ಘೋಟ್ನೇಕರ್ ಅವರ ಸೂನ್ಯೆ ಫಲಿತಾಂಶದ ಪರಿಶ್ರಮದ ಪರಿಣಾಮವೇ ಉಳ್ವೇಕರ್ ಗೆಲುವಿಗೆ ಕಾರಣ : ಭಾಸ್ಕರ ನಾರ್ವೇಕರ್

0
22
loading...

29Ankola6ಅಂಕೋಲಾ,30 : ಎಸ್.ಎಲ್. ಘೋಟ್ನೇಕರ್ ಅವರು ಕಳೆದ 6 ವರ್ಷದಲ್ಲಿ ಮಾಡಿದ ಸೂನ್ಯೆ ಫಲಿ ತಾಂಶದ ಪರಿಶ್ರಮದ ಪರಿಣಾಮವೇ ಡಿ.27 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆ ಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವಿಗೆ ಮುಖ್ಯ ಕಾರಣ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಹಾಗೂ ಪುರಸಭೆ ಅಧ್ಯಕ್ಷ ಭಾಸ್ಕರ ಕೇ. ನಾರ್ವೇಕರ್ ಹೇಳಿದರು.

ಅವರು ಇಂದು (ಭಾನುವಾರ) ಶ್ರೀ ಶಾಂತದುರ್ಗಾ ದೇವಸ್ಥಾನದ ಸಭಾಭವನದಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ ನಮ್ಮ ಕ್ಷೇತ್ರದಲ್ಲಿ ಉಳ್ವೇಕರವರು ಬಿಜೆಪಿ ಪಕ್ಷದ ಪ್ರಮುಖರಾಗಿ ಕಳೆದ ಹಲವು ವರ್ಷಗಳಿಂದ ಪಕ್ಷಕ್ಕೆ ನಿಷ್ಠಾವಂತರಾಗಿ ಕಾರ್ಯನಿರ್ವಹಿಸದ್ದು, ಈಗ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿರುವ ಪಕ್ಷನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಅರೆತು ಪಕ್ಷದ ರಾಷ್ಟ್ರೀಯ ನಾಯಕರು ಇವರನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ನೇಮಕಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ನಾವು ನಿವೆಲ್ಲರು ಇವರ ಗೆಲುವಿಗಾಗಿ ಶಕ್ತಿಮೀರಿ ಶ್ರಮಿಸೋಣ ಎಂದರು.

ಬಿಜೆಪಿ ತಾಲೂಕಾಧ್ಯಕ್ಷ  ಜಗದೀಶ  ನಾಯಕ ಮೊಗಟಾ ಅವರು ಮಾತನಾಡಿ ಬಿಜೆಪಿಯಲ್ಲಿ ಹಲವಾ ವರು ವರ್ಷಗಳಿಂದ ದುಡಿದು ಅಪಾರವಾದ ಅನುಭವನ್ನು ಹೊಂದಿದ್ದಾರೆ. ಆದರೆ ಕಾಂಗ್ರೆಸ್ ಸರಕಾ ರವು ಆರ್ಥಿಕ ವರ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ರಾಪಂ.ಗಳಿಗೆ ಅನುದಾನ ನೀಡಿಲ್ಲಾ. ಗ್ರಾ.ಪಂ. ಪ್ರತಿನಿಧಿಗಳು ಈ ಬಾರಿ ಉಳ್ವೇಕರ್ ಅವರಿಗೆ ಮತ ನೀಡಲಿದ್ದಾರೆ ಎಂದರು.

ವಿ.ಪ.ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರು ಮಾತನಾಡಿ ನನ್ನ ಗೆಲವು ಖಚಿತ. ಬಿಜೆಪಿ ರಾಷ್ಟ್ರ ಹಾಗೂ ರಾಜ್ಯ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟು ಟಿಕೇಟ್ ನೀಡಿದ್ದಾರೆ. ಪಕ್ಷದ ಕಾರ್ಯಕ ರ್ತರು ಹಾಗೂ ಗ್ರಾ.ಪಂ. ಪುರಸಭೆ, ತಾ.ಪಂ. ಪ್ರತಿನಿಧಿಗಳು ನನ್ನ ಗೆಲುವಿಗೆ ಪ್ರಯತ್ನಿಸಿ ನನನ್ನು ಗೆಲ್ಲಿಸುತ್ತಾರೆ ಎಂದು ಭರವಸೆ ಇದೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸೂರಜ್ ನಾಯ್ಕ (ಸೋನಿ), ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ರಾಮರಾವ್ ವಿ.ರಾಯ್ಕರ ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ಪ್ರಮುಖ ಮಯೂರ ನಾಯಕ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ರಾಘವೇಂದ್ರ ಭಟ್ ಉಪಸ್ಥಿತರಿದ್ದರು. ಸಂಜು ನಾಯ್ಕ ಬಾವಿಕೇರಿ, ಜಯ ಬಾಲಕೃಷ್ಣ ನಾಯ್ಕ ವಂದಿಸಿದರು.

ಪುರಸಭೆ ಸದಸ್ಯ ನಾಗೇಂದ್ರ ನಾಯ್ಕ, ಕೃಷ್ಣಕುಮಾರ ಮಹಾಲೆ, ಭಾವಿಕೇರಿ ಗ್ರಾ.ಪಂ. ಅಧ್ಯಕ್ಷ ಸರಿತಾ ಬಲೇಗಾರ, ಸದಸ್ಯರಾದ ಶ್ರೀಕಾಂತ ದುರ್ಗೇಕರ್, ರಾಜೇಶ್ವರಿ ಕೇಣಿಕರ್, ಮಹಾಬಲೇಶ್ವರ ಬಿ. ಗೌಡ, ಅಗಸೂರು ಗ್ರಾ.ಪಂ. ಸದಸ್ಯ ಗೋಪು ಅಡ್ಲೂರು, ಹಿಲ್ಲೂರು ಗ್ರಾ.ಪಂ. ಸದಸ್ಯ ಸುಚಿತ್ ನಾಯಕ, ಬೊಬ್ರುವಾಡ ಗ್ರಾ.ಪಂ. ಅಧ್ಯಕ್ಷ ಚಂದ್ರಕಾಂತ ನಾಯ್ಕ ಸೇರಿದಂತೆ ನೂರಕ್ಕೂ ಹೆಚ್ಚು ಜನರು ಉಪಸ್ಥಿತ ರಿದ್ದರು.

loading...

LEAVE A REPLY

Please enter your comment!
Please enter your name here