ಕ್ರೀಡೆಯಿಂದ ಮಾನಸಿಕ ನೆಮ್ಮದಿ: ಪವಾರ್

0
22
loading...

29Dandelijpg2ದಾಂಡೇಲಿ,30: ದಾಂಡೇಲಿ ಬ್ಯಾಡ್‍ಮೆಂಟ್ ಅಸೋಶಿಯೇಶನ್, ಹಾಗೂ ಲಯನ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್‍ಮೆಂಟನ್ ಕ್ರೀಡಾಕೂಟಕ್ಕೆ ದಾಂಡೇಲಿ ಅರಕ್ಷಕ ಉಪ ವಿಭಾಗದ ಉಪ ಅಧೀಕ್ಷಕರಾದ ದಯಾನಂದ ಪವಾರವರು ದೀಪ ಬೆಳಗಿಸಿ, ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶುಭ ಹಾರೈಸಿ ಮಾತನಾಡಿದ ಅವರು ಕ್ರೀಡೆಯಿಂದ ದೈಹಿಕ ಸಾಮಥ್ರ್ಯ ಹೆಚ್ಚುವ, ಮಾನಸಿಕ ನೆಮ್ಮದಿ ದೊರೆಯುವ ಜೊತೆಗೆ ಸೌಹಾರ್ದ ವಾತಾವರಣವೂ ನಿರ್ಮಾಣವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಶಿರಸಿ ಅರ್ಬನ್ ಬ್ಯಾಂಕಿನ ನಿರ್ದೇಶಕ ಟಿ.ಎಸ್. ಬಾಲಮಣಿ (ಬೇಟಾ) ರವರು ಈ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕ್ರೀಡಾ ಕೂಟ ನಡೆಸುವಂತಾಗಬೇಕೆಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಾಂಡೇಲಿ ಬ್ಯಾಡ್‍ಮೆಂಟನ್ ಅಸೋಶಿಯೇಶನ್ನಿನ ಅಧ್ಯಕ್ಷ ಪ್ರಕಾಶ ಶೆಟ್ಟಿಯವರು ಸ್ಪರ್ದಾಳುಗಳು ಕ್ರೀಡಾ ಮನೋಭಾವವದಿಂದ ಆಡಿ ಪಂದ್ಯಾಟ ಯಶಸ್ವಿಗೊಳೀಸುವಂತೆ ಮನವಿ ಮಾಡಿದರು. ಈ ಕ್ರೀಡಾಕೂಟದಿಂದ ಉಳಿದ ಹಣವನ್ನು ಲಯನ್ಸ್ ಶಿಕ್ಷಣ ಸಂಸ್ಥೆಯ ಶಾಲೆಗೆ ದೇಣಿಗೆ ನೀಡಲಾಗುವುದೆಂದು ಹೇಳಿ ಸಹಕರಿಸಿದವರನ್ನು ಸ್ಮರಿಸಿದರು.
ವೇದಿಕೆಯಲ್ಲಿ ಗುತ್ತಿಗೆದಾರರಾದ ಶಿವದಾಸ ಥಾಮ್ಸೆ, ಲಯನ್ಸ್ ಕ್ಲಬ್ ಅಧ್ಯಕ್ಷ ಎನ್. ವಿ. ಪಾಟೀಲ ಬ್ಯಾಡ್‍ಮೆಂಟನ್ ಅಸೋಶಿಯೇಶನ್ನಿನ ಉಪಾಧ್ಯಕ್ಷ ಪ್ರಮೋದ ಶಾನಭಾಗ, ಕಾರ್ಯದರ್ಶಿ ಕೆ. ಕುಮಾರ ಮುಂತಾದವರು ಉಪಸ್ಥಿತರಿದ್ದತರು.
ಕೆ. ಕುಮಾರ ಸ್ವಾಗತಿಸಿದರು. ಎನ್.ವಿ. ಪಾಟೀಲ ವಂದಿಸಿದರು. ಪ್ರಾಣೇಶ ನಿರೂಪಿಸಿದರು. ಜಿಲ್ಲೆಯೆಲ್ಲಡೆಯಿಂದ 50 ಕ್ಕೂ ಹೆಚ್ಚು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

.

loading...

LEAVE A REPLY

Please enter your comment!
Please enter your name here