ಕೌಲಾಪುರವಾಡಾ ಗ್ರಾಮಕ್ಕೆ ಸಚಿವ ಜಾರಕಿಹೊಳಿ ಭೇಟಿ

0
13
loading...

 

ಖಾನಾಪುರ: ತಾಲೂಕಿನ ಕೌಲಾಪುರವಾಡಾ ಗ್ರಾಮಕ್ಕೆ ಇತ್ತೀಚೆಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಗ್ರಾಮದ ಬಳಿ ಇರುವ ಖಾಸಗಿ ಪೌಲ್ಟ್ರಿ ಫಾರ್ಮಿನಿಂದ ನಿರ್ಮಾಣಗೊಳ್ಳುತ್ತಿರುವ ನೊಣಗಳ ಹಾವಳಿ ತಡೆಗಟ್ಟುವ ಕುರಿತು ಪರಿಶೀಲನೆ ನಡೆಸಿದರು.

ಗ್ರಾಮದ ವಿವಿಧ ಬಡಾವಣೆಗೆ ಮತ್ತು ಪೌಲ್ಟ್ರಿ ಫಾರ್ಮಿಗೆ ತೆರಳಿ ಅಲ್ಲಿಯ ಸನ್ನಿವೇಶವನ್ನು ವೀಕ್ಷಿಸಿದ ಸಚಿವರು ಪೌಲ್ಟ್ರಿ ಫಾರ್ಮ್ ಸಿಬ್ಬಂದಿಯಿಂದ ಮಾಹಿತಿ ಪಡೆದು ನಂತರ ಗ್ರಾಮಸ್ಥರಿಂದ ಅವರ ಸಮಸ್ಯೆಯನ್ನು ಆಲಿಸಿದರು. ಈ ಸಂದರ್ಭದಲ್ಲಿ ಇರ್ಫಾನ್ ತಾಳಿಕೋಟಿ, ತಹಸೀಲ್ದಾರ್ ಎಂ ಎನ್ ಬಳಿಗಾರ, ತಾಪಂ ಇಒ ಪ್ರವೀಣ ಕಟ್ಟಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ಡೊಂಬರ, ತಾಪಂ ಲೆಕ್ಕಾಧಿಕಾರಿ ಸಂದೀಪ ಮಾಳಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕೌಲಾಪುರವಾಡಾ ಗ್ರಾಮಸ್ಥರು ಇದ್ದರು.

loading...

LEAVE A REPLY

Please enter your comment!
Please enter your name here