ ಮುಖ್ಯಮಂತ್ರಿಗಳು ಇದರತ್ತ ನಿರ್ಲಕ್ಷವಹಿಸಿದ್ದಾರೆ.
ಸುಮಾರು ಮೂರು ತಿಂಗಳಿಂದ ರೈತರು, ಸಂಘ-ಸಂಸ್ಥೆ ಹಾಗು ಸಮನ್ವಯ ಸಮಿತಿ ಗಳಿಂದ ಪ್ರತಿಭಟನೆ, ವಿಧ ವಿಧವಾದ ಹೋರಾಟಗಳು ನಗರದಲ್ಲಿ ನಡೆಯುತ್ತಿವೆ. ಮತ್ತು ಸಂಘಟನೆಗಳಿಂದ ಸರಕಾರಕ್ಕೆ ತಹಶೀಲ್ದಾರ ಮುಖಾಂತರ ಮನವಿ ಅರ್ಪಿಸಲಾಗುತ್ತಿದೆ. ಈ ಮನವಿ ಪತ್ರಗಳೇ ಮಹಾಪೂರವಾಗಿ ತಹಶೀಲ್ದಾರರತ್ತ ಹರಿಯುದು ಬರುತ್ತಿದೆ. ಹುಬ್ಬಳ್ಳಿ ನಗರದ ತಹಶೀಲ್ದಾರರಿಗೆ ಕಳಸಾ-ಬಂಡೂರಿ ಮತ್ತು ಮಹದಾಯಿ ನದಿ ಜೋಡನೆಯ ಮನವಿ ಪತ್ರಗಳನ್ನು ಸ್ವೀಕರಿಸುದೇ ದಿನ ನಿತ್ಯದ ಪ್ರಮುಖ ಕೆಲಸವಾಗಿದೆ. ಆದರೂ ರಾಜ್ಯ ಮತ್ತ ಕೇಂದ್ರ ಸರಕಾರಗಳು ಇದರತ್ತ ಹೊರಳಿ ನೋಡುತ್ತಿಲ್ಲ. ಪ್ರಧಾನಿಗಳೂ ಈ ಪ್ರಕರಣದ ಬಗ್ಗೆ ಮೌನವಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಈ ಯೋಜನೆಗಳ ಅನುಷ್ಟಾನ ಕುರಿತು ಕೇಳಿದರೆ ಕೇಂದ್ರದತ್ತ ಬೊಟ್ಟು ತೊರಿಸುತ್ತಾರೆ. ಇನ್ನು ಪ್ರತಿ ಪಕ್ಷಗಳು ಇದನ್ನು ರಾಜಕೀಯ ಅಸ್ತ್ರವಾಗಿ ಪರಸ್ಪರ ಕೆಸರು ಎರಚುವ ಕಾರ್ಯದಲ್ಲಿ ಮಗ್ನವಾಗಿವೆ ಯಾವುದೇ ರಾಜಕೀಯ ಪಕ್ಷಗಳಿಗೆ ಈ ಯೋಜನೆಗಳ ಅನಿಷ್ಟಾನಕ್ಕೆ ರಾಜಕೀಯ ಇಚ್ಛಾ ಶಕ್ತಿ ಇಲ್ಲವಾಗಿದೆ.
ರಾಜಕೀಯ ಪಕ್ಷಗಳ ಈ ತರಹದ ನಡೆ ರೈತರಿ ಬೇಸರವಾಗಿ ರೈತರು ಮತ್ತು ನಗರದ ಜನತೆಯು ಪಕ್ಷಾತೀತ ಸಮನ್ವಯ ಸಮಿತಿ ಮುಖಾಂತರ ನಿರಂತರ ಧರಣಿಯನ್ನು ನಡೆಸುತ್ತದೆ. ಈ ಸಮನ್ವಯ ಸಮಿತಿಯ ಹೋರಾಟಕ್ಕೆ ಸಾಕಷ್ಟು ಸಂಘ-ಸಂಸ್ಥೆ, ಸಿನಿಮಾ ನಟರು, ಸರಕಾರಿ ನೌಕರರ ಸಂಘಗಳು,ಕಾರ್ಮಿಕರ ಸಂಘಗಳು, ಹೀಗೆ ಹಲವಾರು ಸಂಘಟನೆಗಲು ಬೆಂಬಲ ಸೂಚಿಸಿ ಸರಕಾರಕ್ಕೆ ಮನವಿ ಪತ್ರಗಳನ್ನು ಅರ್ಪಿಸುತ್ತಿವೆ. ಈ ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ಸಂಘ ಸಂಸ್ಥೆಗಳ ಹೆಸರನ್ನು ಕೊಡಲಾಗಿದೆ.

ಆದರೂ ಈ ಯೋಜನೆಗಳ ಅನುಷ್ಟಾನ ಆಗುತ್ತದೆಯೋ? ಇಲ್ಲವೋ? ಯಕ್ಷ ಪ್ರಶ್ನೆಯಾಗಿದೆ.
ಕಳೆದ ಮೂರು ತಿಂಗಳಿಂದ ಕಳಸಾ-ಬಂಡೂರಿ ಮತ್ತು ಮಹದಾಯಿ ನದಿ ಜೋಡನೆ ಯ ಕುರಿತು ಮನವಿ ಸಲ್ಲಿಸಿರುವವರ ಪಟ್ಟಿ ಇಂತಿದೆ.ಆಟೋ ರಿಕ್ಷಾ ಮಾಲಿಕ ಹಾಗು ಚಾಲಕರ ಸಂಘ ಹುಬ್ಬಳ್ಳಿ,ಇಂಗಳ ಹಳ್ಳಿ ಗ್ರಾಮಸ್ಥರು, ಧಾರವಾಡ ನಡಿವಾಳರ ಸಂಘ ಹುಬ್ಬಳ್ಳಿ, ಹಳೇ ವಾಹನಗಳ ಮಾರಾಟಗಾರರ ಮತ್ತು ಮಧ್ಯವರ್ತಿಗಳ ಸಂಘ ಹುಬ್ಬಳ್ಳಿ, ಸಂಯುಕ್ತ ಜನತಾ ದಳ ಹುಬ್ಬಳ್ಳಿ, ಜಗದ್ಗುರು ರಂಭಾಪುರಿ ಸಾಂಸ್ಕøತಿಕ ಸಂಘ ಹುಬ್ಬಳ್ಳಿ, ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಹುಬ್ಬಳ್ಳಿ, ಕನ್ನಡ ಕ್ರಾಂತಿದೀಪ ರಾಜ್ಯ ಘಟಕ ಹುಬ್ಬಳ್ಳಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತ ಹಸಿರು ಸೇನೆ ಶರೆವಾಡ ಗ್ರಾಮ, ರಾಜ್ಯ ಕ್ರಿಕೆಟ್ ಮಂಡಳಿ(ಏSಅಂ) ಹುಬ್ಬಳ್ಳಿ, ದ್ರೋಹಿ ಚಲನಚಿತ್ರ ತಂಡ ಹುಬ್ಬಳ್ಳಿ,ಅನುಮತಿ ಪಡೆದ ವಿದ್ಯುತ್ತ ಗುತ್ತಿಗೆದಾರರು ಹುಬ್ಬಳ್ಳಿ,ದ್ವಿಚಕ್ರ ವಾಹನ ದುರಸ್ತಿದಾರರು ಹುಬ್ಬಳ್ಳಿ,ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಹುಬ್ಬಳ್ಳಿ, ಹುಬ್ಬಳ್ಳಿ ನಗರದ ಸುತ್ತಮುತ್ತಲಿನ ಗ್ರಾಮಗಳ ಪಕ್ಷಾತೀತ ರೈತರ ಸಂಘಟನೆಗಳು, ಉತ್ತರ ಕರ್ನಾಟಕ ಜುವೆಲ್ಲರ್ಸ್ ಸಂಘ ಹುಬ್ಬಳ್ಳಿ,ಸರಾಫ್ ಸಂಘ ಹುಬ್ಬಳ್ಳಿ,ಸಮತಾ ಸೇನಾ ಹುಬ್ಬಳ್ಳಿ,ವಕೀಲರ ಸಂಘ ಹುಬ್ಬಳ್ಳಿ,ಸೇವಾಲಾಲ್ ಬಂಜಾರ(ಲಮಾಣಿ) ಹಿತವರ್ಧಕ ಸಂಘ ಹುಬ್ಬಳ್ಳಿ,ಶಾಲಾ-ಕಲೇಜು ಶಿಕ್ಷಕರ ಸಂಘಟನೆ ಹೋರಾಟ ಸಮನ್ವಯ ಸಮಿತಿ ಹುಬ್ಬಳ್ಳಿ,ಅಕ್ಕನ ಬಳಗ ಹುಬ್ಬಳ್ಳಿ,ಸಮತಾ ಸೈನಿಕ ದಳ ಹುಬ್ಬಳ್ಳಿ,ಕಸ್ತೂರಿ ಕರ್ನಾಟಕ ಜನಪರ ಹೋರಾಟ ಸಮಿತಿ ಹುಬ್ಬಳ್ಳಿ,ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರ ಸಂಘ, ಹುಬ್ಬಳ್ಳಿ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಹುಬ್ಬಳ್ಳಿ, ರಾಜ್ಯ ಮುಸ್ಲಿಂ ನೌಕರರ ಸಾಂಸ್ಕøತಿಕ ಸಂಘ ಹುಬ್ಬಳ್ಳಿ,ಸೀನಿಯರ್ ಸಿಟಿಜನ್ ಕ್ಲಬ್ ಹುಬ್ಬಳ್ಳಿ, ಗೌವಳಿ ಸಮಾಜ ಸಂಘ ಹುಬ್ಬಳ್ಳಿ, ಹು_ಧಾ ಗೂಡ್ಸ್ ಟಾನ್ಸಪೋರ್ಟರ್ಸ್ ಆಯಂಡ್ ಲಾರಿ ಓನರ್ಸ್ ಅಸೋಸಿಯೇಶನ್ ಹುಬ್ಬಳ್ಳಿ, ಸವಿತಾ ಸಮಾಜ ಹುಬ್ಬಳ್ಳಿ, ಸಮಸ್ತ ರಾಜಸ್ಥಾನ ಸಮಾಜ ಹುಬ್ಬಳ್ಳಿ,ಅಖಿಲ ಭಾರತ ವೀರಶೈವ ಸಜ್ಜ ಸಮಾಜ ಸುಧಾರಣಾ ಸಂಘ ಹುಬ್ಬಳ್ಳಿ,ಕರ್ನಾಟಕ ನವನಿರ್ಮಾಣ ವೇದಿಕೆ ಹುಬ್ಬಳ್ಳಿ,ಕೆ.ಎಲ್.ಇ. ಯುನವರ್‍ಸಿಟಿ ಆಫ್ ಪಾರ್ಮಸಿ ಹುಬ್ಬಳ್ಳಿ,ಹೆಬಸೂರು, ಕಿರೇಸೂರ ಗಾರಮಗಳ ರೈತರು,ಬಿವಿಬಿ ಇಂಜನಿಯರಿಂಗ್ ಕಾಲೇಜ ವಿದ್ಯಾರ್ಥಿಗಳು ಹುಬ್ಬಳ್ಳಿ,ಕೇಶ್ವಾಪುರ ಹಾಗು ಬೆಂಗೇರಿ ರೈತ ಸಂಘ, ಉತ್ತರ ಕರ್ನಾಟಕ ರಂಗ ಭೂಮಿ ಕಲಾವಿದರ ಸಂಘ ಹುಬ್ಬಳ್ಳಿ,ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಧಾರವಾಡ, ಭಾರತೀಯ ಮಜ್ದೂರ ಸಂಘ ಹುಬ್ಬಳ್ಳಿ, ಸಹರಾ ಎಜುಕೇಶನ್ & ವೆಲ್ ಫೇರ್ ಸೊಸೈಟಿ ಹುಬ್ಬಳ್ಳಿ,ಜಗದೀಶ ಆಶ್ರಯ ನಿವಾಸಿಗಳ ಹಿತ ರಕ್ಷಣಾ ಸಮಿತಿ ಹುಬ್ಬಳ್ಳಿ, ಎಸ್.ಎಸ್.ಕೆ ಸಮಾಜ ಪಂಚ ಕಮೀಟಿ ಹುಬ್ಬಳ್ಳಿ,ಪದ್ಮಶಾಲಿ ನೇಕಾರ ಸಮಾಜ ಸಂಘ ಹುಬ್ಬಳ್ಳಿ, ಜಯ ಭಾರತ ಜನ ಸೇವಾ ಸಂಘ ಹುಬ್ಬಳ್ಳಿ, ಅಂಬೇಡ್ಕರ್ ಅಲ್ಪ ಸಂಖ್ಯಾತ ದಲಿತ ಹಾಗು ಹಿಂದುಳಿದ ವರ್ಗಗಳ ಸಂಘಟನಾ ಸಮಿತಿ ಹುಬ್ಬಳ್ಳಿ, ಲಕ್ಷ್ಮಣ ಹಿರೇಕೆರೂರ ಆಟೋ ಚಾಲಕರ ಸಂಘ ಹುಬ್ಬಳ್ಳಿ, ಗಬ್ಬೂರು ಜನಪರ ಹೋರಾಟ ಸಮಿತಿ ಗಬ್ಬೂರು, ಸದ್ಗುರು ಸಿದ್ದಾರೂಢ ಸೇನಾ ಸಮಿತಿ ಹುಬ್ಬಳ್ಳಿ,ಜನಪರ ಅಭಿವೃದ್ಧಿ ಹೋರಾಟ ಸಮಿತಿ ಹುಬ್ಬಳ್ಳಿ, ಅಕಿಲ ಕರ್ನಾಟಕ ಲಿಂಗಾಯಿತ ಧರ್ಮ ಮಹಾ ಸಭಾ ಹಾಗು ವಿಶ್ವ ಕನ್ನಡ ಬಳಗ ಹುಬ್ಬಳ್ಳಿ,ಸಿದ್ದನ ಪೇಟೆ ಗಣೇಶೋತ್ಸವ ಸಮಿತಿ ಹುಬ್ಬಳ್ಳಿ,ಭಾರತಾಂಬೆ ಮಹಿಳಾ ಮಂಡಳ ,ಮಹಿಳಾ ಅಭಿವೃದ್ಧಿ ಸಂಘ ಹುಬ್ಬಳ್ಳಿ, ಕುರುಬ ಸಮಾಜ ಹುಬ್ಬಳ್ಳಿ, ಕನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಮತ್ತು ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘ ಹುಬ್ಬಳ್ಳಿ,ವಾ.ಕ.ರಾ.ರ.ಸಾ.ಸಂ.ನೌಕರರ ಮತ್ತು ನಿವೃತ್ತ ನೌಕರರ ಸಂಘ ಹುಬ್ಬಳ್ಳಿ, ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಹುಬ್ಬಳ್ಳಿ, ಧಾರವಾಡ ಅರ್ಚಕ ಪುರೋಹಿತ ಜಂಗಮ ಅಭಿವೃದ್ಧಿ ಸಂಘ ಹುಬ್ಬಳ್ಳಿ, ಕೆ.ಪಿ.ಸಿ.ಸಿ. ಅಲ್ಪಂಖ್ಯಾತ ಘಟಕ ಬೆಂಗಳೂರು.

ಹೀಗೆ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಯಾವಾಗ ಈ ಯೋಜನೆಗಳು ಅನುಷ್ಟಾನವಾಗುತ್ತದಯೇ ಕಾದು ನೋಡ ಬೇಕು.

loading...

LEAVE A REPLY

Please enter your comment!
Please enter your name here