ಕೇಂದ್ರದಿಂದ ಬರುವ ಅನುದಾನಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಸೇರಬೇಕು: ಮಹಾಂತೇಶ ಕವಟಗಿಮಠ

0
27
loading...

 

ರಾಯಬಾಗ 13: ವಿಧವೆಯರಿಗೆ, ಅಂಗವಿಕಲರಿಗೆ ಮತ್ತು ಕಡು ಬಡವರಿಗಾಗಿ ಇರುವ ಸರ್ಕಾರದ ಸವಲತ್ತುಗಳು ಅರ್ಹ ಫಲಾನುಭವಿಗಳಿಗೆ ಸಿಗಬೇಕು. ಕೇಂದ್ರದಿಂದ ಬರುವ ಅನುದಾನಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಸೇರಬೇಕು. ಎಂದು ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ಮಂಗಳವಾರ ತಾಲೂಕಿನ ನಸಲಾಪೂರ ಗ್ರಾಮದಲ್ಲಿ ನಡೆದ ಬಸವ ವಸತಿ ಯೋಜನೆ, ವಿಧವೆಯರಿಗಾಗಿ ಮತ್ತು ಇಂದಿರಾ ಆವಾಸ ಯೋಜನೆಯಡಿ ಮಂಜೂರಾದ ಮನೆಗಳ ಹಕ್ಕುಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಭ್ರಷ್ಟಾಚಾರ ನೀರ್ಮೂಲನೆ ಯಾಗಬೇಕಾದರೆ ರಮೇಶಕುಮಾರ ವರದಿ ಜಾರಿಗೆ ಬರಬೇಕು. ವರದಿ ಸಲ್ಲಿಸಿ ಒಂದೂವರೆ ವರ್ಷಕಳೆದರೂ ವರದಿ ಜಾರಿಯಾಗಿಲ್ಲ. ರಾಜ್ಯದ ಕಾಂಗ್ರೇಸ್ ಪಕ್ಷದ ಮುಖಂಡರಿಗೆ ನಿಜವಾಗಿಯೂ ಭ್ರಷ್ಟಾಚಾರ ನೀರ್ಮೂಲನೆ ಮಾಡುವ ಸದುದ್ದೇಶವಿದ್ದರೆ, ವರದಿಯನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು ಎಂದು ಒತ್ತಾಯಮಾಡುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಯಬಾಗ ಶಾಸಕ ಡಿ.ಎಮ್ ಐಹೊಳೆ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದಂತೆ ಬಸವ ವಸತಿ ಯೋಜನೆಯಡಿ 60 ವಿಧವೆಯರಿಗಾಗಿ ಮತ್ತು ಇಂದಿರಾ ಆವಾಸ ಯೋಜನೆಯಡಿ 48 ಮನೆಗಳನ್ನು ಗ್ರಾಮಕ್ಕೆ ನೀಡಲಾಗಿದೆ. ಅವುಗಳ ಹಕ್ಕುಪತ್ರಗಳನ್ನು ಇಂದು ವಿತರಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದು ಮನೆಗಳನ್ನು ನಿರ್ಮಿಸಿಕೊಳ್ಳಬೇಕು. ಹಾಗೇಯೇ ಗ್ರಾಮದ ಪ್ರತಿಯೊಬ್ಬರೂ ಶೌಚಗೃಹಗಳನ್ನು ನಿರ್ಮಿಸಿ ಗ್ರಾಮವನ್ನು ಸ್ವಚ್ಛ, ಸುಂದರ ಗ್ರಾಮವನ್ನಾಗಿಸುವಲ್ಲಿ ಗ್ರಾಮಪಂಚಾಯಿತಿ ಸದಸ್ಯರೊಂದಿಗೆ ಕೈಜೊಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಡಿ.ಕೆ.ಎಸ್.ಎಸ್.ಕೆ ಉಪಾಧ್ಯಕ್ಷ ಭರತೇಶ ಬನವಣೆ, ಗ್ರಾ.ಪಂ ಅಧ್ಯಕ್ಷ ಬಾಳಾಸಾಹೇಬ ಸಮಾಜೆ, ಉಪಾಧ್ಯಕ್ಷೆ ಸುಜಾತಾ ಕಾಂಬಳೆ, ತಾತ್ಯಾಸಾಹೇಬ ಕಾಟೆ, ಕೆ.ಕೆ ಮೈಶಾಳೆ, ಸದಾಶಿವ ಘೋರ್ಪಡೆ, ಅಂಕುಶ ಜಾಧವ, ಜೈಪಾಲ ಬನವನೆ, ಬಾಳಾಸಾಬ ಪಾಟೀಲ, ರಾಜಗೌಡ ಪಾಟೀಲ ಪಾಸಗೌಡಾ ಪಾಟೀಲ ಸೇರಿದಂತೆ ಮೊದಲಾದವರು ಇದ್ದರು.

loading...

LEAVE A REPLY

Please enter your comment!
Please enter your name here